ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಪ್ರಕರಣ ಬೆಳಕಿಗೆ ಬಂದ ದಿನವೇ ಹಲವರು ನನಗೆ ಕರೆ ಮಾಡಿ ಇದನ್ನು ಮುಚ್ಚಿ ಹಾಕುವಂತೆ ಮನವಿ ಮಾಡಿದರು. ಆದರೆ, ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟು ಎಫ್‌ಐಆರ್ ಮಾಡಿಸಿ ಎಂದು ಹೇಳಿದೆ. ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸದಿದ್ದರೆ ಅಂದೇ ಮುಚ್ಚಿಹಾಕಿಬಿಡಬಹುದಿತ್ತು ಎಂದರು.
ನಾನು ಆ ಕೆಲಸವನ್ನು ಯಾವತ್ತಿಗೂ ಮಾಡುವುದಿಲ್ಲ. ಪ್ರಕರಣದಲ್ಲಿ ಮಾಜಿ ಅಧ್ಯಕ್ಷರ ಪಾತ್ರವಿರುವುದು ಕಂಡುಬಂದ ಕೂಡಲೇ ಅವರನ್ನು ಬಂಧಿಸಲಾಗಿದೆ. ಬೇರೆ ನಿರ್ದೇಶಕರೂ ಹಗರಣದಲ್ಲಿ ಭಾಗಿಯಾಗಿದ್ದರೆ ಅವರನ್ನೂ ಬಿಡುವುದಿಲ್ಲ. ಆಡಳಿತ ಮಂಡಳಿಯವರೆಲ್ಲರೂ ಸೇರಿಕೊಂಡಿದ್ದರೆ ನಾನೇ ಸೂಪರ್‌ಸೀಡ್ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಖಡಕ್ಕಾಗಿ ಹೇಳಿದರು.ನನ್ನ ಬಗ್ಗೆ ಯಾವುದೇ ಅನುಮಾನ ಬೇಡ. ಪ್ರಕರಣವನ್ನು ಮುಚ್ಚಿಹಾಕಿಬಿಡುವರೆಂಬ ಸಂಶಯವೂ ಬೇಡ. ಹಾಗೆ ಮುಚ್ಚಿಹಾಕುವುದಿದ್ದರೆ ನಾಲ್ಕೈದು ಅಧಿಕಾರಿಗಳ ಹೆಸರನ್ನು ಸೇರಿಸಿ ಪ್ರಕರಣವನ್ನು ಅಲ್ಲಿಗೇ ಕೈಬಿಡಬಹುದಾಗಿತ್ತು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇದ್ದರು.ಕಾವೇರಿ ವಿವಾದ, ಆರನೇ ಹಂತಕ್ಕೂ ಮೇಕೆದಾಟು ಅಣೆಕಟ್ಟು ಪರಿಹಾರ
- ಈ ಬಾರಿ ಸರಳವಾಗಿ ಕಾವೇರಿ ಆರತಿ ಮಾಡುವುದಕ್ಕೆ ನಿರ್ಧಾರಕಾವೇರಿ ವಿವಾದ ಮತ್ತು ಆರನೇ ಹಂತದ ಕುಡಿಯುವ ನೀರಿನ ಸಮಸ್ಯೆಗೂ ಮೇಕೆದಾಟು ಅಣೆಕಟ್ಟು ಶಾಶ್ವತ ಪರಿಹಾರ ಒದಗಿಸಲಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಯೋಜನೆಗೆ ಒಳಪಡುವ ೧೨ ಸಾವಿರ ಎಕರೆ ಅರಣ್ಯವನ್ನು ಪರ್ಯಾಯ ಜಾಗದಲ್ಲಿ ಬೆಳೆಸುವ ಉದ್ದೇಶದಿಂದ ೧೩ ಜಿಲ್ಲೆಗಳಲ್ಲಿ ಅರಣ್ಯ ಭೂಮಿಗೆ ಜಾಗ ಗುರುತಿಸಲಾಗುತ್ತಿದೆ. ಇದುವರೆಗೆ ೧೩ ಜಿಲ್ಲೆಗಳಲ್ಲಿ ೨ ಸಾವಿರ ಹೆಕ್ಟೇರ್ ಜಾಗ ಗುರುತಿಸಿದ್ದು, ಇನ್ನೂ ೩ ಸಾವಿರ ಹೆಕ್ಟೇರ್ ಜಾಗವನ್ನು ಗುರುತಿಸಬೇಕಿದೆ. ಡೀಮ್ಡ್ ಫಾರೆಸ್ಟ್ ಜಾಗವನ್ನು ತೆರವುಗೊಳಿಸಿದರೆ ಆ ಪ್ರಕ್ರಿಯೆಯೂ ಮುಗಿಯಲಿದೆ. ಮೇಕೆದಾಟು ಅಣೆಕಟ್ಟೆಯಿಂದ ಕೃಷಿಗೆ ಮತ್ತು ಕುಡಿಯುವುದಕ್ಕೂ ನೀರು ಪೂರೈಸಲು ಅನುಕೂಲವಾಗಲಿದೆ ಎಂದು ನುಡಿದರು.
ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ಇನ್ನೂ ಬರ ಅಧ್ಯಯನ ನಡೆಸುತ್ತಿದೆ. ಕೇಂದ್ರ ಬರ ಪರಿಹಾರ ಘೋಷಿಸಿದ ಬಳಿಕ ಅದಕ್ಕೆ ಇನ್ನು ಎಷ್ಟು ಸೇರಿಸಿಕೊಡಬೇಕೆಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಕೇಂದ್ರಕ್ಕೆ ನೀಡುವ ತೆರಿಗೆ ಪಾವತಿಯಲ್ಲಿ ಎಲ್ಲ ರಾಜ್ಯಗಳಿಗಿಂತ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೂ ತೆರಿಗೆ ಹಣ ನೀಡುವಲ್ಲಿ ಕೇಂದ್ರ ವಂಚಿಸುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಹಣವನ್ನು ಕೊಟ್ಟು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದರೂ ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.