ರ್‍ಯಾಲಿ ನಡೆಸಿದರೇ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವ ಹುನ್ನಾರ

KannadaprabhaNewsNetwork | Published : Jan 18, 2025 12:47 AM

ಸಾರಾಂಶ

ಬಿಜೆಪಿ ಮುಖಂಡರ ಮೇಲೆ ಈಗಾಗಲೇ ದುರುದ್ದೇಶ ಪೂರ್ವಕವಾಗಿ ಕೇಸ್ ದಾಖಲಾಗಿವೆ. ರ್‍ಯಾಲಿ ನಡೆಸಿದರೇ ಮತ್ತಷ್ಟು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವ ಹುನ್ನಾರವಿದೆ. ಹೀಗಾಗಿ ಬೈಕ್ ಹಾಗೂ ಕಾರು ರ್‍ಯಾಲಿ ರದ್ದುಗೊಳಿಸಲಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಬಿಜೆಪಿ ಮುಖಂಡರ ಮೇಲೆ ಈಗಾಗಲೇ ದುರುದ್ದೇಶ ಪೂರ್ವಕವಾಗಿ ಕೇಸ್ ದಾಖಲಾಗಿವೆ. ರ್‍ಯಾಲಿ ನಡೆಸಿದರೇ ಮತ್ತಷ್ಟು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವ ಹುನ್ನಾರವಿದೆ. ಹೀಗಾಗಿ ಬೈಕ್ ಹಾಗೂ ಕಾರು ರ್‍ಯಾಲಿ ರದ್ದುಗೊಳಿಸಲಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.

ಪಟ್ಟಣದ ತಮ್ಮ ಫಾರ್ಮ್‌ಹೌಸ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ತಾಲೂಕು ಅಧ್ಯಕ್ಷ ಸೇರಿ ನಾಲ್ವರ ಮೇಲೆ ರಾಜಕೀಯವಾಗಿ ಕೇಸ್ ದಾಖಲು ಮಾಡಿದ್ದಾರೆ. ಕೇಸ್ ದಾಖಲೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೈಕ್ ರ್‍ಯಾಲಿ ಹಮ್ಮಿಕೊಳ್ಳಲು ಯೋಜನೆ ಇತ್ತು. ಪಿಎಸೈ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ರಾಜಕೀಯವಾಗಿ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ದಾಖಲು ಮಾಡಿದ್ದರು. ಹೀಗಾಗಿ ಮತ್ತೆ ವಿರೋಧಿ ರಾಜಕೀಯ ಬಣವು ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಕೇಸ್ ಆಗಬಾರದೆಂಬ ದೃಷ್ಟಿಯಿಂದ ಒಂದು ಹೆಜ್ಜೆ ಹಿಂದೆ ಹಿಟ್ಟಿದ್ದೇವೆ. ಈ ಮಾತ್ರಕ್ಕೆ ನಾವು ಎದರಿದ್ದೇವೆ ಎಂಬುವುದಲ್ಲ ಕಾನೂನು ತಲೆಬಾಗಿದ್ದೇವೆ ಎಂದರು.ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ ಪಿಎಸೈ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುವ ದಿನಗಳು ಬಹಳ ದೂರವಿಲ್ಲ. ಸರ್ಕಾರ ಬರುತ್ತೆ, ಹೋಗುತ್ತೆ ಪೊಲೀಸರು ಕಾನೂನಿನ ಅಡಿ ಕಾರ್ಯನಿರ್ವಹಿಸಬೇಕು ಹೊರತು ರಾಜಕಾರಣಿಗಳ ಕೈಗೊಂಬೆಯಾಗಿ ಅಲ್ಲ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಕಾಂಗ್ರೆಸ್ ಶಾಸಕನಾಗಿದ್ದ ವೇಳೆ ಪೊಲೀಸ್ ಅಧಿಕಾರಿಯಾದ ಕಲ್ಲಪ್ಪ, ಗಣಪತಿ ಅಂತಹ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬಕ್ಕೆ ಧೈರ್ಯ ತುಂಬಿದ ಏಕೈಕ ಶಾಸಕ ನಾನು. ಆಗಿನ ಸಿಎಂ, ಸಚಿವರು, ಡಿಸಿ, ತಹಸೀಲ್ದಾರ್‌ ಯಾರು ಸಹ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಜತೆ ಸಂತಾಪ ಸೂಚಿಸಲಿಲ್ಲ, ನಿವಾಸಕ್ಕೆ ಹೋಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಹೋಗಿ ₹31 ಲಕ್ಷ ಪರಿಹಾರ ನೀಡಿ ವೈಯುಕ್ತಿಕವಾಗಿ ₹8 ಲಕ್ಷ ಕಲ್ಲಪ್ಪ ಕುಟುಂಬಕ್ಕೆ ನೀಡಿದ್ದೇನೆ ಎಂದರು. ಈಗ ಮುದ್ದೇಬಿಹಾಳ ಬಿಜೆಪಿ ಕಾರ್ಯಕರ್ತರ ಮೇಲೆ ಪಿಎಸೈ ಮೂಲಕ ಕೇಸ್ ಮಾಡಿಸಿದ ಯಾವ ರಾಜಕಾರಣಿಗಳು ಮುಂದೆ ಪಿಎಸೈ ಸಂಜೀವ್ ತಿಪ್ಪಾರೆಡ್ಡಿ ಜತೆ ನಿಲ್ಲಲ್ಲ. ಆಗ ನಿಮ್ಮ ಜತೆ ನಿಲ್ಲುವವನು ನಡಹಳ್ಳಿ ಮಾತ್ರ. ಕಾರ್ಯಕರ್ತರ ಮೇಲೆ ದಾಖಲಿಸಿದ ಸುಳ್ಳು ಕೇಸ್ ವಾಪಸ್ ತೆಗೆದುಕೊಳ್ಳಿ. ಇಲ್ಲದಿದ್ದರೇ 3 ತಿಂಗಳಲ್ಲಿ ಪಿಎಸೈ ನೀಡಿದ ಕೇಸ್‌ನ್ನು ಸುಳ್ಳು ಮಾಡಿ ತೋರಿಸುತ್ತೇನೆ ಎಂದು ಗುಡುಗಿದರು.ಶಾಸಕ ಸಿ.ಎಸ್ ನಾಡಗೌಡ ಅವರು ಗೋ ಮುಖ ವ್ಯಾಘ್ರವಿದ್ದಂತೆ. ಶಾಸಕರ ಮಾತಿನಂತೆ ಪಿಎಸೈ ನಡೆದುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸುತ್ತೀರಿ. ಸಾರ್ವಜನಿಕರ ನ್ಯಾಯಕ್ಕಾಗಿ ಹೋರಾಡುವ ಮನೋಭಾವ ನನ್ನದು, ಸ್ವಾರ್ಥಕ್ಕಾಗಿ ಎಂದೂ ಬೀದಿಗೆ ಇಳಿದಿಲ್ಲ. ಪಿಎಸೈ ಸಂಜೀವ್ ತಿಪ್ಪಾರೆಡ್ಡಿ ನಿಜವಾಗಿ ನೈತಿಕತೆಯ ಪೊಲೀಸ್ ಅಧಿಕಾರಿ ಆಗಿದ್ದರೇ ಸುಳ್ಳು ಕೇಸ್ ವಾಪಸ್‌ ತೆಗೆದುಕೊಳ್ಳಬೇಕು. ಯಾವುದೇ ಪೊಲೀಸ್ ಅಧಿಕಾರಿಗಳಾಗಲಿ, ರಾಜಕಾರಣಿಗಳ ಕೈಗೊಂಬೆ ರೀತಿ ವರ್ತಿಸಬೇಡಿ ಎಂದರು.ಈ ಸಂದರ್ಭದಲ್ಲಿ ಮುನ್ನಾ ಧನಿ, ಮಹಾಂತಗೌಡ ಪಾಟೀಲ್, ಮಲಕೇಂದ್ರಗೌಡ ಪಾಟೀಲ, ಕೆಂಚಪ್ಪಗೌಡ ಬಿರಾದಾರ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಲಕ್ಷ್ಮಣ್ ಬಿಜ್ಜೂರ, ಸಂಗಮ್ಮ ದೇವರಹಳ್ಳಿ, ಗೌರಮ್ಮ ಹುನಗುಂದ, ಸಿದ್ದರಾಜು ಹೊಳಿ ಸೇರದಂತೆ ಕಾರ್ಯಕರ್ತರು ಇದ್ದರು.ಪಟ್ಟಣದ ಪ್ರತಿಷ್ಠಿತ ವೈದ್ಯರಿಗೆ ನೀನು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದೀಯಾ ಎಂದು ಕೊಲೆ ಬೆದರಿಕೆ ಕರೆ ಬರುತ್ತಿದ್ದಾವೆ. ಇದಕ್ಕೆಲ್ಲ ಪಿಎಸೈ ಕಾರಣ. ಒಂದು ಪಕ್ಷದ ರಾಜಕಾರಣಿಗಳ ಕೈಗೊಂಬೆಯಾಗಿರುವುದರಿಂದ ವೈದ್ಯರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಕರೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ವೈದ್ಯರು ಕೇಸ್ ದಾಖಲು ಮಾಡಲಿದ್ದಾರೆ. ಈ ಕುರಿತು ನಮ್ಮ ತಂದೆ ಹತ್ತಿರ ವೈದ್ಯರು ಹೇಳಿಕೊಂಡಿದ್ದಾರೆ.

-ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕ.

Share this article