ಶರಣ ಧರ್ಮದಲ್ಲಿ ಹೆಣ್ಣು ಗಂಡೆಂಬ ಭೇದ ಭಾವವಿಲ್ಲ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

KannadaprabhaNewsNetwork |  
Published : Aug 06, 2024, 12:30 AM IST
 ಮುಂಡರಗಿ ತೋಂಟದಾರ್ಯ ಮಠದಲ್ಲಿ ಸೋಮವಾರ ಆಷಾಢ ಮಾಸದ ಅಂಗವಾಗಿ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ ಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು. ಮುಂಡರಗಿ ತೋಂಟದಾರ್ಯ ಮಠದಲ್ಲಿ ಸೋಮವಾರ ಆಷಾಢ ಮಾಸದ ಅಂಗವಾಗಿ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಪಲ್ಲಕ್ಕಿ ಹೊರುವ ಮೂಲಕ ಪಲ್ಲಕ್ಕಿ ಉತ್ಸವ ನಡೆಸಿದರು. | Kannada Prabha

ಸಾರಾಂಶ

ಮಹಿಳೆ ಕುಟುಂಬದ ಜವಾಬ್ದಾರಿ ಹೊತ್ತು ಮನೆ ನಡೆಸುತ್ತಿರುವಾಗ ಗಂಡು ಹೆಣ್ಣೆಂಬ ಬೇಧ ಸರಿಯಲ್ಲ ಎಂದು ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಮುಂಡರಗಿ: ಶರಣ ಧರ್ಮದಲ್ಲಿ ಹೆಣ್ಣು-ಗಂಡೆಂಬ ಭೇದ ಭಾವವಿಲ್ಲ. ಕಳೆದ ವರ್ಷ ಆಷಾಢ ಮಾಸದ ಪ್ರವಚನ ಮಂಗಲೋತ್ಸವದ ದಿನ ಮೊಟ್ಟ ಮೊದಲ ಬಾರಿಗೆ ಮಹಿಳೆಯರು ಪಲ್ಲಕ್ಕಿ ಹೊತ್ತು ಮೆರವಣಿಗೆ ಮಾಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಮುಂಡರಗಿ ತೋಂಟದಾರ್ಯ ಮಠ ಹೊಸ ಅಧ್ಯಾಯ ಪ್ರಾರಂಭಿಸಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ಬೆಳಗ್ಗೆ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ 15 ದಿನಗಳ ಕಾಲ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ ಮಂಗಲೋತ್ಸವದಲ್ಲಿ ಬಸವಣ್ಣನವರು ಹಾಗೂ ಎಡೆಯೂರು ಸಿದ್ದಲಿಂಗೇಶ್ವರರ ಭಾವಚಿತ್ರ ಮತ್ತು ವಚನ ಗ್ರಂಥಗಳ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆ ಕುಟಂಬದ ಜವಾಬ್ದಾರಿ ಹೊತ್ತು ಮನೆ ನಡೆಸುತ್ತಿರುವಾಗ ಗಂಡು ಹೆಣ್ಣೆಂಬ ಬೇಧ ಸರಿಯಲ್ಲ. ಬಸವಾದಿ ಶಿವಶರಣರ ದೃಷ್ಟಿಯಲ್ಲಿ ಗಂಡು-ಹೆಣ್ಣು ಇಬ್ಬರೂ ಸರಿ ಸಮಾನರು. ಹೀಗಾಗಿಯೇ ಮಹಿಳೆಯರಿಂದ ಪಲ್ಲಕ್ಕಿ ಹೊರುವ ಪದ್ಧತಿ ಪ್ರಾರಂಭಿಸಲಾಗಿದೆ. ಈ ಪಲ್ಲಕ್ಕಿ ಉತ್ಸವ ಜಂಗಮಾತ್ಮಕ ವಿಚಾರವಾಗಿದೆ ಎಂದರು. ಶ್ರೀಮಠದಿಂದ ಹೊರಟ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಅಂಚೆ ಕಚೇರಿ ಓಣಿ, ಬಜಾರ, ಜಾಗೃತ ವೃತ್ತ, ಕೋಟೆಭಾಗ ಸೇರಿದಂತೆ ವಿವಿಧೆಡೆಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಅಲ್ಲಿಂದ ಶ್ರೀಮಠಕ್ಕೆ ತಲುಪಿತು. ನಂತರ ಮಠದಲ್ಲಿ ಮಹಾಪ್ರಸಾದ ಜರುಗಿತು.

ಈ ಸಂದರ್ಭದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಕಾರ್ಯದರ್ಶಿ ಅಡಿವೆಪ್ಪ ಛಲವಾದಿ, ಕೊಟ್ರೇಶ ಅಂಗಡಿ, ಆನಂದಗೌಡ ಪಾಟೀಲ, ಈಶಣ್ಣ ಬೆಟಗೇರಿ, ಎಚ್. ವಿರೂಪಾಕ್ಷಗೌಡ, ಅಶೋಕ ಹುಬ್ಬಳ್ಳಿ, ದೇವಪ್ಪ ರಾಮೇನಹಳ್ಳಿ, ಬಸಯ್ಯ ಗಿಂಡಿಮಠ, ಪಾಲಾಕ್ಷಿ ಗಣದಿನ್ನಿ, ನಾಗೇಶ ಅಜ್ಜವಾಡಿಮಠ, ಶೇಖರ ಜುಟ್ಲಣ್ಣವರ, ದೇವು ಹಡಪದ, ಸದಾಶಿವಯ್ಯ ಕಬ್ಬೂರಮಠ, ಶಿವಕುಮಾರ ಬೆಟಗೇರಿ, ವೀರೇಂದ್ರ ಅಂಗಡಿ, ವಿಶ್ವನಾಥ ಉಳ್ಳಾಗಡ್ಡಿ, ಗಿರೀಶಗೌಡ ಪಾಟೀಲ, ಉಮೇಶ ಹಿರೇಮಠ, ಸಿದ್ದಲಿಂಗೇಶ ಕಬ್ಬೂರಮಠ, ಧ್ರುವಕುಮಾರ ಹೂಗಾರ, ಶಿವನಗೌಡ ಗೌಡರ್ ಉಪಸ್ಥಿತರಿದ್ದರು.

ಮಂಗಲಾ ಶೀರಿ, ಮಂಗಳಾ ಕರ್ಜಗಿ, ಸುಕನ್ಯಾ ಕಬ್ಬೂರಮಠ, ಮಂಜುಶ್ರೀ ಅಂಗಡಿ. ನೀಲಮ್ಮ ಗಿಂಡಿಮಠ. ಪುಷ್ಪಾ ಶೀರಿ, ಶಿವಗಂಗಾ ನವಲಗುಂದ ಸೇರಿದಂತೆ ಅನೇಕ ಮಹಿಳೆಯರು ಪಲ್ಲಕ್ಕಿ ಹೊತ್ತು ಮೆರವಣಿಗೆ ಮಾಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ