ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜೆಎನ್‌ಎನ್‌ಸಿ ಕಾಲೇಜಿನ ಲೈಬ್ರೆರಿ ಹಾಲ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ರೋಟರಿ ಕ್ಲಬ್, ಶಿವಮೊಗ್ಗ ಜ್ಯುಬಿಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕ ಜವಾಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ-2027 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮವಾದ ವಿಚಾರಗಳ ಕಡೆಗೆ ಗಮನ ಹರಿಸಬೇಕು. ಮತ್ತು ಭರಿಸುವ ಹಾಗೂ ದೇಹಕ್ಕೆ ಹಾನಿಕಾರಕವಾಗುವ ವಸ್ತುಗಳಿಂದ ದೂರ ಉಳಿದು, ರಸ್ತೆ ಸುರಕ್ಷಿತ ವಾಹನ ಚಾಲನೆಗೆ ಹೆಚ್ಚಿನ ಮಹತ್ವ ನೀಡಿದಾಗ, ಸಮಾಜ ಸುರಕ್ಷಿತವಾಗಿರಲು ಸಹಕಾರಿ. ಸ್ವಂತ ಉದ್ಯಮ ಸ್ಥಾಪಿಸಿ, ಉದ್ಯೋಗ ದಾತರಾಗಿ. ಆದಾಯ ಪಡೆಯುವುದಕ್ಕಿಂತ, ನೀಡುವುದರಲ್ಲಿ ಹೆಚ್ಚಿನ ಸಂತೋಷವಿದೆ. ವಿದ್ಯಾವಂತರು ಕೃಷಿ ಚಟುವಟಿಗಳಲ್ಲಿ ತಾಂತ್ರಿಕ ನೆರವು ನೀಡಿ ಆರ್ಥಿಕವಾಗಿ ದೇಶ ಸದೃಡವಾಗಲು ಶ್ರಮಿಸಿ ಎಂದು ಎಂದು ಕಿವಿಮಾತು ಹೇಳಿದರು.ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕ ಡಾ. ಟಿ.ಆರ್.ಅಶ್ವಥನಾರಾಯಣ್ ಶೆಟ್ಟಿ ಮಾತನಾಡಿ, ಐವತ್ತು ವರ್ಷಗಳ ಹಿಂದೆ ರಕ್ತದಾನದ ಬಗ್ಗೆ ಇಷ್ಟು ಅನುಕೂಲ ಇರಲಿಲ್ಲ. ತಮ್ಮ ಶ್ರೀನಿಧಿಯಲ್ಲಿ ರಕ್ತದಾನಿಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿ ಅವಶ್ಯಕರಿಗೆ ಸಹಾಯ ಮಾಡುತ್ತಿದ್ದೆವು. ಅಂದು ವೈಯುಕ್ತಿಕವಾಗಿ ನಲವತ್ತು ಬಾರಿ ರಕ್ತದಾನ ಮಾಡಿದ್ದನ್ನು ಸ್ಮರಿಸಿದರು.
ಕಳೆದ ಹದನೈದು ವರ್ಷದಿಂದ ಇಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ ಯಶಸ್ವಿಯಾಗಿದ್ದೇವೆ. ವಿದ್ಯಾರ್ಥಿಗಳು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ, ಮುಂದೆ ಜೀವನದಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ಇಂತಹ ಪವಿತ್ರ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ.