ಕನ್ನಡಪ್ರಭ ವಾರ್ತೆ ಹುಣಸೂರು
ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಗೆ ಸಹಕರಿಸಿ ಮಾರ್ಗದರ್ಶನ ನೀಡಿದರು. ನಂತರ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆಯಲ್ಲಿ ಪಕ್ಷಿಗಳ ಮಹತ್ವ ಕುರಿತು ರಂಗನತಿಟ್ಟಿನ ಸಿಬ್ಬಂದಿ ಪ್ರವೀಣ್ ಜೇವರ್ಗಿ ಉಪನ್ಯಾಸ ನೀಡಿದರು.
ಅಲ್ಲದೆ ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆಯಲ್ಲಿ ಪಕ್ಷಿಗಳ ಮಹತ್ವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಫರ್ಧೆ ಏರ್ಪಡಿಸಿ, ವಿಜೇತರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಹುಮಾನ ಮತ್ತು ಫಲಕ ವಿತರಿಸಿದರು.ಅರಣ್ಯ ಇಲಾಖೆಯ ಆರ್.ಎಫ್.ಓ. ನಂದಕುಮಾರ್, ಇಲಾಖೆಯ ಸಿಬ್ಬಂದಿ ಹಾಗೂ ಎನ್.ಎಸ್. ಎಸ್. ಕಾರ್ಯಕ್ರಮಾಧಿಕಾರಿ ಸಿ. ದೇವರಾಜು, ಚಂದ್ರಶೇಖರ್ , ಸೋಮಶೇಖರ್, ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.