ರಂಗೂಪುರ ಶಿವಕುಮಾರ್
ಈ ವಿಚಿತ್ರ ಪ್ರಸಂಗ ಎಲ್ಲಂತೀರಾ:
ತಾಲೂಕಿನ ನೇನೇಕಟ್ಟೆ, ಮಾಡ್ರಹಳ್ಳಿ, ಬೆಂಡಗಳ್ಳಿ, ಬನ್ನಿತಾಳಪುರ,ಮಳವಳ್ಳಿ, ವೀರನಪುರ,ಇಂಗಲವಾಡಿ,ರಂಗೂಪುರ, ಬೆಳಚಲವಾಡಿ ಗ್ರಾಮದಲ್ಲಿ ಮಂಗಳವಾರ ಹಬ್ಬ ಬಂದಿರುವ ಕಾರಣ ಯುಗಾದಿ ಹಬ್ಬ ಆಚರಣೆಯೇ ಇಲ್ಲ. ಒಂದು ವೇಳೆ ಯುಗಾದಿ ಹಬ್ಬ ಮಂಗಳವಾರ ದಿನ ಆಚರಿಸಿದರೆ ಗ್ರಾಮಕ್ಕೆ ಅನಾಹುತ ಸಂಭವಿಸಲಿದೆ ಎಂದು ಗ್ರಾಮಸ್ಥರ ನಂಬಿಕೆಯಂತೆ ಹಾಗಾಗಿ ಹಲವಾರು ದಶಕಗಳಿಂದಲೂ ನಡೆದುಕೊಂಡು ಬಂದಿದೆ.ಮುಂಗಾರು ಆರಂಭವಾಗುವ ಕಾಲದ ವರ್ಷದ ಹೊಸ ಪಂಚಾಗದ ಹೊಸ ಹಬ್ಬವಾಗಿರುವ ಯುಗಾದಿ ಹಬ್ಬ ಮಾತ್ರ ಮೇಲ್ಕಂಡ 9 ಗ್ರಾಮಗಳಿಗೆ ಅನ್ವಯಿಸುವುದಿಲ್ಲ ಹಾಗೂ ಯುಗಾದಿ ಹಬ್ಬದಂದು ಮಳೆ ಬಿದ್ದರೂ ಹೊನ್ನೇರು ಕಟ್ಟುವುದಿಲ್ಲ.
ತಾಲೂಕಿನ ರಂಗೂಪುರ ಗ್ರಾಮದಲ್ಲಿ ಮಾ.೧೧ ರ ಗುರುವಾರ ಹಬ್ಬ ಆಚರಣೆ ಮಾಡಲಿದ್ದಾರೆ. ಇದು ರಂಗೂಪುರ ಗ್ರಾಮದ ಕಥೆಯಾದರೆ, ಇನ್ನು ನೇನೇಕಟ್ಟೆ, ಮಾಡ್ರಹಳ್ಳಿ, ಬನ್ನಿತಾಳಪುರ, ಮಳವಳ್ಳಿ, ವೀರನಪುರ, ಗ್ರಾಮದಲ್ಲಿ ಬುಧವಾರ ಬರುವ ತನಕ ಹಬ್ಬ ಆಚರಣೆ ಮಾಡುವುದಿಲ್ಲ.
ದೇಶದ ನಾಗರೀಕರು ಹೊಸ ಸಂವತ್ಸರದಲ್ಲಿ ಹಿಂದುಗಳ ಹೊಸ ವರ್ಷದ ಹಬ್ಬಗಳ ಆಚರಣೆಗೆ ಹಳೆಯ ನಂಬಿಕೆಯ ರೀತಿಯಲ್ಲಿ ಹಬ್ಬ ಆಚರಣೆ ಮಾಡದೆ ಇರುವುದು ಒಂದೆಡೆ ಯಾದರೆ, ಮಳೆ ಬಿದ್ದರು ಸಹ ಆಯಾಯ ಗ್ರಾಮದ ಹಬ್ಬದ ದಿನದವರೆಗೆ ಬಿತ್ತನೆ ಮಾಡಂಗಿಲ್ಲ ಹಾಗು ಹೊನ್ನೇರು ಕಟ್ಟಂಗಿಲ್ಲ.