ಕಲಿಕೆಯಾಗದೆ ಪಡೆಯುವ ಅಂಕದಿಂದ ಪ್ರಯೋಜನವಿಲ್ಲ: ಅರವಿಂದ ಚೊಕ್ಕಾಡಿ

KannadaprabhaNewsNetwork |  
Published : Nov 28, 2024, 12:34 AM ISTUpdated : Nov 28, 2024, 12:35 AM IST
ಪೋಟೊ27ಕೆಎಸಟಿ1: ಕುಷ್ಟಗಿ ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಹತ್ತನೇ ತರಗತಿಯ ಪರೀಕ್ಷಾ ಕಮಟದಲ್ಲಿ ಶಿಕ್ಷಣ ತಜ್ಞ ಅರವಿಂದ ಚಕ್ಕಡಿ ಮಾತನಾಡಿದರು.ಪೋಟೊ27ಕೆಎಸಟಿ1ಎ: ಕುಷ್ಟಗಿ ಪಟ್ಟಣದ ಎಸ್ ವಿ ಸಿ ಸಂಸ್ಥೆಗಳ ಆವರಣದಲ್ಲಿ 10ನೇ ತರಗತಿ ಪರೀಕ್ಷಾ ಕಮಟದ ಅಂಗವಾಗಿ ನಡೆದ ಪಾಲಕರ ಸಭೆಯಲ್ಲಿ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಪರಿಹರಿಸಲು ಪಾಲಕರು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಪರಿಹರಿಸಲು ಪಾಲಕರು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಹೇಳಿದರು.

ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ 10ನೇ ತರಗತಿಯ ಮಕ್ಕಳಿಗೆ ಪರೀಕ್ಷೆಯ ಯಶಸ್ಸಿನ ಕುರಿತು ಎರಡು ದಿನಗಳ ಕಮ್ಮಟದ ಅಂಗವಾಗಿ ಜರುಗಿದ ಪಾಲಕರ ಸಭೆಯಲ್ಲಿ ಮಾತನಾಡಿದರು. ಇಂದು ಕಲಿಕೆಯಾಗದೆ ಪಡೆಯುವ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಗುಣಮಟ್ಟ ಅಳೆಯಲಾಗುತ್ತಿದೆ. ಇದು ಬಹುದೊಡ್ಡ ದುರಂತ. ಕಲಿಕೆಯಾಗದೆ ಪಡೆಯುವ ಅಂಕದಿಂದ ಪ್ರಯೋಜನವಿಲ್ಲ. ಕಲಿಕೆಯಿಂದ ಪಡೆಯುವ ಅಂಕದಿಂದ ಪ್ರಯೋಜನವಾಗುತ್ತದೆ.

ಪ್ರಸ್ತುತ ವ್ಯವಸ್ಥೆಯು ಕಲಿಕೆಯಾಗದೆ ಪಡೆಯುವ ಅಂಕದ ಮೇಲೆ ಕೇಂದ್ರೀಕೃತವಾಗಿದೆ. ಇದನ್ನು ಬದಲಾಯಿಸುವುದು ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ಶಿಕ್ಷಕರಿಂದ ಸಾಧ್ಯವಿಲ್ಲ. ಈ ವ್ಯವಸ್ಥೆ ಬದಲಾಗುವಂತೆ ಪಾಲಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಅದರಿಂದ ಸರ್ಕಾರದ ನೀತಿಯಲ್ಲಿ ಬದಲಾವಣೆಯಾಗುತ್ತದೆ. ಇದು ಶಿಕ್ಷಣ ಕ್ಷೇತ್ರದ ಕ್ಷೇತ್ರವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಸುಮಾರು 15 ತಿಂಗಳ ಸಮಯದ ಪಠ್ಯಗಳನ್ನು ಎಂಟು ತಿಂಗಳಲ್ಲಿ ಮುಗಿಸುವಂತೆ ವ್ಯವಸ್ಥೆ ಒತ್ತಡ ಹೇರುತ್ತಿದೆ. ಪ್ರಶ್ನೆ ಪತ್ರಿಕೆಗಳನ್ನು ರೂಪಿಸುವ ಕ್ರಮದಲ್ಲಿಯೂ ವ್ಯತ್ಯಾಸಗಳಾಗುತ್ತಿವೆ ಎಂದರು.

625ಕ್ಕೆ 625 ಅಂಕ ಪಡೆಯುವುದು ವಿಚಿತ್ರ ಮಾದರಿ. ಇದು ದೋಷರಹಿತ ಎಂದೇ ಅರ್ಥ ಇಂತಹ ಮಾದರಿಯೇ ಅವೈಜ್ಞಾನಿಕ. ಇಂತಹ ದೋಷಗಳನ್ನು ನಿವಾರಿಸಿದ ಹೊರತು ಮಕ್ಕಳಿಗೆ ಉಜ್ವಲ ಶೈಕ್ಷಣಿಕ ಬದುಕನ್ನು ರೂಪಿಸಲು ಸಾಧ್ಯವಿಲ್ಲ ಎಂದರು.

ಕಮ್ಮಟ:ಎರಡು ದಿನಗಳ ಕಾಲ ಅವರು ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ಓದು ಹಾಗೂ ಅಧ್ಯಯನಗಳ ವ್ಯತ್ಯಾಸ, ನೆನಪಿಟ್ಟುಕೊಳ್ಳುವ ಕೌಶಲ್ಯ, ಬರವಣಿಗೆ ಹಾಗೂ ಓದಿನ ವೇಳಾಪಟ್ಟಿಯ ಕುರಿತು ಮಕ್ಕಳಿಗೆ ಕಮ್ಮಟ ನಡೆಸಿದರು. ಕೆಲವೊಂದು ಪ್ರಯೋಗಗಳನ್ನು ಮಾಡುವ ಮೂಲಕ ಮಕ್ಕಳ ಮನಸ್ಸಿನ ಸಂದೇಹಗಳನ್ನು ಪರಿಹರಿಸಿದರು.

ನಿವೃತ್ತ ಉಪನ್ಯಾಸಕ ಬಸವರಾಜ್ ಸವಡಿ ವಿಜ್ಞಾನ ವಿಷಯದ ಕುರಿತಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಡನೆ ಸಂವಾದ ನಡೆಸಿದರು. ಬೆಳಕಿನ ಕುರಿತ ಕುರಿತಾಗಿ ಪ್ರಾಯೋಗಿಕ ಪಾಠ ನಡೆಸಿದರು.

ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಎಸ್‌ವಿಸಿ ಶಾಲೆಗಳ ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ, ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಹಿರೇಮಠ ಹಾಗೂ ಎರಡು ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ