ನೀರಿನ ಮೂಲ ನಾಶ ಮಾಡುವ ಮೊದಲು ಯೋಚಿಸಿ

KannadaprabhaNewsNetwork |  
Published : Mar 23, 2025, 01:36 AM IST
22ಎಚ್ಎಸ್ಎನ್10 :  | Kannada Prabha

ಸಾರಾಂಶ

ನೈಸರ್ಗಿಕವಾಗಿ ಇರುವ ನೀರಿನ ಮೂಲವನ್ನು ನಾಶ ಮಾಡುವ ಮೊದಲು ನಾವು ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಹೇಮಾವತಿ ತಿಳಿಸಿದರು. ಆಹಾರವಿಲ್ಲದೇ ಬದುಕಬಹುದು ಆದರೆ, ನೀರಿಲ್ಲದೇ ಬದುಕುವುದು ಬಹಳ ಕಷ್ಟ. ಇದನ್ನು ಮನಸ್ಸಿನಲ್ಲಿಟ್ಟುಕೊಂಡರೇ ಇಂತಹ ಗಿಡ ನೆಡುವ ಅವಶ್ಯಕತೆ ಇರುವುದಿಲ್ಲ. ಏಕೆ ನಾವು ಇನ್ನು ಎಚ್ಚೆತ್ತುಕೊಂಡಿಲ್ಲ ಎಂಬುದು ನನ್ನ ಪ್ರಶ್ನೆಯಾಗಿದೆ. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರ ಶ್ರಮ ಬೇಕು. ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ಅರಿತುಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನೈಸರ್ಗಿಕವಾಗಿ ಇರುವ ನೀರಿನ ಮೂಲವನ್ನು ನಾಶ ಮಾಡುವ ಮೊದಲು ನಾವು ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಹೇಮಾವತಿ ತಿಳಿಸಿದರು.

ನಗರದ ಸಮೀಪ ಬೈಪಸ್ ರಸ್ತೆಯಲ್ಲಿರುವ ರಾಜೀವ್ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನವಿಜ್ಞಾನ ಸಮಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನಾಚರಣೆಯನ್ನು ಗಿಡ ನೆಟ್ಟು ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆಹಾರವಿಲ್ಲದೇ ಬದುಕಬಹುದು ಆದರೆ, ನೀರಿಲ್ಲದೇ ಬದುಕುವುದು ಬಹಳ ಕಷ್ಟ. ಇದನ್ನು ಮನಸ್ಸಿನಲ್ಲಿಟ್ಟುಕೊಂಡರೇ ಇಂತಹ ಗಿಡ ನೆಡುವ ಅವಶ್ಯಕತೆ ಇರುವುದಿಲ್ಲ. ಏಕೆ ನಾವು ಇನ್ನು ಎಚ್ಚೆತ್ತುಕೊಂಡಿಲ್ಲ ಎಂಬುದು ನನ್ನ ಪ್ರಶ್ನೆಯಾಗಿದೆ. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರ ಶ್ರಮ ಬೇಕು. ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ಅರಿತುಕೊಳ್ಳಬೇಕು ಎಂದರು.

ಬಾಯಾರಿಕೆ ಆದಾಗ ನೀರಿನ ಬಾಟಲಿ ತೆಗೆದುಕೊಂಡು ಖಾಲಿಯಾದ ಮೇಲೆ ಎಲ್ಲೋ ಎಸೆದು ಹೋಗುತ್ತೇವೆ. ಇದರಿಂದ ನೈಸರ್ಗಿಕವಾಗಿ ಇದ್ದಂತಹ ಮೂಲಗಳನ್ನು ನಾಶ ಮಾಡುವುದಕ್ಕೆ ನಾವೇ ಕಾರಣರಾಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ನೈಸರ್ಗಿಕವಾಗಿ ಇರುವಂತಹ ನೀರಿನ ಮೂಲವನ್ನು ನಾಶ ಮಾಡುವ ಮೊದಲು ನಾವು ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮಾನವ ಮತ್ತು ನೈಸರ್ಗಿಕ ನಡುವೆ ಸಂಬಂಧ ಏನಿದೆ ಹಾಳಾಗುವುದಕ್ಕೆ ನಾವು ಕಾರಣಕರ್ತರಾಗಬಾರದು. ಮನುಷ್ಯನ ಅತಿಯಾದ ಆಸೆಗಳು, ಪಡೆಯಬೇಕೆನ್ನುವ ಹುಚ್ಚು ಹಂಬಲ ಈ ರೀತಿ ಪ್ರಕೃತಿಯ ಹತ್ತಿರ ತಂದು ನಿಲ್ಲಿಸಿದೆ. ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಅವಶ್ಯಕತೆ ಇದ್ದು, ನೈಸರ್ಗಿಕವಾಗಿ ದೊರಕುವ ವಸ್ತುಗಳನ್ನು ನಾವು ನಮ್ಮ ಸ್ವಾರ್ಥಕ್ಕೆ ನಾಶ ಮಾಡಬಾರದು ಎಂದು ಸಲಹೆ ನೀಡಿದರು. ಈಗಾಗಲೇ ನೀರಿನ ಹಾಹಾಕಾರ ಪ್ರಾರಂಭವಾಗಿದೆ. ನೀರಿನ ಮೂಲವನ್ನು ನಾವು ಉಳಿಸಿದರೇ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜೀವ್ ಆಯುರ್ವೇದ ಕಾಲೇಜು ಪ್ರಾಂಶುಪಾಲ ಮತ್ತು ಆಡಳಿತಾಧಿಕಾರಿ ಡಾ. ನಿತಿನ್, ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್‌.ಪಿ. ವೆಂಕಟೇಶ್ ಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಬಿ. ವೆಂಕಟೇಗೌಡ, ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಮಂಜುನಾಥ್, ವಕೀಲರಾದ ಗಿರಿಜಾಂಬಿಕ, ಅಪ್ಪಾಜಿಗೌಡ, ತಿರುಪತಿಹಳ್ಳಿ ಶಿವಶಂಕರಪ್ಪ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!