ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲಿ ಅದಮ್ಯ ಶಕ್ತಿಯಿದೆ-ಸ್ವಾಮೀಜಿ

KannadaprabhaNewsNetwork |  
Published : May 10, 2026, 02:00 AM IST
ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಗ್ರಾಮದ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ವಿಜ್ಞೇಶ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ದೇವರಿದ್ದಾನೆಂಬುದು ಬಿಡುವುದು ಅವರವರ ಆತ್ಮಕ್ಕೆ ಬಿಟ್ಟದ್ದು, ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲಿ ಒಂದು ಅದಮ್ಯವಾದ ಶಕ್ತಿ ಇದೆ. ಆ ಶಕ್ತಿ ಗಾಳಿ, ನೀರು, ಬೆಂಕಿ, ಆಕಾಶ, ಭೂಮಿ ಪ್ರತಿಯೊಂದರಲ್ಲಿ ಅಡಗಿದೆ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ರಾಣಿಬೆನ್ನೂರು: ದೇವರಿದ್ದಾನೆಂಬುದು ಬಿಡುವುದು ಅವರವರ ಆತ್ಮಕ್ಕೆ ಬಿಟ್ಟದ್ದು, ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲಿ ಒಂದು ಅದಮ್ಯವಾದ ಶಕ್ತಿ ಇದೆ. ಆ ಶಕ್ತಿ ಗಾಳಿ, ನೀರು, ಬೆಂಕಿ, ಆಕಾಶ, ಭೂಮಿ ಪ್ರತಿಯೊಂದರಲ್ಲಿ ಅಡಗಿದೆ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಹನುಮನಮಟ್ಟಿ ಗ್ರಾಮದ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ವಿಜ್ಞೇಶ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಚಂದ್ರಗ್ರಹದ ಮೇಲೆ ರಾಕೆಟ್ ಉಡಾವಣೆ ಮಾಡುವ ವಿಜ್ಞಾನಿಗಳು ಕೊನೆಗೆ ದೇವರನ್ನು ಸ್ಮರಿಸಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಾರೆ. ದೇವರಿದ್ದಾನೆ ಎಂಬುದು ನಂಬಿಕೆಯಿಂದ ಅಂಗೀಕರಿಸಬೇಕಾದ ಸಂಗತಿ, ವೈಯುಕ್ತಿಕ ಅನುಭವ, ಪ್ರಾರ್ಥನೆ ಮತ್ತು ಭಕ್ತಿ ಮನುಷ್ಯನ ಮನಸ್ಸಿನಲ್ಲಿ ಇರುತ್ತದೆ. ಅದು ಆತನು ನಂಬಿರುವ ನಂಬಿಕೆಯಿಂದ ಆತನಿಗೆ ಸಾಂತ್ವನ ನೀಡುತ್ತದೆ ಎಂದರು. ತಾರ್ಕಿಕ ದೃಷ್ಟಿಕೋನದಿಂದ ದೇವರ ಅಸ್ತಿತ್ವವನ್ನು ರುಜುವಾತುಪಡಿಸಲು ಸಾಧ್ಯವಿಲ್ಲ, ಇದು ಅಂತಿಮವಾಗಿ ವ್ಯಕ್ತಿಯ ಅಂತರಂಗದ ಪ್ರಶ್ನೆ ಎಂಬುದನ್ನು ಅರಿಯಬೇಕಾಗುತ್ತದೆ. ದೇವರಿದ್ದಾನೋ ಇಲ್ಲವೋ ತಿಳಿಯದು. ಆದರೆ ದೇವಾಲಯದಲ್ಲಿ ಇರುವ ದೇವರ ಮೂರ್ತಿ ಮತ್ತು ಮನೆಯಲ್ಲಿರುವ ದೇವರಗುಡಿಯಲ್ಲಿ ಕುಳಿತು ಭಕ್ತಿಯಿಂದ ಆತ್ಮಪೂರ್ವಕವಾಗಿ ಸಂಕಷ್ಟಗಳ ಪರಿಹಾರಕ್ಕೆ ಪ್ರಾರ್ಥಿಸಿದಾಗ ಮನಸ್ಸಿಗೆ ಸಿಗುವ ನೆಮ್ಮದಿ ಅನುಭವಿಸಿದವರಿಗೆ ಮಾತ್ರ ಗೋಚರವಾಗುತ್ತದೆ. ನಂಬಿಕೆ ಇಲ್ಲದೆ ದೇವರ ಅಸ್ತಿತ್ವ ಹುಡುಕುವುದು ಅಸಾಧ್ಯ, ಅಕಾಶ, ಭೂಮಿ, ಸೂರ್ಯ ಚಂದ್ರರು ಪ್ರಕೃತಿಯಲ್ಲಿ ತಮ್ಮ ಅದ್ಭುತಗಳನ್ನು ವ್ಯಕ್ತಪಡಿಸುವ ಹಿಂದೆ ಸೃಷ್ಟಿಕರ್ತನಾದ ದೇವರ ಇರುವನ್ನು ಸೂಚಿಸುತ್ತದೆ ಎಂದರು. ವಿದ್ಯಾರ್ಥಿಗಳಾದ ತಾವು ದೇವರನ್ನು ನಂಬಿ ಮಾಡುವ ಪ್ರತಿ ಆಚರಣೆಗಳಲ್ಲು ವೈಜ್ಞಾನಿಕ ಹಿನ್ನೆಲೆ ಇರುವುದನ್ನು ಕಾಣುತ್ತೇವೆ, ಬನ್ನಿಮರ, ಆಲದಮರ, ಪತ್ರಿಮರ ಸುತ್ತುವದರ ಹಿಂದೆ ವೈಜ್ಞಾನಿಕ ಶಕ್ತಿ ಇದೆ. ಆ ಮರಗಳಲ್ಲಿ ಹೇರಳವಾದ ಆಮ್ಲಜನಕವಿರುವುದರಿಂದ ಮನುಷ್ಯ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಸದೃಢನಾಗಿ ಬೆಳೆಯುತ್ತಾನೆ. ಹೀಗೆ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪದ್ಧತಿಗಳಲ್ಲಿ ನಾವು ಆಚರಣೆ ಮಾಡುವ ಅನೇಕ ನಂಬಿಕೆಗಳು ವೈಚಾರಿಕ ಪ್ರಜ್ಞೆ ಹಾಗೂ ಮಾನಸಿಕ ನೆಮ್ಮದಿಗಾಗಿ ಇರುವಲ್ಲಿ ದೇವರನ್ನು ಒಂದು ಸಾಂಕೇತಿಕ ರೂಪದಲ್ಲಿ ಸೃಷ್ಟಿ ಮಾಡಿಕೊಂಡಿದ್ದೇವೆ ಎಂಬುದನ್ನು ನಾವು ಅರಿಯಬೇಕು. ವಿದ್ಯೆ ಮತ್ತು ಬುದ್ಧಿಯನ್ನು ಪ್ರಾಪ್ತಿಸಿಕೊಳ್ಳಲು ನಾವು ಪರಮಾತ್ಮನಲ್ಲಿ ಮೊರೆ ಹೋಗುತ್ತೇವೆ. ಕೃಷಿ ವಿಜ್ಞಾನಿಗಳಾಗಬೇಕಾದ ತಾವೆಲ್ಲರು ತಮ್ಮ ಸಾತ್ವಿಕ ಪ್ರಜ್ಞೆಯಿಂದ ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದಾಗ ಮಾತ್ರ ದೇವರು ಧರ್ಮಕ್ಕೊಂದು ನಿಜವಾದ ಅರ್ಥ ಕಂಡುಕೊಳ್ಳಲು ಸಾಧ್ಯವೆಂದು ಎಂದರು.ಆವರಣದ ಮುಖ್ಯಸ್ಥ ಡಾ.ಕೆ.ವಿ.ಬಸವಕುಮಾರ, ಪ್ರಾಧ್ಯಾಪಕರಾದ ಡಾ. ಎಸ್.ಬಿ. ಚನ್ನಗೌಡ್ರ, ಡಾ.ಕೆ.ಬಿ. ಯಡಳ್ಳಿ, ಡಾ. ಬಾಬು ಡಾ. ಪ್ರಭು ಎಸ್.ಟಿ., ಡಾ.ಅಶೋಕ ಪಿ., ಡಾ. ವೀರಣ್ಣ, ಡಾ. ಕಾವೇರಾ ಬಿರಾದಾರ, ಡಾ. ಕಿರಣ ಬಿ.ವಿ., ಡಾ. ವಿಜಯಕುಮಾರ, ಸೋಮಶೇಖರ ಪಾಟೀಲ್, ಡಾ. ಸಿದ್ದು ಜಮನಾಳ, ಡಾ.ವಿಕಾಸ, ಹರ್ಷ ಬಣಕಾರ, ಮೈಲಾರದ, ನಾಗರಾಜ ಬಣಕಾರ, ವೀರೇಶ ಗುತ್ತಲ, ಪ್ರಭು, ಪ್ರಕಾಶ, ಶ್ರೀಕಾಂತ, ರಾಜು ದ್ರಾಕ್ಷಾಯಣಮ್ಮ, ಸುಧಾ ಹಾಗೂ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ಮಾನವೀಯ ಸಂದೇಶ ಸಾರಿದ ಬಸವಣ್ಣ
ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ರಾಡಿ ನೀರು ಪೂರೈಕೆ!