ಪ್ಲಾಸ್ಟಿಕ್ ಬಳಕೆಗಿಂತ ಮೊದಲು ಎರಡು ಬಾರಿ ಯೋಚಿಸಿ: ಶ್ರೀಕಾಂತ್ ಎಂ ಹೆಗಡೆ

KannadaprabhaNewsNetwork |  
Published : Jun 08, 2025, 11:52 PM IST
5 ಎಚ್ ಎಚ್ ಆರ್ ಪಿ 4.ಹೊಳೆಹೊನ್ನೂರು ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. | Kannada Prabha

ಸಾರಾಂಶ

ಪ್ರತಿಯೊಬ್ಬ ವ್ಯಕ್ತಿ ಪ್ಲಾಸ್ಟಿಕ್ ಬಳಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು ಎಂದು ಪ್ರಾಂಶುಪಾಲ ಶ್ರೀಕಾಂತ್ ಎಂ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪ್ರತಿಯೊಬ್ಬ ವ್ಯಕ್ತಿ ಪ್ಲಾಸ್ಟಿಕ್ ಬಳಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು ಎಂದು ಪ್ರಾಂಶುಪಾಲ ಶ್ರೀಕಾಂತ್ ಎಂ ಹೆಗಡೆ ಹೇಳಿದರು.

ಸಮೀಪದ ಜಾವಳ್ಳಿಯ ಜ್ಞಾನದೀಪ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು. ಕಾರಣವಿಷ್ಟೇ ನಮ್ಮ ಜೀವನದ ಅನೇಕ ಸಂದರ್ಭಗಳಲ್ಲಿ ಹೆಚ್ಚು ದುಬಾರಿಯಾಗುವ ಸಂದರ್ಭಗಳು ಎದುರಾಗುತ್ತವೆ. ಉದಾಹರಣೆಗೆ ವಿದ್ಯುತ್ ತಂತಿಗಳಿಗೆ ಕೋಟ್ ಮಾಡಿ ವಿದ್ಯುತ್ ಪ್ರವಹಿಸದಂತೆ, ಆಘಾತಗಳಾಗದಂತೆ ನಿರ್ವಹಿಸುವಾಗ ಅವಶ್ಯಕತೆಯಿದೆಯಾದರೂ ಮರದ ಉಪಯೋಗ ಅಲ್ಲಿ ಸಾಧ್ಯವಿಲ್ಲ. ಪ್ಲಾಸ್ಟಿಕ್ ಬಯೋಡಿಗ್ರೇಡ್ ಮಾಡಲು ಸಾಧ್ಯ, ಹಾಗಾಗಿ ಪುನರ್ ಬಳಕೆಗೆ ಆದ್ಯತೆ ಕಡಿಮೆ ಮಾಡುವುದು ಬೇಡ. ನಾವು ಮರುಚಿಂತನೆ ಮಾಡುವ ಅಗತ್ಯತೆಗೆ ಹೆಚ್ಚು ಆದ್ಯತೆ ಕೊಡಬೇಕು. ವಿಲೇವಾರಿ ಮಾಡುವಾಗ, ವಿಂಗಡಿಸುವಾಗ ಅತಿಯಾದ ಎಚ್ಚರವಿರಬೇಕು. ಮಕ್ಕಳೂ ತಮ್ಮ ಜೀವನದಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಬಿಡಬೇಕು ಮತ್ತು ನಾನು ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಪ್ರಮಾಣ ತೆಗೆದುಕೊಳ್ಳಬೇಕು ಎಂದರು.

ಶಿಕ್ಷಕಿ ಮೆರಿ ಜಿಬಿ ಮಾತನಾಡಿ, ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಮಾನವ ಜೀವಿಗೂ ಹಾನಿ ಉಂಟುಮಾಡುತ್ತದೆ. 1500 ರಷ್ಟು ಜೀವಿಗಳು ವಿನಾಶದ ಅಂಚಿನಲ್ಲಿವೆ. ಅದರಲ್ಲೂ ಮೈಕ್ರೋ ಪ್ಲಾಸ್ಟಿಕ್ ಮನುಷ್ಯನ ದೇಹದ ಪ್ರತಿ ಅಂಗಗಳ ಮೇಲೂ ಘಾಢವಾದ ಋಣಾತ್ಮಕ ಪ್ರಭಾವ ಬೀರುತ್ತಿದೆ. ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳು ಹೋರಾಟದ ಶಕ್ತಿ ಪಡೆದಿದ್ದಾರೆ. ನಮ್ಮ ಭವಿಷ್ಯಕ್ಕಾಗಿ ಪ್ರಕೃತಿ ಉಳಿಸೋಣ ಎಂದರು.

ಶಾಲೆಯಲ್ಲಿ ನಿರಂತರವಾಗಿ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದವು. ಮಕ್ಕಳಿಂದ ಸಸಿ ನೆಡುವ ಕಾರ್ಯ, ಪರಿಸರ ಗೀತೆಗಳ ಗಾಯನ, ಪ್ಲಾಸ್ಟಿಕ್‍ನ ದುಷ್ಪರಿಣಾಮಗಳ ಕುರಿತ ನಾಟಕಗಳು, ಪರಿಸರದ ಘೋಷಣೆಗಳೊಂದಿಗೆ ಕ್ಯಾಂಪಸ್‌ನಲ್ಲಿ ಪ್ರಭಾತ ಪೇರಿ ಕಾರ್ಯಕ್ರಮಗಳು ನಡೆದವು.

ಶಿವಮೊಗ್ಗದ ರೋಟರಿ ಕ್ಲಬ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಉತ್ತಮವಾಗಿತ್ತು. ಮತ್ತು ಶಾಲೆಗೆ ಹೊಸದಾಗಿ ಸೇರಿದ 25-26 ನೇ ಸಾಲಿನ ಸಿಬಿಎಸ್‌ಇ 11ನೇ ತರಗತಿ ವಿದ್ಯಾರ್ಥಿಗಳ ತರಗತಿಗಳ ಪ್ರಾರಂಭದ ಮೊದಲ ದಿನದಂದು ಸಸಿ ನೆಡುವುದರ ಮೂಲಕ ಶಾಲೆ ಪ್ರವೇಶಿಸಿದ್ದು, ವಿಶೇಷವಾಗಿತ್ತು. ಜ್ಞಾನದೀಪ ಪೂರ್ವಪ್ರಾಥಮಿಕ ಶಾಲೆಗಳಲ್ಲಿಯೂ ಪರಿಸರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನೀಲಕಂಠಮೂರ್ತಿ, ಹಿರಿಯ ಉಪಪ್ರಾಂಶುಪಾಲ ಡಾ ರೆಗಿ ಜೋಸೇಫ್, ಉಪಪ್ರಾಂಶುಪಾಲ ವಾಣಿಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''