ಸಿದ್ದರಾಮಯ್ಯ ಅವರಂಥ ಅದೃಷ್ಟ ರಾಜಕಾರಣಿ ಇನ್ನೊಬ್ಬರಿಲ್ಲ : ಶಾಸಕ ಜಿ. ಟಿ. ದೇವೇಗೌಡ

KannadaprabhaNewsNetwork |  
Published : Feb 21, 2025, 12:49 AM ISTUpdated : Feb 21, 2025, 12:15 PM IST
GT Devegowda

ಸಾರಾಂಶ

ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿರುವ ವಿಚಾರವಾಗಿ ಸಿದ್ದರಾಮಯ್ಯ ಅವರ ಪರವಾಗಿ ಮತ್ತೆ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಬ್ಯಾಟಿಂಗ್‌ ಮಾಡಿದ್ದಾರೆ.

 ಮೈಸೂರು : ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿರುವ ವಿಚಾರವಾಗಿ ಸಿದ್ದರಾಮಯ್ಯ ಅವರ ಪರವಾಗಿ ಮತ್ತೆ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಬ್ಯಾಟಿಂಗ್‌ ಮಾಡಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್.ಐಆರ್ ಆದ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದ್ದರು. ಈಗ ನೋಡಿ ಈ ಆರೋಪಕ್ಕೆ ಸಾಕ್ಷಿ ಇಲ್ಲ. ಈಗ ಏನೂ ಹೇಳುತ್ತಾರೆ. ಸಿಎಂ ರಾಜೀನಾಮೆ ಕೇಳುತ್ತಿದ್ದರು. ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಕೇಳುವುದು ತಪ್ಪು ಎಂದು ಹೇಳಿದ್ದೆ‌, ಅದನ್ನೆ ಮಹಾ ಅಪರಾಧದ ರೀತಿ ಬಿಂಬಿಸಿದ್ದರು. ಈಗ ಸತ್ಯ ಗೊತ್ತಾಗಿದೆ. ನಾನು ಅವತ್ತೂ ಹೇಳಿದ ಮಾತು ನನಗೆ ದುಬಾರಿ ಅಲ್ಲ. ನನ್ನ ಮೇಲಿನ ಸೇಡಿಗೆ ಕಾರಣವಾಯಿತು ಎಂದರು.

ಲೋಕಾಯುಕ್ತ ಉತ್ತಮವಾಗಿ ಕೆಲಸ ಮಾಡುತ್ತಿದೆ:

ಲೋಕಾಯುಕ್ತರ ಮೇಲೆ ಪ್ರಭಾವ ಬೀರುವಂತಹದು ಏನಾಗಿದೆ, ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಯಾವತ್ತೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ವ್ಯವಹಾರ ಮಾಡಿದವರು ಅಲ್ಲ. ಸಿದ್ದರಾಮಯ್ಯ ಮೇಲೆ ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಕೇಳಿದ್ದು ಸರಿಯಲ್ಲ ಎಂದಿದ್ದೆ. ಸಿದ್ದರಾಮಯ್ಯ ಅವರ ಭವಿಷ್ಯ, ಅದೃಷ್ಟ ಎರಡು ಗಟ್ಟಿಯಾಗಿದೆ ಎಂದು ಜಿಟಿಡಿ ಹೇಳಿದರು.

ಸಿದ್ದರಾಮಯ್ಯ ಅವರಂಥ ಅದೃಷ್ಟ ರಾಜಕಾರಣಿ ಇನ್ನೊಬ್ಬರಿಲ್ಲ. ಸಿದ್ದರಾಮಯ್ಯ 1983 ರಲ್ಲಿ ಅದೃಷ್ಟದಿಂದ ಶಾಸಕರಾದರು. ಅವರ ಭವಿಷ್ಯ, ಅದೃಷ್ಟ ಗಟ್ಟಿಯಾಗಿಯೆ ಸಾಗಿದೆ. ಅವರಿಗೆ ಇರುವಂತಹ ಅದೃಷ್ಟ ಬೇರೆ ಯಾರಿಗೂ ಇಲ್ಲ ಎಂದು ಅವರು ತಿಳಿಸಿದರು.

ಡಿಕೆಶಿಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಬೇಕು:

ಡಿ.ಕೆ.ಶಿವಕುಮಾರ್‌ ಅವರು ಒಂದು ದಿನ ಸಿಎಂ ಆಗುತ್ತಾರೆ. ಆದರೆ, ಅದು ಯಾವಾಗ ಅಂತಾ ಗೊತ್ತಿಲ್ಲ. ಡಿಕೆಶಿ ಅವರು ಸಿಎಂ ಆಗಬೇಕಾದರೆ ಸಿದ್ದರಾಮಯ್ಯ ಬೆಂಬಲ ಬೇಕು. 10 ಶಾಸಕರನ್ನು ಇಟ್ಟುಕೊಂಡು ಯಾರು ಸಿಎಂ‌ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಕೇಳಿ ಕೇಳಿ ಜನಕ್ಕೂ ಸಾಕಾಗಿದೆ ಬಿಡಿ ಎಂದು ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು