- ಹೈಕಮಾಂಡ್ ನೋಟಿಸ್ ನೀಡಿದಾಗಿನಿಂದ ಮಾತನಾಡಿಲ್ಲ, ಮಾತನಾಡಲ್ಲ - - -
ದೆಹಲಿ ಹೈವೋಲ್ಟೇಜ್ ಮೀಟಿಂಗ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನೀವು ಸಭೆಗೆ ಹೋಗಿರುವವರನ್ನಾದರೂ ಕೇಳಬೇಕು, ಇಲ್ಲವೇ ಸಭೆಯನ್ನು ಕರೆದವರನ್ನಾದರೂ ಕೇಳಬೇಕು. ಇಲ್ಲಿ ದಾವಣಗೆರೆಯಲ್ಲಿ ಇರುವವರಿಗೆ ಆ ಸಭೆ ಬಗ್ಗೆ ಹೇಗೆ ಗೊತ್ತಾಗುತ್ತದೆ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ.ಶಿವಗಂಗಾ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಸಭೆ ಬಗ್ಗೆ ದಯವಿಟ್ಟು ನನಗೆ ಏನೂ ಕೇಳಬೇಡಿ, ನಾನು ಏನನ್ನೂ ಮಾತನಾಡುವುದಿಲ್ಲ. ಯಾವುದನ್ನೂ ಮಾತನಾಡದಂತೆ ಹೈಕಮಾಂಡ್ ಆದೇಶವಿದೆ. ಹಾಗಾಗಿ ನಾವ್ಯಾರೂ ಶಾಸಕರು ಯಾವುದೇ ವಿಚಾರ ಮಾತನಾಡುವುದಿಲ್ಲ ಎಂದರು.ಈಗ ಮಾತನಾಡುವ ಸಮಯವೂ ಅಲ್ಲ. ದೆಹಲಿ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ. ದೆಹಲಿ ಸಭೆ ಬಗ್ಗೆ ನನಗೆ ಕೇಳಿದರೆ ನನ್ನ ಉತ್ತರ ನೋ ಕಾಮೆಂಟ್ಸ್ ಅಷ್ಟೇ. ನಾನು ಎಲ್ಲಿಗೂ ಹೋಗುವುದಿಲ್ಲ. ಇಡೀ ವಾರ ನನ್ನ ಚನ್ನಗಿರಿ ಕ್ಷೇತ್ರದಲ್ಲೇ ಇರುತ್ತೇನೆ. ದೆಹಲಿಗೆ ಹೋದವರು ವೈಯಕ್ತಿಕ ಕೆಲಸಕ್ಕಾಗಿ ಹೋಗಿದ್ದಾರೇನೋ ಗೊತ್ತಿಲ್ಲ. ನನ್ನ ಯಾವುದೇ ಕೆಲಸ ಅಲ್ಲಿ ಇಲ್ಲ ಎಂದು ಅವರು ತಿಳಿಸಿದರು.
- - -