ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುದಾನಕ್ಕೆ ಕೊರತೆಯಿಲ್ಲ: ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Jan 22, 2025, 12:35 AM IST
೨೧ವೈಎಲ್‌ಬಿ೧:ಯಲಬುರ್ಗಾದಲ್ಲಿ ಮಂಗಳವಾರ ಪಶು ಆಸ್ಪತ್ರೆ ನೂತನ ಕಟ್ಟಡಕ್ಕೆ ಹಾಗೂ ಸರ್ಕಾರಿ ಉರ್ದು ಪ್ರೌಡಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆಯಿಲ್ಲ.

ಪಶು ಆಸ್ಪತ್ರೆ ನೂತನ ಕಟ್ಟಡ, ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆಯಿಲ್ಲ. ಒಂದುವರೆ ವರ್ಷದಲ್ಲಿ ಈ ಕ್ಷೇತ್ರಕ್ಕೆ ತಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳೇ ಅದಕ್ಕೆ ಸಾಕ್ಷಿಯಾಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪಶು ಆಸ್ಪತ್ರೆ ನೂತನ ಕಟ್ಟಡಕ್ಕೆ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿ ₹೪೫ ಸಾವಿರ ಕೋಟಿ ಬಾಕಿ ಹಣ ಉಳಿಸಿ ಹೋಗಿದ್ದಾರೆ. ಅದನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯನವರು ೩೨ಸಾವಿರ ಕೋಟಿಗೆ ಇಳಿಸಿದ್ದಾರೆ. ಇನ್ನೂ ೧೩ ಕೋಟಿ ಉಳಿದಿದೆ, ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಂಡು ಮಾತನಾಡುವುದನ್ನು ಕಲಿತುಕೊಳ್ಳಲಿ ಎಂದರು.

ನಾನು ಶಾಸಕನಾದ ಮೇಲೆ ತಾಲೂಕಿನ ಚಿಕ್ಕೋಪ ತಾಂಡಾದಲ್ಲಿ ರೈತರಿಗಾಗಿ ಕೋಲ್ಡ್‌ ಸ್ಟೋರ್‌ ನಿರ್ಮಾಣಕ್ಕಾಗಿ ₹೧೧.೫೦ಕೋಟಿ ಮಂಜೂರಾಗಿದೆ. ₹೨೩ಕೋಟಿ ವೆಚ್ಚದಲ್ಲಿ ಸ್ಕೀಲ್ ಡೆವಲಮೆಂಟ್ ಸೆಂಟರ್ ತೆರೆಯಲಾಗುವುದು. ಇದರಿಂದ ಸಾಕಷ್ಟು ಯುವಕ,ಯುವತಿಯರಿಗೆ ಸ್ವಯಂ ಉದ್ಯೋಗಾವಕಾಶ ದೊರೆಯಲಿದೆ. ೧೪ ಪ್ರೌಢಶಾಲೆ, ೬ ಜೂನಿಯರ್‌ ಕಾಲೇಜ, ೧೭ ವಸತಿ ಶಾಲೆ, ಎಲ್‌ಕೆಜಿ ೩೦,ಯುಕೆಜಿ ೩೦ ಕನ್ನಡ, ಇಂಗ್ಲಿಷ್‌ ಮಾಧ್ಯಮ ಮತ್ತು ೨೫ ದ್ವಿಭಾಷೆ ೧ನೇ ತರಗತಿ ಶಾಲೆಗಳು ಪ್ರಾರಂಭವಾಗಿದ್ದು. ಮುಂದಿನ ವರ್ಷ ಇನ್ನೂ ೨೫ ಎನ್‌ಎಸ್‌ಕ್ಯೂಎಸ್ ಶಾಲೆಗಳು ಮಂಜೂರಾತಿ ದೊರೆಯಲಿವೆ. ೬ ಐಟಿಐ ಕಾಲೇಜು ಮತ್ತು ಉರ್ದು ಪ್ರೌಢ ಶಾಲೆ ಕಟ್ಟಡಕ್ಕೆ ಹಾಗೂ ಅಗತ್ಯ ಪೀಠೋಪಕರಣಗಳಿಗಾಗಿ ₹೨ ಕೋಟಿ ಅನುದಾನದಲ್ಲಿ ೬ ಕೊಠಡಿಗಳನ್ನು ನಿರ್ಮಿಸಲಾಗುವುದು. ಇನ್ನೂ ೩೮ ಹೊಸ ಕೆರೆಗಳ ನಿರ್ಮಾಣಕ್ಕಾಗಿ ₹೯೭೦ ಕೋಟಿ ಅನುದಾನ ಕೂಡ ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಈ ಎಲ್ಲಾ ಯೋಜನೆಗಳನ್ನು ತರಬೇಕಾದರೆ ಸರ್ಕಾರದಿಂದ ಅನುದಾನ ತಂದಾಗ ಮಾತ್ರ ಕಾಮಗಾರಿ ಮಾಡಲು ಸಾಧ್ಯ. ಬಿಜೆಪಿಗರು ಇನ್ನಾದರೂ ಸುಳ್ಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ. ಇವರನ್ನು ಎಲ್ಲಿ ಇಡಬೇಕು ಅಲ್ಲಿ ಜನತೆ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕುಕನೂರನಲ್ಲಿ ಜಿಲ್ಲಾ ಮಟ್ಟದ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಜಾನುವಾರಗಳ ಎಕ್ಸರೆ, ಅಲ್ಟ್ರಾಸೌಂಡ್, ಎಂಡಾಸ್ಕೋಪಿ ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿದ ಮಾದರಿ ಆಸ್ಪತ್ರೆ ಇದಾಗಿದೆ. ಇನ್ನೂ ಕರಮುಡಿ, ಗಾಣದಾಳ, ಹಿರೇಅರಳಹಳ್ಳಿ, ಮುಧೋಳ ಗ್ರಾಮಗಳಲ್ಲಿ ಪಶು ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.

ಈ ಸಂದರ್ಭ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ಬಿಇಒ ಸೋಮಶೇಖರಗೌಡ ಪಾಟೀಲ, ಮುಖ್ಯಾಧಿಕಾರಿ ನಾಗೇಶ, ಪ್ರಮುಖರಾದ ಹೇಮಂತರಾಜ, ಅಶೋಕಗೌಡ್ರ, ಮಲ್ಲಿಕಾರ್ಜುನ, ಸಚಿನ್ ಪಾಟೀಲ, ಮಹಾಂತೇಶ ಹಿರೇಮಠ, ಡಾ. ಪ್ರಕಾಶ ಚೂರಿ, ಡಾ. ಸಂಜಯ್ ಚಿತ್ರಗಾರ, ಬಸವರಾಜ ಉಳ್ಳಾಗಡ್ಡಿ, ಬಿ.ಎಂ. ಶಿರೂರ, ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಆನಂದ ಉಳ್ಳಾಗಡ್ಡಿ, ಸಂಗಣ್ಣ ಟೆಂಗಿನಕಾಯಿ, ಡಾ. ಶಿವನಗೌಡ ದಾನರಡ್ಡಿ, ವಸಂತ ಭಾವಿಮನಿ, ಕಳಕಪ್ಪ ತಳವಾರ, ಹನುಮಂತ ಭಜೇಂತ್ರಿ, ಶರಣಪ್ಪ ಗಾಂಜಿ, ಎಂ.ಎಫ್. ನದಾಫ್‌, ಪಾಶಾ ಕನಕಗಿರಿ, ಮಲ್ಲು ಜಕ್ಕಲಿ, ಶರಣಮ್ಮ ಪೂಜಾರ, ಜಯಶ್ರೀ ಕಂದಕೂರ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಬ್ರೇಕ್‌ ಫೇಲಾದ ಬಸ್‌ ಹಿಮ್ಮುಖ ಚಲಿಸಿದ್ದರಿಂದ 6 ಜನರ ಸಾವು
ಬಿಜೆಪಿಗಿಂತ 1 ದಿನ ಮೊದಲೇ ಜೆಡಿಎಸ್‌ ಧರ್ಮಸ್ಥಳ ಯಾತ್ರೆ