ಬಿಜೆಪಿಯಲ್ಲಿ ಲೀಡರ್‌ ಇಲ್ಲ, 20 ಗುಂಪುಗಳಿವೆ: ಎಂ.ಬಿ.ಪಾಟೀಲ

KannadaprabhaNewsNetwork |  
Published : Mar 30, 2026, 03:30 AM IST
(ಫೋಟೊ29ಬಿಕೆಟಿ10, ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್  ಅವರು ಬಾಗಲಕೋಟೆಯಲ್ಲಿ ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು,) | Kannada Prabha

ಸಾರಾಂಶ

ಬಾಗಲಕೋಟೆ: ಬಿಜೆಪಿಯಲ್ಲಿ ಏನಿದೆ? ಬಿಜೆಪಿಯಲ್ಲಿ ಯಾರು ಲೀಡರ್ ಗಳಿದ್ದಾರೆ? ದೇರ್ ಇಸ್ ನೋ ಲೀಡರ್ಸ್‌ ಇನ್ ಬಿಜೆಪಿ., ಬಿಜೆಪಿಯಲ್ಲಿ 20 ಬಾಗಿಲುಗಳಾಗಿವೆ. 20 ಗ್ರೂಪ್ ಗಳಾಗಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಬಾಗಲಕೋಟೆ: ಬಿಜೆಪಿಯಲ್ಲಿ ಏನಿದೆ? ಬಿಜೆಪಿಯಲ್ಲಿ ಯಾರು ಲೀಡರ್ ಗಳಿದ್ದಾರೆ? ದೇರ್ ಇಸ್ ನೋ ಲೀಡರ್ಸ್‌ ಇನ್ ಬಿಜೆಪಿ., ಬಿಜೆಪಿಯಲ್ಲಿ 20 ಬಾಗಿಲುಗಳಾಗಿವೆ. 20 ಗ್ರೂಪ್ ಗಳಾಗಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್. ಅಶೋಕ ಒಂದು ಗ್ರೂಪ್, ವಿಜಯೇಂದ್ರ ಒಂದು ಗ್ರೂಪ್. ಹಾಗೆ ಇನ್ನೊಂದಿಷ್ಟು ಜನರಿದ್ದಾರೆ. ಎಲ್ಲರದು ಒಂದೊಂದು ಗ್ರೂಪ್ ಇವೆ. 20 ಗ್ರೂಪ್ ಗಳಾಗಿ ಬಿಜೆಪಿ ವಿಂಗಡಣೆಯಾಗಿದೆ. ಬಿಜೆಪಿಯಲ್ಲಿ ಏನೂ ಉಳಿದಿಲ್ಲ ಎಂದು ಪಾಟೀಲ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಇದ್ದಂತೆ ಎಂಬ ಬಸನಗೌಡ ಯತ್ನಾಳ ಅವರ ಹೇಳಿಕೆಗೆ ತಿರುಗೇಟು ನೀಡಿದ ಪಾಟೀಲ, ಯತ್ನಾಳ್ ಅವರ ಮೆದುಳು ನಾಲಿಗೆಗೆ ಲಿಂಕ್ ಇಲ್ಲ. ಜೆಡಿಎಸ್ ನಲ್ಲಿದ್ದಾಗ ಯತ್ನಾಳ್ ನನ್ನ ಜೊತೆಗೆ ನಮಾಜ್ ಗೆ ಬಿದ್ದಿದ್ದರು. ಮುಸ್ಲಿಂ ಟೋಪಿ ಹಾಕಿದ್ದರು , ಟಿಪ್ಪು ಜಯಂತಿ ಮಾಡಿದರು. ಜೆಡಿಎಸ್ ನಲ್ಲಿದ್ದಾಗ ಅಲ್ಲಾ ಹು ಅಕ್ಬರ್ ಅಂದ್ರು ಈಗ? ನಾವು ಆ ರೀತಿ ಅಲ್ಲ,ನಾನು 24 ವರ್ಷದಿಂದ ಪ್ರತಿ ವರ್ಷ ರಮ್ಜಾನ್ ನಲ್ಲಿ ನಮಾಜ್ ಮಾಡುತ್ತಿದ್ದೇನೆ ಎಂದು ಹೇಳಿದರು.

ಬಾಗಲಕೋಟೆ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಕ್ಕೂ ಇದು ಪ್ರತಿಷ್ಠೆಯ ಚುನಾವಣೆ. ನಿಜವಾದರೂ ಸಹ ಇದು ಜನರಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ, ಜನರೇ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

2028 ರ ದಿಕ್ಸೂಚಿನಾ ಎಂಬ ಪ್ರಶ್ನೆಗೆ ನಾವು ನುಡಿದಂತೆ ನಡೆದಿದ್ದೇವೆ, ಗ್ಯಾರಂಟಿಗಳ ಬಗ್ಗೆ ಹೇಳಿದ್ವಿ, ಗ್ಯಾರಂಟಿಗಳನ್ನ ಕೊಟ್ಟಿದ್ದೇವೆ ಅವರು ಏನು ಮಾಡಿದ್ದಾರೆ. ಎಂದು ಬಿಜೆಪಿಯವರನ್ನು ಪ್ರಶ್ನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು