ಕಾನೂನು ಸೇವಾ ಪ್ರಾಧಿಕಾರಕ್ಕೂ ಮಕ್ಕಳಿಗೂ ಅವಿನಾಭಾವ ಸಂಬಂಧವಿದೆ-ನ್ಯಾ. ಜೈಬುನ್ನಿಸಾ

KannadaprabhaNewsNetwork |  
Published : Nov 17, 2026, 02:45 AM IST
ಫೋಟೋ: 15ಪಿಟಿಆರ್-ಎಸ್‌ಡಿಎಂಸಿಪುತ್ತೂರಿನಲ್ಲಿ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.  | Kannada Prabha

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕಾನೂನು ಸೇವಾ ಪ್ರಾಧಿಕಾರವು ಬಾಲ ಕಾರ್ಮಿಕತೆ, ಬಾಲ್ಯ ವಿವಾಹ ತಡೆಯುವ ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಕಾನೂನಾತ್ಮಕವಾಗಿ ತಿಳಿಸುವ ಕೆಲಸ ಮಾಡುತ್ತಿದ್ದು. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೂ ಮಕ್ಕಳಿಗೂ ಅವಿನಾಭಾವ ಸಂಬಂಧವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿಯಾದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಹೇಳಿದರು.

ಪುತ್ತೂರು : ಮಕ್ಕಳ ಹಕ್ಕುಗಳ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕಾನೂನು ಸೇವಾ ಪ್ರಾಧಿಕಾರವು ಬಾಲ ಕಾರ್ಮಿಕತೆ, ಬಾಲ್ಯ ವಿವಾಹ ತಡೆಯುವ ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಕಾನೂನಾತ್ಮಕವಾಗಿ ತಿಳಿಸುವ ಕೆಲಸ ಮಾಡುತ್ತಿದ್ದು. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೂ ಮಕ್ಕಳಿಗೂ ಅವಿನಾಭಾವ ಸಂಬಂಧವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿಯಾದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಹೇಳಿದರು. ಅವರು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ನೇತೃತ್ವದಲ್ಲಿ ಪುತ್ತೂರಿನ ಮುಕ್ವೆ ಆರ್‌ಜೆಎಂ ಸಭಾಂಗಣದಲ್ಲಿ ಭಾನುವಾರ ನಡೆದ ‘ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ-2026-27’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ ಸಮಾಜವನ್ನು ಬದಲಾಯಿಸುವ ಮೊದಲ ಹೆಜ್ಜೆ ಶಿಕ್ಷಣವಾಗಿದೆ. ಶಿಕ್ಷಣವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಸಂಘಟನೆ ಕಟ್ಟಿಕೊಳ್ಳಲಾಗಿದೆ. ನಮ್ಮಲ್ಲಿ ಗಟ್ಟಿಯಾಗಿರುವ ಸಂವಿಧಾನವಿದ್ದರೂ ನಿರ್ಭೀತಿಯಿಂದ ಬದುಕಲು ಸಾಧ್ಯವಿಲ್ಲ ಎಂಬಂತಾಗಿದೆ. ಸಾಮಾಜಿಕ ಅಸಮಾನತೆ, ದೌರ್ಜನ್ಯ, ನಿಂದನೆಗಳ ವಿರುದ್ದ ಶಿಕ್ಷಣವಂತರು ಧ್ವನಿ ಎತ್ತಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯಾಧ್ಯಕ್ಷ ಮೊಯ್ದೀನ್ ಕುಟ್ಟಿ ಮಾತನಾಡಿ, ಶಿಕ್ಷಕರಲ್ಲಿ ವೃತ್ತಿಪರ ಬದ್ಧತೆ, ಶಿಸ್ತು, ಜವಾಬ್ಧಾರಿ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಶಾಲೆಯೊಳಗಿದ್ದು ಮಕ್ಕಳ ಶಿಕ್ಷಣವನ್ನೇ ಗುರಿಯಾಗಿಸಿ ಕೆಲಸ ಮಾಡುತ್ತಿರುವ ಸಮನ್ವಯ ವೇದಿಕೆಯು ಶಿಕ್ಷಕರನ್ನು ಗುರುತಿಸಿ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ ಜಿಲ್ಲೆಯ 7 ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಜಿಲ್ಲೆಯ 20 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಪೈಕಿ ಓವ್ ನಿವೃತ್ತ ಶಿಕ್ಷಕರೂ ಒಳಗೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಿರ್ದೇಶಕರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಪಶ್ಚಿಮ ವಲಯ ನಾಗರಿಕ ಹಕ್ಕು ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಸೈಮನ್ ಸಿ.ಎ, ಪುತ್ತೂರು ಉಪವಿಭಾಗದ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ, ಹಿರಿಯ ಹೈಕೋರ್ಟ್ ವಕೀಲ ಕೆ.ಎನ್. ಪ್ರವೀಣ್ ಕುಮಾರ್, ಬೆಂಗಳೂರು ಮಗು ಮತ್ತು ಕಾನೂನು ಕೇಂದ್ರದ ತರಬೇತಿ ಸಂಯೋಜಕ ಕುಮಾರ್ ಶೃಂಗೇರಿ, ಮಕ್ಕಳ ಕಲ್ಯಾಣ ಸಮಿತಿ ನಿಕಟಪೂರ್ವ ಅಧ್ಯಕ್ಷ ರೆನ್ನಿ ಡಿಸೋಜ, ಮುಕ್ವೆ ಆರ್‌ಜೆಎಂ ಮಸೀದಿ ಖತೀಬ್ ಇರ್ಶಾದ್ ಫೈಝೀ, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕರಾದ ಅಬ್ದುಲ್ ಸಲಾಂ ಚಿತ್ತೂರು ಉಡುಪಿ, ಶಿವಕ್ಕಳ ಆಂಜನೇಯ ದಾವಣಗೆರೆ, ವೆಂಕಟೇಶ್ ಎಸ್‌ಎಲ್‌ವಿ ಬೆಂಗಳೂರು ದಕ್ಷಿಣ, ಗೀತ ಬೆಂಗಳೂರು ಉತ್ತರ, ಮಹಮ್ಮದ್ ಆಸಿಫ್ ಬೆಂಗಳೂರು ನಗರ, ದುಂಡಪ್ಪ ಎಂ ರಾಜಾಪುರೆ ಬೆಳಗಾವಿ, ಹೇಮಂತ ಗೌಡ ಮಾಲಿ ಪಾಟೀಲ್ ಗದಗ, ಪ್ರವೀಣ್ ಹಾಸನ, ವೀರಭದ್ರಪ್ಪ ಎಂ ಗುಲ್ಬರ್ಗ, ಶರಣಬಸಪ್ಪ ದಾನಕ್ಕೆ ಕೊಪ್ಪಳ, ಅಣ್ಣಯ್ಯ ಎಂ.ಎಸ್ ಮಂಡ್ಯ, ಮಂಜುನಾಥ ರಾಯಚೂರು, ಹೆನ್ರಿ ಏಸುರಾಜ್ ಶಿಕಾಮಣಿ ಉತ್ತರ ಕನ್ನಡ, ವಿಠಲ್ ಶಿವಣಗಿ ಬಿಜಾಪುರ, ವಿಜಯಕುಮಾರ್ ಎನ್ ಚಿಕ್ಕಮಗಳೂರು, ವಿವಿಧ ಜಿಲ್ಲಾ ನಿರ್ದೇಶಕರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸಮನ್ವಯ ವೇದಿಕೆಯ ರಾಜ್ಯ ನಿರ್ದೇಶಕ ಸಿರಾಜ್ ಚಿಲಿಂಬಿ ಸ್ವಾಗತಿಸಿದರು. ಶುಭ ರೈ ಮತ್ತು ಫಾತಿಮ ರಿಧಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ