ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ

KannadaprabhaNewsNetwork |  
Published : May 30, 2025, 12:09 AM IST
೨೯ಕೆಎಲ್‌ಆರ್-೧೩ಮಾಲೂರು ಶಾಸಕ ಕೆ.ವೈ.ನಂಜೇಗೌಡ ಭಾವಚಿತ್ರ. | Kannada Prabha

ಸಾರಾಂಶ

ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪಿಲ್ಲ, ಡಿಸಿಸಿ ಚುನಾವಣೆಯಲ್ಲಿ ಪಕ್ಷದ ೬ ಜನರು ಅವಿರೋಧ ಆಯ್ಕೆಯಾಗಿದ್ದಾರೆ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್ ಅಭ್ಯರ್ಥಿ ಅಲ್ಲ, ಅವರ ವಿರುದ್ದ ಸ್ಪರ್ಧಿಸಿದ್ದ ಶ್ರೀನಿವಾಸ್ ಪಕ್ಕಾ ಕಾಂಗ್ರೆಸ್ ಅಭ್ಯರ್ಥಿ. ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ಅಲ್ಲಿರುವುದು ಕೇವಲ ಕಾಂಗ್ರೆಸ್ ಬಣ ಮಾತ್ರ

ಕನ್ನಡಪ್ರಭ ವಾರ್ತೆ ಕೋಲಾರಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್ ಅಭ್ಯರ್ಥಿ ಅಲ್ಲ. ಇಲ್ಲಿ ಬಣ ಇಲ್ಲ. ನಮ್ಮದು ಕಾಂಗ್ರೆಸ್ ಬಣ, ಸರಿಯಾದ ಆಡಳಿತ ನೀಡದೆ ಒನ್ ಮ್ಯಾನ್ ಶೋ ಆದ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಆಗಿದೆ ಎಂದು ಮಾಲೂರು ಕೈ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಕೋಲಾರದಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ಬರಲಿದೆ, ಕೆಲವು ಕಾರಣಾಂತರಗಳಿಂದ ಮಹಿಳೆಯರಿಗೆ, ರೈತರಿಗೆ ಸಾಲ ವಿತರಣೆ ನಿಂತಿತ್ತು, ಈ ಕಾರ್ಯಕ್ರಮಗಳು ಮತ್ತೆ ಆರಂಭವಾಗಲಿವೆ ಎಂದರು.ನಮ್ಮದು ಕಾಂಗ್ರೆಸ್‌ ಬಣ

ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪಿಲ್ಲ, ನಮ್ಮದೆ ಪಕ್ಷದ ೬ ಜನರು ಅವಿರೋಧ ಆಯ್ಕೆಯಾಗಿದ್ದಾರೆ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್ ಅಭ್ಯರ್ಥಿ ಅಲ್ಲ, ಅವರ ವಿರುದ್ದ ಇರುವ ಶ್ರೀನಿವಾಸ್ ಪಕ್ಕಾ ಕಾಂಗ್ರೆಸ್ ಅಭ್ಯರ್ಥಿ ಎನ್ನುವ ಮೂಲಕ ಬಣ ಇಲ್ಲ. ನಮ್ಮದು ಕಾಂಗ್ರೆಸ್ ಬಣ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಟಾಂಗ್ ನೀಡಿದರು. ಬಂಗಾರಪೇಟೆ ಕೈ ಶಾಸಕ ನಾರಾಯಣಸ್ವಾಮಿಗೆ ತಿರುಗೇಟು ತಿರುಗೇಟು ನೀಡಿದ ಅವರು. ನಮ್ಮದು ಪಟಾಲಂ ಅಲ್ಲ, ಕಾಂಗ್ರೆಸ್ ಪಾರ್ಟಿ, ಸಿದ್ದಾಂತ, ನಾವೆಲ್ಲಾ ಕಾಂಗ್ರೆಸ್ ಪಕ್ಷವನ್ನ ಕಟ್ಟುವ ನಿಷ್ಠಾವಂತ ಕಾರ್ಯಕರ್ತರು, ನಾನು ಹಿರಿಯ ಶಾಸಕ ಎನ್ನುವ ಅವರ ಹೆಸರಿಗೆ ಹೀಗೆ ಮಾತನಾಡುವುದು ಶೋಭೆ ತರಲ್ಲ ಎ₹ದರು.

ಲೋಕಾಗೆ ರಾಜಕೀಯ ಬಣ್ಣ

ಶಾಸಕ ನಾರಾಯಣಸ್ವಾಮಿ ದಲಿತ ಮುಖಂಡರಿಗೆ ಮೋಸ ಮಾಡಿದ್ದಾರೆ. ಗೋವಿಂದರಾಜು ಅವರಿಗೆ ಟಿಕೇಟ್ ಕೊಡದೆ ಅವರೆ ದಲಿತರಿಗೆ ಮೋಸ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ತುಂಬಾ ಹಗರಣಗಳಾಗಿದೆ. ಅದನ್ನೆಲ್ಲಾ ನೋಡಿದಾಗ ನನಗೆ ಭಯ ಬಂದಿತ್ತು, ಲೋಕಾಯುಕ್ತರನ್ನ ನಾವು ದರ್ಬಳಕೆ ಮಾಡಿಕೊಂಡಿಲ್ಲ, ಲೋಕಾಯುಕ್ತ ದಾಳಿಗೆ ರಾಜಕೀಯ ಬಣ್ಣ ಕಟ್ಟುವುದು ಬೇಡ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್ ಸೌಲಭ್ಯ ಸದುಪಯೋಗಪಡೆಯಿರಿ: ರೈತರಿಗೆ ಸತೀಶ್ ಸಲಹೆ
ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ