ಹಿಂದೂ ಯುವತಿಯರ ಕುಲಗೆಡಿಸುವ ಹುನ್ನಾರ ನಡೆಯುತ್ತಿದೆ: ಪ್ರಮೋದ ಮುತಾಲಿಕ್

KannadaprabhaNewsNetwork |  
Published : Sep 26, 2025, 01:00 AM IST
ಮುಂಡಗೋಡ: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತ್ರತ್ವದಲ್ಲಿ ವಿವಿಧ ಹಿಂದುಪರ ಸಂಘಟನೆ ಕಾರ್ಯಕರ್ತರು ಗುರುವಾರ ಮುಕಳೆಪ್ಪ ಕ್ಯಾತಿಯ ಯೂಟೂಬರ್ ಖ್ವಾಜಾ ಬಂದೆ ನವಾಜ್ ನೊಂದಿಗೆ ಹಿಂದು ಯುವತಿಯನ್ನು ಕಾನೂನು ಬಾಹಿರವಾಗಿ ವಿವಾಹ ನೋಂದಣಿ ಮಾಡಿದ ಮುಂಡಗೋಡ ಉಪ ನೋಂದಣಾಧಿಕಾರಿ ಮತ್ತು ಸಿಬ್ಬಂದಿಗಳನ್ನು ತಕ್ಷಣ ಅಮಾನತು ಮಾಡಿ ಇದರಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೊಳಪಡಿಸಬೇಕಲ್ಲದೇ  ಅಕ್ರಮವಾಗಿ ನಡೆದಿರುವ ವಿವಾಹ ನೋಂದಣಿ ರದ್ದು ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಲವ್ ಜಿಹಾದ್ ಅಡಿಯಲ್ಲಿ ಹಿಂದೂ ಯುವತಿಯರನ್ನು ಪ್ರೀತಿ, ಪ್ರೇಮ ಇಷ್ಕ್ ಎಂದು ಮೋಸದಿಂದ ಪುಸಲಾಯಿಸಿ ವ್ಯವಸ್ಥಿತವಾಗಿ ಬುರ್ಕಾ ಹಾಕಿಸಿ, ಗೋಮಾಂಸ ತಿನ್ನಿಸಿ ಕುಲಗೆಡಿಸುವ ಹುನ್ನಾರ ನಿಂರಂತರವಾಗಿ ನಡೆಯುತ್ತಿದೆ.

ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮುಂಡಗೋಡ

ಲವ್ ಜಿಹಾದ್ ಅಡಿಯಲ್ಲಿ ಹಿಂದೂ ಯುವತಿಯರನ್ನು ಪ್ರೀತಿ, ಪ್ರೇಮ ಇಷ್ಕ್ ಎಂದು ಮೋಸದಿಂದ ಪುಸಲಾಯಿಸಿ ವ್ಯವಸ್ಥಿತವಾಗಿ ಬುರ್ಕಾ ಹಾಕಿಸಿ, ಗೋಮಾಂಸ ತಿನ್ನಿಸಿ ಕುಲಗೆಡಿಸುವ ಹುನ್ನಾರ ನಿಂರಂತರವಾಗಿ ನಡೆಯುತ್ತಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.ಯೂಟ್ಯೂಬರ್ ಖ್ವಾಜಾನೊಂದಿಗೆ ಹಿಂದೂ ಯುವತಿಯನ್ನು ಕಾನೂನು ಬಾಹಿರವಾಗಿ ವಿವಾಹ ನೋಂದಣಿ ಮಾಡಿಸಿದ ಮುಂಡಗೋಡ ಉಪ ನೋಂದಣಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಿ, ಅಕ್ರಮವಾಗಿ ನಡೆದಿರುವ ವಿವಾಹ ನೋಂದಣಿ ರದ್ದು ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದ ಬಳಿಕ ಶಿವಾಜಿ ಸರ್ಕಲ್‌ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಲವ್ ಜಿಹಾದ್ ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಮುಸ್ಲಿಮೇತರ ಎಲ್ಲ ಯುವತಿಯರನ್ನು ಪ್ರೀತಿ, ಪ್ರೇಮದಲ್ಲಿ ತೊಡಗಿಸಿ ಷಡ್ಯಂತ್ರ ಹಾಗೂ ಕುತಂತ್ರದಿಂದ ಇಸ್ಲಾಂಮೀಕರಣ ಮಾಡುತ್ತಿದೆ. ನೀವು ನಿಮ್ಮ ಧರ್ಮದ ಯುವತಿಯರನ್ನು ವಿವಾಹ ಮಾಡಿಕೊಳ್ಳಿ ನಮ್ಮ ಅಭ್ಯಂತರವಿಲ್ಲ. ಆದರೆ ಹಿಂದೂ ಯುವತಿಯರ ಮೇಲೆ ಏಕೆ ಕಣ್ಣು ಹಾಕುತ್ತೀರಿ, ಹಿಂದೂ ಯುವತಿಯರಿಗೆ ಬುರ್ಕಾ ಹಾಕಿ, ಗೋಮಾಂಸ ತಿನಿಸುತ್ತೀರಿ. ಸ್ತ್ರೀಯರನ್ನು ಕುಲಗೆಡಿಸುವ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಲವ್ ಜಿಹಾದ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದೂ ಯುವತಿಯನ್ನು ಪುಸಲಾಯಿಸಿ ವಿವಾಹವಾಗಿರುವ ಯೂಟ್ಯೂಬರ್ ಮುಕಳೆಪ್ಪ (ಖ್ವಾಜಾ), ಹಣ ನೀಡಿದರೆ ಹಿಂದೂ ಹುಡುಗಿಯರು ಬರುತ್ತಾರೆ ಎಂದು ಸೊಕ್ಕಿನಿಂದ ಹೇಳುತ್ತಾನೆ. ಆದರೆ ಯೂಟ್ಯೂಬ್ ನೋಡುವವರೆಲ್ಲ ಹಿಂದೂಗಳೆ, ಅವನನ್ನು ಬೆಳೆಸಿದವರು ಹಿಂದೂಗಳೆ ಎಂಬ ಅರಿವು ಅವನಿಗಿಲ್ಲ. ಹಾಗಾಗಿ ಆತನ ರೀಲ್ಸ್ ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಅವನನ್ನು ಬೀದಿಗೆ ತರಬೇಕು ಎಂದರು.

ಎಲ್ಲಿವರೆಗೆ ಹಿಂದೂ ಸಮಾಜ ಒಗಟ್ಟಾಗುವುದಿಲ್ಲವೋ ಅಲ್ಲಿವರೆಗೆ ಇಂತಹ ದೌರ್ಜನ್ಯ ನಡೆಯುತ್ತಲೆ ಇರುತ್ತವೆ. ಅವರು ಧರ್ಮ ಕೇಳಿ ಹೊಡೆಯುತ್ತಾರೆ. ಹಾಗಾಗಿ ನಾವು ಕೂಡ ಧರ್ಮ ಕೇಳಿ ವ್ಯವಹಾರ ಮಾಡಬೇಕು. ಗಜಾನನ ವಿಸರ್ಜನೆ ವೇಳೆ ಕಲ್ಲೆಸೆಯುತ್ತಾರೆ. ಹಿಂದೂಗಳ ಹಬ್ಬಗಳಿಗೆ ತೊಂದರೆ ನೀಡುತ್ತಾರೆ. ನಮ್ಮ ದೇಶದಲ್ಲಿ ಹುಟ್ಟಿ ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನದ ಹೇಸಿಗೆಗೆ ನಾಲಿಗೆ ಚಾಚಿದರೆ ಸುಮ್ಮನಿರುವುದಿಲ್ಲ ಹುಷಾರ್ ಎಂದು ಗುಡುಗಿದ ಅವರು, ಇನ್ನು ಮುಂದೆ ನಮಗೆ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡುವುದಿಲ್ಲ, ಬದಲಾಗಿ ಮನೆಯೊಳಗೆ ಹೊಕ್ಕು ಹೊಡೆಯುತ್ತೇವೆ ಎಂದರು.ಈ ಸಂದರ್ಭ ಶ್ರೀರಾಮ ಸೇನೆ, ಹಿಂದು ಜಾಗರಣ ವೇದಿಕೆ, ರಾಮ ಸೇನೆ, ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಹಿಂದೂ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ