ನಮ್ಮನ್ನು ತಡೆಯೋರು ಯಾರು ಇಲ್ಲ: ಶಾಸಕ ಸಮೃದ್ಧಿ ಮಂಜುನಾಥ್‌

KannadaprabhaNewsNetwork |  
Published : Jul 11, 2025, 01:47 AM IST
೧೦ಕೆಎಲ್‌ಆರ್-೧೮ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್. | Kannada Prabha

ಸಾರಾಂಶ

ನಾನು ಡಿಸಿಸಿ ಬ್ಯಾಂಕ್ ಹಾಗೂ ಕೊಮುಲ್ ಚುನಾವಣೆಯಲ್ಲಿ ಪಕ್ಷ ಬೆಂಬಲಿಸಿದವರನ್ನು ಗೆಲ್ಲುವಂತೆ ಮಾಡಿದೆ. ಆಗ ನನ್ನ ಬಗ್ಗೆ ಬರೆಯಲಿಲ್ಲ. ಶಾಸಕರಾಗಿರುವುದರಿಂದ ನಮಗೂ ಕುಟುಂಬ ಜೀವನ ಇರಬಾರದೇ? ಪ್ರವಾಸಕ್ಕೆ ಹೋಗಬಾರದೇ? ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಇಬ್ಬರು ಶಾಸಕರು, ಒಬ್ಬರು ಎಂಎಲ್‌ಸಿ ಹಾಗೂ ಒಬ್ಬರು ಸಂಸದರಿದ್ದಾರೆ. ಜಿಲ್ಲೆಯ ಜನರ ಭಾರಿ ಬೆಂಬಲವಿದೆ. ನಾವು ಎಲ್ಲರೂ ಒಗ್ಗಟ್ಟಾಗಿ ಸಂಘಟಿತವಾಗಿ ನಿಂತರೆ ನಮ್ಮನ್ನು ತಡೆಯೋರು ಯಾರು ಇಲ್ಲ ಎಂದು ಶಾಸಕ ಸಮೃದ್ಧಿ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಬೈರೇಗೌಡ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ನನ್ನ ವಿರುದ್ಧ ತಪ್ಪು ಪ್ರಚಾರ ನಡೆಸುತ್ತಿವೆ. ನಾನು ವಿದೇಶ ಪ್ರವಾಸದಲ್ಲಿದ್ದಾಗ ಪಕ್ಷದ ವರಿಷ್ಠರೊಂದಿಗೆ ಸಂಪರ್ಕವಿಲ್ಲ ಎಂದು ತಪ್ಪು ಮಾಹಿತಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸಬಾರದೆಂದು ಅಭಿಪ್ರಾಯಪಟ್ಟರು.ನಾನು ಡಿಸಿಸಿ ಬ್ಯಾಂಕ್ ಹಾಗೂ ಕೊಮುಲ್ ಚುನಾವಣೆಯಲ್ಲಿ ಪಕ್ಷ ಬೆಂಬಲಿಸಿದವರನ್ನು ಗೆಲ್ಲುವಂತೆ ಮಾಡಿದೆ. ಆಗ ನನ್ನ ಬಗ್ಗೆ ಬರೆಯಲಿಲ್ಲ. ಶಾಸಕರಾಗಿರುವುದರಿಂದ ನಮಗೂ ಕುಟುಂಬ ಜೀವನ ಇರಬಾರದೇ? ಪ್ರವಾಸಕ್ಕೆ ಹೋಗಬಾರದೇ? ಎಂದು ಪ್ರಶ್ನಿಸಿದರು.ಕಾಂಗ್ರೆಸ್‌ನಲ್ಲಿ ನೀತಿ ಇದೆಯಾ:ಕೋಲಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಅರಾಜಕತೆ ಬಗ್ಗೆ ಮಾಧ್ಯಮಗಳು ಮೌನವಹಿಸುತ್ತಿದ್ದು, ದಲಿತರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ದೌಜನ್ಯ ರಾಜಕಾರಣ ಎಲ್ಲರಿಗೂ ಗೊತ್ತಿದೆ, ದಲಿತ, ದಲಿತಪರ, ಡೂಪ್ಲಿಕೇಟ್ ದಲಿತ ಎಲ್ಲರೂ ಸೇರಿ ಕೆ.ಎಚ್. ಮುನಿಯಪ್ಪರನ್ನು ಓಡಿಸಿದರು, ನಂತರ ಎಸ್. ಮುನಿಸ್ವಾಮಿರನ್ನು ಓಡಿಸಿದರು, ಮುಂದಿನ ಟಾರ್ಗೆಟ್ ಎಸ್.ಎನ್.ನಾರಾಯಣಸ್ವಾಮಿ, ಮುಂದೆ ನಾನಾಗಬಹುದು ಎಂದರು.ದಲಿತ ಶಾಸಕರ ಮೇಲೆ ನಡೆಯುವ ದ್ವಂದ್ವ ನೀತಿಗೆ ಮಾಧ್ಯಮಗಳು ಮೌನವಹಿಸುತ್ತಿವೆ, ಕಾಂಗ್ರೆಸ್ ಪಕ್ಷದವರಲ್ಲಿ ನೀತಿ ಎಲ್ಲಿದೆ ಎಂದು ವ್ಯಂಗ್ಯವಾಡಿದರು.ಜೆಡಿಎಸ್ ಗುಂಪುಗಾರಿಕೆ ಇಲ್ಲ:ನಾವೇನಾದರು ಸಿಕ್ಕರೆ ಜೆಡಿಎಸ್‌ನಲ್ಲಿ ಗುಂಪುಗಾರಿಕೆ ಎಂದು ಬೊಬ್ಬೆ ಹೊಡೆಯುತ್ತೀರ, ಗುಂಪುಗಾರಿಕೆ ಎಲ್ಲಿ ಇಲ್ಲ ಎಂದು ಪ್ರಶ್ನಿಸಿದರು.ಮಲ್ಲೇಶ್ ಬಾಬು ಬಂಗಾರಪೇಟೆಗೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ತೀವ್ರ ಪ್ರತಿಕ್ರಿಯಿಸಿದ ಮಲ್ಲೇಶ್ ಬಾಬು, “ನಾನು ಮಾಡುತ್ತಿರುವ ಕೆಲಸಗಳು ನನ್ನ ಉತ್ತರ. ಕಳೆದ 30 ವರ್ಷಗಳಿಂದ ಆಗದಿದ್ದ ಸ್ಯಾನಿಟೋರಿಯಮ್, ಎಸ್‌ಎನ್ ರೆಸಾರ್ಟ್ ಮತ್ತು ದೇಶಿಹಳ್ಳಿ ಬಳಿಯ ರೈಲ್ವೆ ಮೇಲು ಸೇತುವೆ ಯೋಜನೆಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ” ಎಂದು ಹೇಳಿದರು.ಸರ್ಕಾರದ ವಿರುದ್ಧ ವಾಗ್ದಾಳಿ:ಇದು ಕಮೀಷನ್ ಸರ್ಕಾರವಲ್ಲ, ಪರ್ಚೇಸ್ ಸರ್ಕಾರ. ಕೊಡು-ತಗೋ ಎಂಬುದು ರಾಜ್ಯ ಆಡಳಿತದ ಹೊಸ ಮಾರ್ಗವಾಗಿದೆ. ಯಾರಿಗಾಗಲಿ ಹಣ ಕೊಟ್ಟು ಕೆಲಸ ಪಡೆಯುವ ಅವಸ್ಥೆ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV