ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ: ಸಂಸದ ಕಾಗೇರಿ

KannadaprabhaNewsNetwork | Published : Oct 31, 2024 1:05 AM

ಸಾರಾಂಶ

ಭಾರತದಲ್ಲಿ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾನವ ಸಂಪನ್ಮೂಲ ಅಗಾಧ ಶಕ್ತಿಯನ್ನು ಹೊಂದಿದೆ. ಆದರೆ ಕೌಶಲ್ಯದ ಕೊರತೆಯಿಂದ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ.

ಶಿರಸಿ: ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಆದರೆ ಕೌಶಲ್ಯದ ಕೊರತೆಯಿಂದ ಉದ್ಯೋಗ ಗಳಿಸಲು ಸಾಧ್ಯವಾಗುತ್ತಿಲ್ಲ. ಯುವ ಸಮುದಾಯದಲ್ಲಿ ಕೌಶಲ್ಯ ಅಭಿವೃದ್ಧಿಗೊಳ್ಳಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಬುಧವಾರ ನಗರದ ಸಿಪಿ ಬಜಾರ್‌ನ ಟಿಎಸ್‌ಎಸ್ ಬಿಲ್ಡಿಂಗ್‌ನಲ್ಲಿ ಯುವಜಯ ಫೌಂಡೇಶನ್ ಉದ್ಘಾಟಿಸಿ, ಮಾತನಾಡಿದರು.ಭಾರತದಲ್ಲಿ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾನವ ಸಂಪನ್ಮೂಲ ಅಗಾಧ ಶಕ್ತಿಯನ್ನು ಹೊಂದಿದೆ. ಆದರೆ ಕೌಶಲ್ಯದ ಕೊರತೆಯಿಂದ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಅದರ ಪ್ರಯೋಜನ ಪಡೆದುಕೊಂಡು ಉದ್ಯೋಗ ಪಡೆಯುವಲ್ಲಿ ಹೆಚ್ಚಿನ ಒಲವು ತೋರಿಸಬೇಕು ಎಂದರು.ಯುವಜಯ ಫೌಂಡೇಶನ್ ಗಿರೀಶ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಅವಧಿಯು ೨ ತಿಂಗಳಾಗಿದ್ದು, ಇಂಗ್ಲಿಷ್ ಕಮ್ಯುನಿಕೇಶನ್, ಪ್ರೆಸೆಂಟೇಶನ್ ಸ್ಕಿಲ್, ಲಾಜಿಕಲ್ ಥಿಂಕಿಂಗ್, ಮೌಖಿಕ ಸಂದರ್ಶನ ಎದುರಿಸುವ ಕಲೆ ಸೇರಿದಂತೆ ಕೌಶಲ್ಯ ಆಧರಿತ ವಿಚಾರಗಳನ್ನು ತಿಳಿಸಲಾಗುತ್ತದೆ. ತರಬೇತಿ ನೀಡಲು ಪ್ರತಿಷ್ಠಿತ ಸಾಪ್‌ಲಾಬ್, ಸಿಟ್ರಿಕ್ಸ್, ಎಲ್‌ಎನ್‌ಡಬ್ಲ್ಯು ಸಿಬ್ಬಂದಿ ಕೈಜೋಡಿಸಿದ್ದಾರೆ. ಈ ಅವಧಿಯಲ್ಲಿ ಪ್ರತಿಷ್ಠಿತ ಕಂಪೆನಿಗಳ ಇಂಟರ್‌ವ್ಯೂಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತದೆ ಎಂದರು.

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾಪುರ ಶಂಕರಮಠದ ಅಧ್ಯಕ್ಷ ವಿಜಯ ಹೆಗಡೆ ದೊಡ್ಮನೆ, ಚಾರ್ಟೆಡ್ ಅಕೌಂಟ್‌ಟೆಂಟ್ ಸುಬ್ರಹ್ಮಣ್ಯ ಹೆಗಡೆ, ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಟಿ. ಭಟ್ಟ ಮತ್ತಿತರರು ಇದ್ದರು. ಅಶೋಕ ಭಟ್ಟ ಸ್ವಾಗತಿಸಿದರು. ವಿನಾಯಕ ಭಟ್ಟ ವೇದಘೋಷ ಹಾಡಿದರು. ಜಯಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು.ಇಂದು ಶಿವಗಂಗಾ ವಿವಾಹ ಮಹೋತ್ಸವ

ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದ ಕ್ರೋಧಿ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವ ವೈಭವದಿಂದ ಅ. 31ರಂದು ಜರುಗಲಿದೆ.ಪರಂಪರೆಯಂತೆ ಗಂಗಾಷ್ಟಮಿಯ ದಿನ ಗಂಗಾಗಳಿಯ ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಯದಂತೆ ಆಶ್ವಿಜ ಬಹುಳ ಚತುರ್ದಶಿಯಂದು ಗುರುವಾರ ಇಳಿಹೊತ್ತಿನಲ್ಲಿ ಗೋರ್ಣದಿಂದ ಸ್ವಲ್ಪದೂರದ ಸಮುದ್ರ ತೀರದಲ್ಲಿ ನೆರವೇರಲಿದೆ.ವಿವಾಹ ಮಹೋತ್ಸವ ಮುಗಿಸಿ ಹಿಂದಿರುಗುವಾಗ ದೈವರಾತರ ಆಶ್ರಮ ಹಾಗೂ ದೇವಾಲಯದ ಅಮೃತಾನ್ನ ಭವನಕ್ಕೆ ಚಿತೈಸುತ್ತದೆ. ಇಲ್ಲಿ ನವವಿವಾಹಿತ ದೇವದಂಪತಿಗಳಿಗೆ ರಾಜೋಪಚಾರ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಂದಿರಕ್ಕೆ ಮರಳಲಿದೆ.

Share this article