ಶೌಚಾಲಯ ಇದ್ದರೂ ಬಳಕೆಗೆ ಇಲ್ಲ

KannadaprabhaNewsNetwork |  
Published : Feb 06, 2024, 01:33 AM IST
5 ಕ.ಟಿ.ಇ.ಕೆ ಚಿತ್ರ 2 : ಟೇಕಲ್‌ನ ನೂಟುವೆ ಗ್ರಾ.ಪಂ.ವ್ಯಾಪ್ತಿಯ ತೊರಲಕ್ಕಿ ಗ್ರಾಮದಲ್ಲಿನ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಶೌಚಾಲಯವು ಅರ್ಧಕ್ಕೆ ನಿಂತು ನೆನೆಗುದಿಗೆ ಬಿದ್ದಿರುವುದು. | Kannada Prabha

ಸಾರಾಂಶ

ಕೋಲಾರ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ. ಆದರೂ ತೊರಲಕ್ಕಿ ಗ್ರಾಮದಲ್ಲಿ ಸರಿಯಾದ ಸಾರ್ವಜನಿಕರವಾಗಿ ದಿನಿನಿತ್ಯ ಬಸ್ ನಿಲ್ದಾಣ, ಆರೋಗ್ಯ ಕೇಂದ್ರಕ್ಕೆ ಇತರೆ ಕಾರ್ಯಗಳಿಗೆ ಬರುವವರಿಗೆ ಶೌಚಾಲಯವೇ ಇಲ್ಲ

ಕನ್ನಡಪ್ರಭ ವಾರ್ತೆ ಟೇಕಲ್

ನೂಟುವೆ ಗ್ರಾ.ಪಂ.ವ್ಯಾಪ್ತಿಯ ತೊರಲಕ್ಕಿ ಗ್ರಾಮದಲ್ಲಿನ ಗ್ರಾಪಂ ವತಿಯಿಂದ ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವು ನನೆಗುದಿಗೆ ಬಿದ್ದಿದ್ದು ಸಾರ್ವಜನಿಕರ ಬಳಕೆಗೆ ದೊರೆಯದಂತಾಗಿದೆ.

2021-22ನೇ ಸಾಲಿನಲ್ಲಿ ಇದನ್ನು ನಿರ್ಮಿಸಿದ್ದು ಭಾರತ್ ಮಿಷನ್ ಯೋಜನೆಯಲ್ಲಿ ಇದನ್ನು ಕಟ್ಟಲಾಗಿದೆ. ಈ ಶೌಚಾಲಯಕ್ಕೆ ಹೋಗಲು ಸರಿಯಾದಂತ ದಾರಿ ಇಲ್ಲದಿದ್ದರೂ ಇದನ್ನು ಹೇಗೆ ನಿರ್ಮಿಸಿದರು ಎಂಬುದೇ ಆಶ್ಚರ್ಯ. ಇಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಿ ಅದಕ್ಕೆ ಬೀಗ ಜಡಿಯಲಾಗಿದೆ.

ಜನತೆಗೆ ಶೌಚಾಲಯದ ಸಮಸ್ಯೆ

ಗಡಿಭಾಗದಲ್ಲಿರುವ ತೊರಲಕ್ಕಿ ಗ್ರಾಮಕ್ಕೆ ವಾಣಿಜ್ಯ ವಹಿವಾಟಿಗಾಗಿ ತಮಿಳುನಾಡಿನ ಜನರೂ ಬರುತ್ತಾರೆ. ಇಲ್ಲಿ ಪ್ರತಿವಾರ ಸಂತೆ ನಡೆಯುತ್ತೆ. ಆದರೆ ಇಲ್ಲಿ ಶೌಚಾಲಯವಿಲ್ಲದೆ ಜನರು ಪರದಾಡುವಂತಾಗಿದೆ. ಕೋಲಾರ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ. ಆದರೂ ತೊರಲಕ್ಕಿ ಗ್ರಾಮದಲ್ಲಿ ಸರಿಯಾದ ಸಾರ್ವಜನಿಕರವಾಗಿ ದಿನಿನಿತ್ಯ ಬಸ್ ನಿಲ್ದಾಣ, ಆರೋಗ್ಯ ಕೇಂದ್ರಕ್ಕೆ ಇತರೆ ಕಾರ್ಯಗಳಿಗೆ ಬರುವವರಿಗೆ ಶೌಚಾಲಯವಿಲ್ಲದಂತೆ ಆಗಿದೆ.ಆರೋಗ್ಯ ಕೇಂದ್ರದ ಬಳಿ ಶೌಚಾಲಯ ನಿರ್ಮಿಸಿದ್ದು ಅದು ಪೂರ್ಣಗೊಂಡಿಲ್ಲ. ಅದು ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಸಕಡ್ಡಿಗಳಿಂದ ಆವೃತವಾಗಿದ್ದು ನಿತ್ಯ ಬರುವ ರೋಗಿಗಳಿಗೆ ಶೌಚಾಲಯವಿಲ್ಲದೆ ಪರಿತಪಿಸುವಂತಾಗಿದೆ. ನೂಟುವೆ ಗ್ರಾ.ಪಂ. ಪಂಚಾಯ್ತಿಯೂ ಈ ಬಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಗ್ರಾಪಂ ಪಿಡಿಒ ಏನಂತಾರೆ?

ನೂಟುವೆ ಗ್ರಾ.ಪಂ.ಪಿಡಿಒ ಚವ್ಹಾಣ್‌ರವರು ಈ ಬಗ್ಗೆ ಮಾತನಾಡಿ ನಾನು ಈ ಪಂಚಾಯ್ತಿಗೆ ಬಂದು ಸುಮಾರು ೫ ತಿಂಗಳಾಗಿದ್ದು ಶೌಚಾಲಯಗಳನ್ನು ನೋಡಿದ್ದು ಅಲ್ಲಿ ಓಡಾಡಲು ಕಾಲುವೆ ಅಡ್ಡ ಬಂದಿದ್ದು ಗ್ರಾ.ಪಂ. ವತಿಯಿಂದ ಡ್ರೈನೇಜ್ ನಿರ್ಮಿಸಿ ನಂತರ ಅದರ ಮೇಲೆ ಚಪ್ಪಡಿ ಹಾಕಿ ನಂತರ ಶೌಚಾಲಯದ ಸೇವೆ ಆರಂಭಿಸಲಾಗುವುದು. ಆರೋಗ್ಯ ಕೇಂದ್ರದ ಬಳಿ ಇರುವ ಶೌಚಾಲಯದ ಗುತ್ತಿಗೆದಾರರಿಗೂ ಈ ಬಗ್ಗೆ ಎಚ್ಚರಿಕೆ ನೀಡಿದ್ದು ಆದಷ್ಟು ಬೇಗ ಬಾಕಿ ಇರುವ ಶೌಚಾಲಯ ಕಾರ್ಯ ಮಾಡಲು ತಿಳಿಸಲಾಗಿದೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ