ಕನ್ನಡಪ್ರಭ ವಾರ್ತೆ ಆನಂದಪುರ / ಭದ್ರಾವತಿ
ಮೋದಿಗೆ ಎದುರಾಳಿ ರಾಜಕೀಯ ನಾಯಕರೇ ಇಲ್ಲ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು,ಅವರು ಇಲ್ಲಿಗೆ ಸಮೀಪದ ಗೌತಮಪುರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಮಗ್ರ ದೇಶದ ಅಭಿವೃದ್ಧಿಯ ನಾಯಕ ಮೋದಿ. ದೇಶಕ್ಕೆ ಮೋದಿ ಬೇಕು ಎಂದು ತಿಳಿಸಿದರು.
ಬಿಜೆಪಿಯಲ್ಲಿ ಮೋದಿ ಪ್ರಧಾನಮಂತ್ರಿ ಎಂದು ಹೇಳಲಾಗಿದೆ. ಆದರೆ, ಎನ್‌ಡಿಎ ಮೈತ್ರಿಕೂಟದಲ್ಲಿ ಯಾರು ಪ್ರಧಾನಿ ವ್ಯಕ್ತಿ ಯಾರನ್ನೂ ಗುರುತಿಸಿಲ್ಲ. ಹಾಗಾಗಿ ಮೋದಿಗೆ ಎದುರಾದ ರಾಜಕೀಯ ನಾಯಕರೇ ಇಲ್ಲದಂತಾಗಿದೆ. ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಹಾಗೂ ಬಂಗಾರಪ್ಪನವರ ಕಾಲ ಹೋರಾಟದ ಕಾಲವಾಗಿತ್ತು. ಈಗ ಅಭಿವೃದ್ಧಿಯ ದಿನಗಳ ಕಾಲವಾಗಿದೆ. ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಕಾರ್ಯವನ್ನು ದೇಶ ಹಾಗೂ ಇತರ ದೇಶಗಳು ಕೊಂಡಾಡು ತ್ತಿವೆ ಎಂದರು.ರಾಜ್ಯದಲ್ಲಿ ಒಂದು ವರ್ಷದಿಂದ ಯಾವುದೇ ಒಂದು ಅಭಿವೃದ್ಧಿ ಕಾರ್ಯವಾಗುತ್ತಿಲ್ಲ. ಹಿಂದಿನ ಸರ್ಕಾರ ಮಾಡಿದಂತ ಅಭಿವೃದ್ಧಿ ಕಾರ್ಯವನ್ನೇ ಮುಂದುವರಿಸುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ ಎಂದರು.
ಜಿಪಂ ಮಾಜಿ ಸದಸ್ಯ ರತ್ನಾಕರ್ ಹೊನಗೋಡ್ ಮಾತನಾಡಿ, ಲೋಕಸಭಾ ಚುನಾವಣೆ ಯಾವುದೇ ಜಾತಿಯ ಆಧಾರ ಮೇಲೆ ನಡೆಯುವುದಿಲ್ಲ ಇದು ಅಭಿವೃದ್ಧಿಯ ಪ್ರರ ಚುನಾವಣೆ. ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕರೆ ನೀಡಿದರು.ದೇಶದಲ್ಲಿನ ಹೆದ್ದಾರಿಯ ಅಭಿವೃದ್ಧಿ, ರೈಲ್ವೆ ಅಭಿವೃದ್ಧಿ, ಮನೆಮನೆ ಗಂಗೆ ಯೋಜನೆ, ರೈತರಿಗೆ, ಕಾರ್ಮಿಕರಿಗೆ, ವ್ಯಾಪಾರಸ್ಥ ರಿಗೆ ಅನೇಕ ಯೋಜನೆಗಳ ಮೂಲಕ ಸಹಕಾರ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯರು ಕಾಂಗ್ರೆಸ್ಸನ್ನು ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಸಾಗರದ ತಾಲೂಕು ಪಂಚಾಯತ್ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಆನೆಯ ಬಲಬಂದಂತಾಗಿದೆ. ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಹರಿಕಾರ ಬಿ.ವೈ.ರಾಘವೇಂದ್ರ ರವರ ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವುದರೊಂದಿಗೆ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಯಾಗಲು ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಹಕ್ರೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಕಾಗೋಡು ತಿಮ್ಮಪ್ಪನವರ ನಾಯಕತ್ವವಿಲ್ಲದೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ದೇಶ ಕಾಯುವ ನರೇಂದ್ರ ಮೋದಿಯನ್ನು ಬೆಂಬಲಿಸಲು ಮುಂದಾಗುತ್ತಿದ್ದಾರೆ ಎಂದರು.ಪ್ರಶಾಂತ್ ಸಾಗರ್, ಡಾ.ರಾಜನಂದಿನಿ, ಬಂಗಾರಪ್ಪ, ಅಶೋಕ್, ಪ್ರಸನ್ನ ಕೈ ಕೆರೆ, ಭರ್ಮಪ್ಪ, ಪರಮೇಶ್, ಬೂದಿಯಪ್ಪ, ರಮೇಶ್ ಸೇರಿದಂತೆ ಅನೇಕ ಯುವ ಮುಖಂಡರು ಉಪಸ್ಥಿತರಿದ್ದರು.ಭದ್ರಾವತಿಯಲ್ಲಿ ಬಿವೈಆರ್ ಮತಬೇಟೆ
ಭದ್ರಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮಾಂತರ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಹಾಗೂ ಜಾತ್ಯತೀತ ಜನತಾದಳ ನಗರ ಮತ್ತು ಗ್ರಾಮಾಂತರ ಘಟಕಗಳ ವತಿಯಿಂದ ಭರ್ಜರಿಯಾಗಿ ಪ್ರಚಾರ ನಡೆಸಲಾಯಿತು.ಬೆಳಿಗ್ಗೆ ತಾಲೂಕಿನ ಕಾಗೆಕೋಡಮಗ್ಗಿ ಗ್ರಾಮದಿಂದ ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾತಂಡಗಳೊಂದಿಗೆ ಆರಂಭ ಗೊಂಡ ಪ್ರಚಾರ ಕಾರ್ಯ ತಳ್ಳಿಕಟ್ಟೆ, ಹೊಸಹಳ್ಳಿ, ಕೂಡ್ಲಿಗೆರೆ, ಸೀತಾರಾಮಪುರ, ಅರಳಿಹಳ್ಳಿ, ವೀರಾಪುರ, ಗುಡ್ಡದ ನೇರಲೆ ಕೆರೆ, ದೇವರಹಳ್ಳಿ, ಹಿರಿಯೂರು ಹಾಗೂ ಕಲ್ಲಾಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಾಗು ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ, ಹುಡ್ಕೋ ಕಾಲೋನಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನಡೆಯಿತು.
ಪಕ್ಷದ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರರವರು, ಮೇ ೭.ರಂದು ಕ್ರಮ ಸಂಖ್ಯೆ ೨ರ ಕಮಲದ ಗುರುತಿಗೆ ಮತ ನೀಡುವುದರ ಮೂಲಕ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.ಈ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಚನ್ನೇಶ್, ಧರ್ಮಕುಮಾರ್ ಸೇರಿದಂತೆ ಎರಡೂ ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್‌ಮಟ್ಟದ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.