-ಹುಣಸಗಿ ಪೋಲಿಸರ ಕಾರ್ಯಕ್ಕೆ ಎಸ್.ಪಿ ಶ್ಲಾಘಿಸಿ ಬಹುಮಾನ ಘೋಷಣೆ
ಕನ್ನಡಪ್ರಭ ವಾರ್ತೆ ಹುಣಸಗಿ
ಹುಣಸಗಿ ಪೊಲೀಸ್ ಠಾಣೆಯ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿ ಆತನಿಂದ 73 ಗ್ರಾಂ. ಬಂಗಾರ ಹಾಗೂ 2 ಲಕ್ಷ ರು. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ತಾಲೂಕಿನ ಸಿದ್ದಾಪುರ (ಬಿ) ಗ್ರಾಮದ ಯಲ್ಲಪ್ಪ ಬಸಪ್ಪ ಹುಲಕೇರಿ ಅವರು ಹುಣಸಗಿ ಪೋಲಿಸ್ ಠಾಣೆಗೆ ಆಗಮಿಸಿ ಎಪ್ರಿಲ್ 17ರಂದು ರಾತ್ರಿ 9.30 ರಿಂದ ಎಪ್ರಿಲ್ 18 ರ ಬೆಳಗ್ಗೆ 6 ಜಮೀನಿನಲ್ಲಿರುವ ಮನೆಗೆ ಅಪರಿಚಿತ ಕಳ್ಳರು ಮನೆಯ ಬಾಗಿಲು ಕೀಲಿಯನ್ನು ಮರಿದು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ
ಆರೋಪಿತರ ಪತ್ತೆಗೆ ಯಾದಗಿರಿ ಪೋಲಿಸ್ ವರಿಷ್ಠಧಿಕಾರಿ,ಅಪಾರ ಪೋಲಿಸ್ ವರಿಷ್ಠಧಿಕಾರಿ ಹಾಗೂ ಸುರಪುರ ಡಿ.ಎಸ್.ಪಿ ಅವರ ಮಾರ್ಗದರ್ಶನದಲ್ಲಿ ಹುಣಸಗಿ ಸಿಪಿಐ ರವಿಕುಮಾರ ಎಸ್.ಎನ್ ಹಾಗೂ ಪಿಎಸ್ಐ ರಾಹುಲ್ ಪವಾಡೆ, ಕ್ರೈಂ ಪಿಎಸ್ಐ ಬಾಗಣ್ಣ ಹಾಗೂ ಸಿಬ್ಬಂದಿ ದ್ಯಾಮಣ್ಣ ಪಿಸಿ 255, ಸಿದ್ದಪ್ಪ ಪಿಸಿ 28 ಸೇರಿದಂತೆ ತಂಡವನ್ನು ರಚನೆ ಮಾಡಿ ಪ್ರಕರಣದಲ್ಲಿ ಕಳ್ಳತನ ಮಾಡಿದ ಆರೋಪಿ ದೇವಪ್ಪ ಯಮನಪ್ಪ ಹುಲ್ಲಿಕೇರಿ ಸಿದ್ದಾಪೂರ(ಬಿ) ಎಂಬಾತನನ್ನು ಜುಲೈ 10ರಂದು ದಸ್ತಗಿರ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯಿಂದ 73 ಗ್ರಾಂ. ಬಂಗಾರದ ಆಭರಣ ಹಾಗೂ 2 ಲಕ್ಷ ರೂ ನಗದು ಹಣ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಫೋಟೋಹುಣಸಗಿ ಪೊಲೀಸ್ ಠಾಣೆಯ ಪೊಲೀಸರು ಕಳ್ಳನನ್ನು ಬಂಧಿಸಿ ಆತನಿಂದ 73 ಗ್ರಾಂ. ಬಂಗಾರ ಹಾಗೂ 2 ಲಕ್ಷ ರು. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಯಾದಗಿರಿ ಪೊಲೀಸ್ ವರಿಷ್ಠಧಿಕಾರಿ, ಅಪಾರ ಪೊಲೀಸ್ ವರಿಷ್ಠಧಿಕಾರಿ ಹಾಗೂ ಡಿ.ಎಸ್.ಪಿ ಸುರಪುರ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.