ಕನ್ನಡಪ್ರಭ ವಾರ್ತೆ ಹಳೇಬೀಡು
ಪಟ್ಟಣದ ಸಂತೆ ಮೈದಾನದಲ್ಲಿ ಹಳ್ಳಿ ಸಂತೆ ಕಟ್ಟಡ ಉದ್ಘಾಟನೆ ಮಾಡಿ ಅವರು ಮಾತನಾಡುತ್ತ, ಹಳೇಬೀಡು ವಿಶ್ವಪ್ರಸಿದ್ಧ ಪ್ರೇಕ್ಷಣೀಯ ಸ್ಥಳ ಅದರ ಜೊತೆಜೊತೆಗೆ ರಾಜ್ಯದ ಹೊರ ರಾಜ್ಯಗಳಿಗೂ ಈ ಭಾಗದಿಂದಲೇ ಅತಿ ಹೆಚ್ಚು ವಿವಿಧ ರೀತಿಯ ತರಕಾರಿಗಳು ರಫ್ತು ಆಗುತ್ತಿರುವುದು ಹೆಮ್ಮೆಯ ವಿಷಯ. ಈ ಕಾರಣಕ್ಕಾಗಿ ವಾರದ ಸಂತೆಯ ಜೊತೆಗೆ ದೈನಂದಿನ ಸಂತೆಯು ಕೂಡ ಇಲ್ಲಿ ನಡೆಯಲಿ ಎಂಬ ಕಾರಣಕ್ಕೆ ಹಳ್ಳಿ ಸಂತೆಯನ್ನು ಉದ್ಘಾಟನೆ ಮಾಡಿದ್ದು ಇದನ್ನ ಸ್ಥಳೀಯರು ಸುತ್ತಮುತ್ತಲಿನ ಜನರು ಅನುಕೂಲ ಮಾಡಿಕೊಳ್ಳಲು ತಿಳಿಸಿದರು.
ಹಳೇಬೀಡು ಪಟ್ಟಣ ಪಂಚಾಯಿತಿಯಾಗುವ ಎಲ್ಲಾ ಸಾಧ್ಯತೆಗಳು ಮುಂಬರುವ ದಿನಗಳಲ್ಲಿ ಸಾಧ್ಯತೆ ಹೆಚ್ಚಾಗಿದೆ. ಹಳೇಬೀಡಿಗೆ ಎಪಿಎಂಸಿ ಅತ್ಯವಶ್ಯಕವಿದ್ದು ಅದನ್ನ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಿಕೊಡಲು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ವಿರುಪಾಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಮಾಜಿ ಅಧ್ಯಕ್ಷ ಪ್ರೇಮಣ್ಣ, ಸದಸ್ಯ ಮೋಹನ್, ಗುತ್ತಿಗೆದಾರ ಪರಮೇಶ್, ಪಕ್ಷದ ಮುಖಂಡರಾದ ಪ್ರಸನ್ನ, ಕುಮಾರ್, ರಂಜಿತ್ ಮುಂತಾದವರು ಹಾಜರಿದ್ದರು.