ನೇಕಾರ ಸಮಾಜದಲ್ಲಿ ಒಗ್ಗಟ್ಟು ಅವಶ್ಯವಿದೆ ಇದೆ: ಕೆ.ಎಚ್.ಸಂಜೀವಶೆಟ್ಟಿ

KannadaprabhaNewsNetwork |  
Published : Jan 21, 2025, 12:32 AM IST
20ಕೆಎಂಎನ್ ಡಿ26 | Kannada Prabha

ಸಾರಾಂಶ

ನೇಕಾರ ಸಮಾಜದಲ್ಲಿ ಒಗ್ಗಟ್ಟು ಅವಶ್ಯವಿದೆ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಎಲ್ಲವನ್ನು ಮರೆತು ಸಮುದಾಯದ ಏಳ್ಗೆಗೆ ಒಂದಾಗಬೇಕು. ಮಕ್ಕಳಿಗೆ ಶಿಕ್ಷಣ ಆಸ್ತಿ ಎಂಬುದನ್ನು ಅರಿಯಬೇಕು. ಸಮುದಾಯದ ಒಗ್ಗೂಡುವಿಕೆಗಾಗಿ ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕ್ರೀಡಾ ಮನೋಭಾವ, ಭಾಗವಹಿಸುವಿಕೆಯಿಂದ ಎಲ್ಲರಲ್ಲೂ ಸಾಮರಸ್ಯದೊಂದಿಗೆ ಒಗ್ಗೂಡಿಸಲು ಸಹಕಾರಿಯಾಗಲಿದೆ ಎಂದು ಮೈಸೂರು ಕುರುಹಿನಶೆಟ್ಟಿ ವಿಚಾರ ವೇದಿಕೆ ಅಧ್ಯಕ್ಷ ಕೆ.ಎಚ್.ಸಂಜೀವಶೆಟ್ಟಿ ತಿಳಿಸಿದರು.

ಪಟ್ಟಣದ ಕುರುಹಿಶೆಟ್ಟಿ ಸಮಾಜ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ನೇಕಾರ ಸಮಾಜದಲ್ಲಿ ಒಗ್ಗಟ್ಟು ಅವಶ್ಯವಿದೆ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಎಲ್ಲವನ್ನು ಮರೆತು ಸಮುದಾಯದ ಏಳ್ಗೆಗೆ ಒಂದಾಗಬೇಕು. ಮಕ್ಕಳಿಗೆ ಶಿಕ್ಷಣ ಆಸ್ತಿ ಎಂಬುದನ್ನು ಅರಿಯಬೇಕು ಎಂದರು.

ಕೆಳಸ್ತರದ ವರ್ಗದಲ್ಲಿ ಒಗ್ಗಟ್ಟಿನ ಕೊರತೆ ಸಹಜವಾಗಿದೆ. ಯುವಕರು ತಮ್ಮ ಪ್ರತಿಭೆಯನ್ನು ಕ್ರೀಡಾಕೂಟದಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ತೋರ್ಪಡಿಸಬೇಕು. ಸಮುದಾಯದ ಒಗ್ಗೂಡುವಿಕೆಗಾಗಿ ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿ ಎಂದು ವಿನಂತಿಸಿದರು.

ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ನಿವೃತ್ತ ಡಿಡಿಪಿಐ ಕೆ.ಎಚ್.ಕೃಷ್ಣಶೆಟ್ಟಿ, ಸಮಾಜದ ಕಿಕ್ಕೇರಿ ಅಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಡಿ. ಉಮೇಶ್, ಕೃಷ್ಣಶೆಟ್ಟಿ, ಗೋವಿಂದಶೆಟ್ಟಿ, ಸೋಮಶೇಖರ್, ಜೇನುಗೂಡು ಮಹೇಶ್, ಕೆ.ಎನ್. ಮೋಹನ್, ವಿನೋದಾ, ಸುನೀತಾ, ಸಾವಿತ್ರಿ, ಭಾರತಿ, ಲೀಲಾವತಿ ಭಾಗವಹಿಸಿದ್ದರು.

ಜ.24 ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ

ಮಂಡ್ಯ: ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ (ರಿ) ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಜ.24 ರಿಂದ 28 ರವರೆಗೆ 5 ದಿನಗಳ ಕಾಲ ಜಿಲ್ಲಾ, ತೋಟಗಾರಿಕೆ ಇಲಾಖೆ ಕಚೇರಿ ಆವರಣ ಹಾಗೂ ಕಾವೇರಿ ಉದ್ಯಾನವನದಲ್ಲಿ.. ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!