ತಾಯಿಗಿಂತ ಮಿಗಿಲಾದ ವ್ಯಕ್ತಿ ಜಗತ್ತಿನಲ್ಲಿ ಮತ್ತೊಂದಿಲ್ಲ

KannadaprabhaNewsNetwork | Published : Nov 25, 2024 1:02 AM

ಸಾರಾಂಶ

ಇಡಿ ಕುಟುಂಬ ವ್ಯವಸ್ಥೆಯ ಆಧಾರ ಸ್ಥಂಬವಾಗಿ ಮಹಿಳೆ ನಿಲ್ಲುತ್ತಾಳೆ. ತನ್ನ ಸಂಕಟ ಮರೆಮಾಚಿ ಇತರರ ಶ್ರೇಯೋಭಿವೃದ್ಧಿ ಸಮರ್ಪಣಾ ಭಾವದಿಂದ ದುಡಿಯುತ್ತಿರುವರಿಂದ ಇಂದು ಸಮಾಜದಲ್ಲಿ ಸ್ವಾಸ್ಥ್ಯವಿದೆ

ಗದಗ: ತಾಯಿ ದೇವರ ಮತ್ತೊಂದು ರೂಪ. ದುಃಖ, ದುಮ್ಮಾನಗಳನ್ನು ನುಂಗಿ ಮಕ್ಕಳ ಭವಿಷ್ಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಜೀವ. ರಕ್ಷಣೆ, ಆಶ್ರಯ, ಅಭಯ ನೀಡಿ ಮಕ್ಕಳ ಹಾದಿಗೆ ಬೆಳಕಾಗುತ್ತಾಳೆ. ತಾಯಿಗಿಂತ ಮಿಗಿಲಾದ ವ್ಯಕ್ತಿ ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದು ಸರ್ಕಾರಿ ಪ್ರೌಢಶಾಲೆ ಅಧ್ಯಾಪಕಿ ಸಂಜೀವಿನಿ ಕೂಲಗುಡಿ ಹೇಳಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜರುಗಿದ ಶೇಕುಬಾಯಿ ಎಲ್. ದೇಸಾಯಿ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡಿ ಕುಟುಂಬ ವ್ಯವಸ್ಥೆಯ ಆಧಾರ ಸ್ಥಂಬವಾಗಿ ಮಹಿಳೆ ನಿಲ್ಲುತ್ತಾಳೆ. ತನ್ನ ಸಂಕಟ ಮರೆಮಾಚಿ ಇತರರ ಶ್ರೇಯೋಭಿವೃದ್ಧಿ ಸಮರ್ಪಣಾ ಭಾವದಿಂದ ದುಡಿಯುತ್ತಿರುವರಿಂದ ಇಂದು ಸಮಾಜದಲ್ಲಿ ಸ್ವಾಸ್ಥ್ಯವಿದೆ ಎಂದರು.

ವೈದ್ಯ ಡಾ. ಕುಶಾಲ ಗೋಡಖಿಂಡಿ ಮಾತನಾಡಿ, ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಅಮೋಘವಾದುದು. ಕುಟುಂಬ ನಿರ್ವಹಣೆ, ಸಕಾಲಿಕ ಮಾರ್ಗದರ್ಶನ, ಪಾಲನೆ ಪೋಷಣೆಯಲ್ಲಿ ಸಮರ್ಥ ಪಾತ್ರ ನಿರ್ವಹಿಸಿ ದಡ ಸೇರಿಸುವ ಕಾರ್ಯ ಮಹಿಳೆಯಿಂದ ನಡೆಯುತ್ತದೆ ಎಂದು ತಿಳಿಸಿದರು.

ದತ್ತಿ ದಾನಿಗಳಾದ ಡಾ. ಧನೇಶ ದೇಸಾಯಿ ಮಾತನಾಡಿ, ಶೇಕುಬಾಯಿ ಶಿಕ್ಷಣ, ಸಂಗೀತದಲ್ಲಿ ಆಸಕ್ತಿ ಹೊಂದಿ ಪರಹಿತ ಬಯಸುವ ಆದರ್ಶ ಗುಣಗಳ ಗಣಿಯಾಗಿದ್ದರು ಎಂದರು.

ಈ ವೇಳೆ ಮಮತಾಜಬಿ ಬಾಬುಸಾಬ ಕುಸುಗಲ್ ಅವರಿಗೆ ಪ್ರಶಸ್ತಿ ಫಲಕ ಹಾಗೂ ₹5 ಸಾವಿರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಪ್ರೊ. ಚಂದ್ರಶೇಖರ ವಸ್ತ್ರದ, ಡಾ. ಉಮೇಶ ಪುರದ, ಸುರೇಶ ಟಾಕರೆಪ್ಪ ಲಮಾಣಿ, ಶಿಕ್ಷಕಿ ರತ್ನಾ, ಡಾ.ಎಂ.ಎನ್.ಅಂಬಲಿ, ಕೆ.ಎ.ಬಳಿಗೇರ ಹಾಗೂ ಸುರೇಶ ಕುಂಬಾರ ಅವರನ್ನು ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಐ.ಎಲ್. ದೇಸಾಯಿ, ಲಕ್ಷ್ಮೀ ದೇಸಾಯಿ, ಡಾ.ಪ್ರಭಾ ದೇಸಾಯಿ, ರತ್ನಕ್ಕ ಪಾಟೀಲ, ಡಾ. ಶರಣ್ ಆಲೂರ, ಬಿ.ಎಸ್. ಹಂಡಿ, ಪ್ರೊ.ಸಿದ್ದಲಿಂಗೇಶ ಸಜ್ಜನಶೆಟ್ಟರ, ಪ್ರ.ತೋ. ನಾರಾಯಣಪುರ, ಅಶೋಕ ಸುತಾರ, ಆರ್.ಡಿ.ಕಪ್ಪಲಿ, ಶೈಲಶ್ರೀ ಎಸ್.ಕಪ್ಪರದ, ಶಾರದಾ ಬಾಣದ, ರಾಜೇಶ್ವರಿ ಬಡ್ನಿ, ಡಾ. ಅಕ್ಕಮಹಾದೇವಿ ರೊಟ್ಟಿಮಠ, ಜಿ.ಎ. ಪಾಟೀಲ, ಸಿ.ಎಂ.ಮಾರನಬಸರಿ, ಆರ್.ಕೆ. ಮೋನೆ, ತನ್ವಿ ಮೋನೆ, ರವಿಂದ್ರ ಡಂಬಳ, ರಮೇಶ ಭೀಮಪ್ಪ ಚವ್ಹಾಣ, ರಾಜಕುಮಾರ ಕಟ್ಟಿಮನಿ, ಸೋಮಶೇಖರಯ್ಯ ಚಿಕ್ಕಮಠ, ಡಾ. ಬಿ.ಬಿ.ಹೊಳಗುಂದಿ, ಉಮಾ ಕಣವಿ, ಶಿಲ್ಪಾ ಮ್ಯಾಗೇರಿ, ರತ್ನಾ ಪುರಂತರ, ಮಂಜುಳಾ ವೆಂಕಟೇಶಯ್ಯ, ಅನಸೂಯಾ ಮಿಟ್ಟಿ, ನೀಲಮ್ಮ ಅಂಗಡಿ, ಕೆ.ಜಿ. ಹೊನ್ನಾದೇವಿ, ಶ್ವೇತಾ ಸಾಲ್ಮನಿ, ಪರಶುರಾಮ, ಶಾಂತಲಾ ಹಂಚಿನಾಳ, ಕೆ.ಜಿ. ವ್ಯಾಪಾರಿ, ಅಮರೇಶ ರಾಂಪುರ, ಸುನೀಲ ಇಂಗಳಗಿ, ಎಸ್.ಎಸ್. ಸೂಳಿಕೇರಿ, ದಾನಯ್ಯ ಗಣಾಚಾರಿ, ಎಸ್.ಎಸ್. ಕಳಸಾಪುರಶೆಟ್ಟರ್‌ ಮುಂತಾದವರು ಇದ್ದರು.

ಪ್ರಸಾದ ಸುತಾರ ಹಾಗು ಗುರುನಾಥ ಸುತಾರರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಕವಿತಾ ಗುಜಮಾಗಡಿ ನಿರೂಪಿಸಿದರು. ಕೋಶಾಧ್ಯಕ್ಷ ಡಿ.ಎಸ್. ಬಾಪುರಿ ವಂದಿಸಿದರು.

Share this article