ಹಿಂದೂಗಳನ್ನು ಒಡೆದಾಳುವ ಹುನ್ನಾರ ನಡೆಯುತ್ತಿದೆ

KannadaprabhaNewsNetwork |  
Published : Aug 24, 2025, 02:00 AM IST
ಧರ್ಮಸ್ಥಳ ಭಕ್ತವೃಂಧವು ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ಹಿಂದೆ ಪಿಎಫ್ಐ, ಕೈವಾಡವಿದೆ. ಸೌಜನ್ಯಗೆ ನ್ಯಾಯ ಸಿಗಬೇಕು. ಆದರೆ, ಆ ಹೆಸರಿನಲ್ಲಿ ದೇವಾಲಯಗಳಿಗಾಗಲಿ ಹಿಂದೂಗಳ ಭಾವನೆಗಳಿಗಾಗಲಿ ಧಕ್ಕೆ ತರುವುದು ಸರಿಯಲ್ಲ.

ಅಳ್ನಾವರ: ಅಕ್ಷರ, ಅನ್ನ, ಆಶ್ರಯ ದಾಸೋಹಕ್ಕೆ ಹೆಸರಾಗಿರುವ ಧರ್ಮಸ್ಥಳ ಕ್ಷೇತ್ರಕ್ಕೆ ಕಪ್ಪುಚುಕ್ಕೆ ತರುವ ಉದ್ದೇಶದಿಂದ ಕೋಮುವಾದಿಗಳು ಸಂಚುರೂಪಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪಟ್ಟಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂಧವು ಇಲ್ಲಿನ ಅಂಬೇಡ್ಕರ್ ಭವನದಿಂದ ತಹಸೀಲ್ದಾರ್‌ ಕಚೇರಿಯ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ಹಿಂದೆ ಪಿಎಫ್ಐ, ಕೈವಾಡವಿದೆ. ಸೌಜನ್ಯಗೆ ನ್ಯಾಯ ಸಿಗಬೇಕು. ಆದರೆ, ಆ ಹೆಸರಿನಲ್ಲಿ ದೇವಾಲಯಗಳಿಗಾಗಲಿ ಹಿಂದೂಗಳ ಭಾವನೆಗಳಿಗಾಗಲಿ ಧಕ್ಕೆ ತರುವುದು ಸರಿಯಲ್ಲ. ಕರ್ನಾಟಕದಲ್ಲಿ ಈಗಾಗಲೆ ೩೪ ಸಾವಿರ ದೇವಾಲಯಗಳು ಸರ್ಕಾರದ ಅದೀನದಲ್ಲಿವೆ. ಆದರೆ, ಅಲ್ಪಸಂಖ್ಯಾತರ ಆಡಳಿತದಲ್ಲಿರುವ ಧರ್ಮಸ್ಥಳವನ್ನು ಸರ್ಕಾರಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಇಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಧರ್ಮಸ್ಥಳ ಕ್ಷೇತ್ರವಾಗಲಿ ಸಂಸ್ಥೆಗಳಾಗಲಿ ರಾಜ್ಯದಲ್ಲಿ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಒಂದೆ ಎನ್ನುವ ಭಾವನೆಯಿಂದ ಸಹಾಯ, ಸೌಲಭ್ಯ ಆಶ್ರಯ ನೀಡುತ್ತಿದ್ದು ಇವುಗಳನ್ನು ಸಹಿಸಿಕೊಳ್ಳಲಾರದ ಕೋಮುವಾದಿಗಳು ಅದರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಹಿಂದೂ ಧರ್ಮವನ್ನು ಒಡೆದು ಆಳುವ ಉದ್ದೇಶದಿಂದ ಪುಟ್ಟಪರ್ತಿ, ಅಯ್ಯಪ್ಪಸ್ವಾಮಿ ದೇವಸ್ಥಾನ, ಧರ್ಮಸ್ಥಳ ಹೀಗೆ ಹಲವಾರು ಕಡೆಗಳಲ್ಲಿ ಧಾರ್ಮಿಕ ಆಕ್ರಮಣಗಳು ನಡೆಯುತ್ತಲೆ ಬಂದಿವೆ. ಈ ಬಗ್ಗೆ ಹಿಂದೂಗಳು ಜಾಗ್ರತರಾಗಬೇಕು ಎಂದು ಹೇಳಿದ ಪ್ರತಿಭಟನಾಕಾರರು, ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸುವಂತಹ ಯೂಟ್ಯೂಬ್ ಚಾನಲ್‌ಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ ಬಿರಾದಾರ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಮಹಾದೇವ ಸಾಗರೆಕರ, ಭರತೇಶ ಪಾಟೀಲ, ಬಾಲಾಜಿ ಕವಳೆಕರ. ಪುಂಡಲೀಕ ಪಾರ್ದಿ, ಶಿವಾಜಿ ಡೊಳ್ಳಿನ, ಸಂದೀಪ ಪಾಟೀಲ, ನಾರಾಯಣ ಮೋರೆ, ಲಿಂಗರಾಜ ಮೂಲಿಮನಿ, ರಾಜು ಕರ್ಲೆಕರ, ಸುಮಂಗಲಾ ಸೊಪ್ಪಿ, ಪ್ರವೀಣ ಪವಾರ, ಅಜಿತ್ ಬೆಟದೂರ, ನಾಗರಾಜ ಬುಡರಕಟ್ಟಿ, ಸಂತೋಷ ಪೂಜಾರಿ, ಉದಯಕುಮಾರ ಇನಾಮದಾರ, ಮಲ್ಲಿಕಾರ್ಜುನ ಕಲ್ಲೂರ, ರಾಜು ಬೆಂಡಿಗೇರಿ, ಪ್ರಕಾಶ ಗಾಣಿಗೇರ, ವಿಜಯ ಕೌಜಲಗಿ, ಅರುಣ ರಾಂಧೆವಾಡಿ ಮತ್ತಿತರರು ಇದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!