ಕನ್ನಡಪ್ರಭ ವಾರ್ತೆ ರಾಯಚೂರು
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅ.16 ರಿಂದ 18ವರೆಗೆ ಗ್ರಾಮದ ಆಂಜನೇಯ್ಯಸ್ವಾಮಿಯ ಜಾತ್ರಾ ಮಹೋತ್ಸವ ನಡೆದಿದ್ದು, ಕಳೆದ ಐದು ದಶಕಗಳಿಂದ ಸೌಹಾರ್ದಯುತವಾಗಿ, ಶಾಂತಿ ಸುವ್ಯವಸ್ಥೆಯಿಂದ ಊರಿನ ಎಲ್ಲ ಸಮುದಾಯಗಳು ಸೇರಿಕೊಂಡು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ನಡೆದ ಮೂರು ದಿನಗಳ ಜಾತ್ರಾ ಮಹೋತ್ಸವದ ಕೊನೆ ದಿನ ರಥೋತ್ಸವ ನಂತರ ಡ್ರಮ್ ಬಾರಿಸುವ ವಿಚಾರವಾಗಿ ಕೆಲ ಯುವಕರ ನಡುವೆ ಎರಡ್ಮೂರು ಸಲ ಜಗಳವಾಗಿದ್ದು, ಗ್ರಾಮದ ಮುಖಂಡರೇ ಸೇರಿಕೊಂಡು ಅವರಿಗೆ ಬುದ್ಧಿವಾದ ಹೇಳಿ ಸರಿಪಡಿಸಲಾಗಿತ್ತು. ಆದರೆ, ಕೆಲವರು ದುರುದ್ದೇಶಪೂರ್ವಕವಾಗಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಲಾಗಿದೆ, ಅಸ್ಪೃಶ್ಯತೆ ಜೀವಂತವಾಗಿದೆ, ಸಮಾಜಿಕ ಬಹಿಷ್ಕಾರ ಮಾಡಲಾಗಿದೆ ಎಂದು ಆರೋಪಿಸಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು, ಎಲ್ಲಾ ಸಮೂದಾಯಗಳ ಮುಖಂಡರಿಗೂ ದೇವಸ್ಥಾನ ಸಮಿತಿ ಸನ್ಮಾನಿಸಿ ಗೌರವಿಸಿದೆ. ಎಲ್ಲಾ ಸಮೂದಾಯದವರೂ ಸೇರಿಯೇ ಜಾತ್ರ ನಡೆಸಲಾಗಿದೆ. ಆದರೆ ಯಾರು ಜಾತಿ ತಾರತಮ್ಯ, ಸಮಾಜಿಕ ಬಹಿಷ್ಕಾರ ಹಾಕಿಲ್ಲ. ಸುಳ್ಳು ಸೃಷ್ಟಿಸಿ ಅಪಪ್ರಚಾರ ಮಾಡಲಾಗುತ್ತದೆ ಎಂದರು.
ಈಗಾಗಲೇ ಗ್ರಾಮಕ್ಕೆ ಆಗಮಿಸಿದ್ದ ಡಿಸಿ, ಎಸ್ಪಿ ಅವರಿಗೂ ಸ್ಪಷ್ಟೀಕರಣ ನೀಡಿದ್ದು, ಸುಳ್ಳು ಪ್ರಚಾರದಿಂದಾಗಿ ಗ್ರಾಮದ ಹೆಸರಿಗೆ ಮಸಿಬಳಿಯುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರುಗಳಾದ ಶಿವ ಪುತ್ರಯ್ಯ ಸ್ವಾಮಿ, ಕೆ.ಶರಣಪ್ಪ, ಅಮರೇಗೌಡ, ಶೇಖರಪ್ಪ, ಆದೆಪ್ಪಗುಡುದೂರು, ವೀರನಗೌಡ ಪೊಲೀಸ್ ಪಾಟೀಲ್, ಯಂಕಣ್ಣ ಜಿನಗದ್ ಸೇರಿ ಅನೇಕರು ಇದ್ದರು.ತಡಿಗೋಳ ಚಲೋ ಚಳವಳಿ ಹಿಂಪಡೆಗೆ ತಹಸೀಲ್ದಾರ್ ಮಾಡಿದ ಮನವಿ ವಿಫಲ: ಸಿಂಧನೂರು:ಜಿಲ್ಲಾಧಿಕಾರಿಗಳು ತಿಡಿಗೋಳ ಗ್ರಾಮಕ್ಕೆ ಭೇಟಿ ಅಲ್ಲಿಯ ಜನರ ಅಹವಾಲುಗಳನ್ನು ಕೇಳಿ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಲ್ಲದೇ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ತಿಡಿಗೋಳ ಚಲೋ ಚಳವಳಿಯನ್ನು ಹಿಂಪಡೆಯಬೇಕು ಎಂದು ತಹಶೀಲ್ದಾರ್ ಅರುಣ್ ಹೆಚ್. ದೇಸಾಯಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಲ್ಲಿ ಮಾಡಿದ ಮನವಿ ವಿಫಲವಾಯಿತು.
ಸಿಪಿಐಎಂಎಲ್ (ಮಾಸ್ಲೈನ್) ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮತ್ತು ಶೇಖರಮ್ಮ ದುಮತಿ ವಕೀಲ ಮಾತನಾಡಿ ತಿಡಿಗೋಳ ಗ್ರಾಮದಲ್ಲಿ ಎಲ್ಲ ಜಾತಿಯ ಬಡವರಿಗೆ ಸ್ವಾತಂತ್ರö್ಯವೇ ಇಲ್ಲ. ಜಾತೀಯತೆ ಮತ್ತು ಭೂ ಮಾಲೀಕತ್ವ ದಬ್ಬಾಳಿಕೆ ಮಾಡುತ್ತಿದೆ. ಅಲ್ಲಿಯ ದಲಿತರು ಉಸಿರುಗಟ್ಟುವ ವಾತಾವರಣದಲ್ಲಿ ಬದುಕಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಲು ಪರಸ್ಪರ ಸಾಮರಸ್ಯ ಬೆಸೆಯಲೆಂದೆ ಚಲೋ ಚಳವಳಿ ಮಾಡುತ್ತಿರುವುದಾಗಿ ಪ್ರತಿಕ್ರಿಯಿಸಿದರು.
ದಲಿತರಿಗೆ ಬಹಿಷ್ಕಾರ: ಕಾನೂನು ಕ್ರಮಕ್ಕೆ ಒತ್ತಾಯ:
ಈ ವೇಳೆ ಮಾತನಾಡಿದ ಸ್ವಾಭಿಮಾನ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ನಿರುಪಾದಿ ತಿಡಿಗೋಳದಲ್ಲಿ ಅಕ್ಟೋಬರ್ 18 ರಂದು ನಡೆದ ಆಂಜನೇಯಸ್ವಾಮಿ ಜಾತ್ರೆಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಹಲಗೆ ಬಾರಿಸುವ ವಿಷಯದಲ್ಲಿ ಮನಸ್ತಾಪವಾಗಿ ಸವರ್ಣೀಯರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಸಂಘಟಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಾನ್ವಿ: ಸಿಂಧನೂರಿನ ತಿಡಿಗೋಳದಲ್ಲಿ ದಲಿತರ ಮೇಲೆ ದೌರ್ಜನ್ಯ ಖಂಡಿಸಿ ನ.8 ರಂದು ಬೈಕ್ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಶ್ರವಣ ಕುಮಾರ ಮುದ್ದಂಗುಡ್ಡಿ ತಿಳಿಸಿದರು.