ಕೊಡಗು ವಿದ್ಯಾಲಯ ಯೂತ್ ಕ್ಲಬ್ ವತಿಯಿಂದ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ವೃಕ್ಷಾರೋಪಣಾ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವಿದ್ಯಾಲಯದ ಯೂತ್ ಕ್ಲಬ್ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ನಗರದ ‘ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನ ವನ’ದಲ್ಲಿ ವೃಕ್ಷಾರೋಪಣಾ ನಡೆಯಿತು.ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ., ಕ್ಲಬ್ ಇನ್‌ಚಾರ್ಜ್ ಶಿಕ್ಷಕರು, ಹಾಗೂ ಡಿಆರ್‌ಎಫ್ಒ ಸುನಿಲ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ತಿಮ್ಮಕ್ಕ ಅವರು ಜೀವನಪರ್ಯಂತ ಮರಗಳನ್ನು ನೆಟ್ಟು ಪೋಷಿಸಿದ ಮಹತ್ತರ ಸೇವೆಯನ್ನು ಸ್ಮರಿಸುವುದರೊಂದಿಗೆ, ಪರಿಸರ ಸಂರಕ್ಷಣೆಯ ಜವಾಬ್ದಾರಿ, ಪ್ರಕೃತ್ತಿಯ ಮೌಲ್ಯಗಳನ್ನು ಈ ಕಾರ್ಯಕ್ರಮ ತಿಳಿಸಿತ್ತು.ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಸಸಿಗಳನ್ನು ಉತ್ಸಾಹದಿಂದ ನೆಟ್ಟರು. ಜೊತೆಗೆ, ಶಾಲಾ ಆವರಣದಲ್ಲೂ ಮತ್ತೊಂದು ಸಸಿಯನ್ನು ಸಾಲು ಮರದ ತಿಮ್ಮಕ್ಕ ಸ್ಮರಣೆಯಲ್ಲಿ ನೆಡುವ ಮೂಲಕ ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಾಣದತ್ತ ಸಂಸ್ಥೆಯ ಬದ್ಧತೆಯನ್ನು ಸ್ಪಷ್ಟಪಡಿಸಿದರು.ಜೂ.5ರಂದು ನೆಡಲಾದ ಸಸಿಗಳ ಸಂರಕ್ಷಣೆಯ ಭಾಗವಾಗಿ, ವಿದ್ಯಾರ್ಥಿಗಳು ಉದ್ಯಾನವನ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದರು. ಹುಲ್ಲು ಕಳೆದು, ಕಸ ತೆರವುಗೊಳಿಸಿ, ಗಿಡಗಳಿಗೆ ನೀರುಣಿಸಿ, ಸಂಪೂರ್ಣ ಪ್ರದೇಶವನ್ನು ಸ್ವಚ್ಛ ಮತ್ತು ಸುಸಜ್ಜಿತವಾಗಿರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.