ಹಿರಿಯರ ಚಿಂತನಾ ಸಮಾವೇಶ ಆಮಂತ್ರಣ ಬಿಡುಗಡೆ

KannadaprabhaNewsNetwork |  
Published : Jul 26, 2026, 03:00 AM IST
ಹಿರಿಯರ ಚಿಂತನಾ ಸಮಾವೇಶ ಆಮಂತ್ರಣ ಬಿಡುಗಡೆಗೊಳಿಸಿದ ಶರತ್‌ ಕೃಷ್ಣ ಪೆಡ್ವೆಟ್ನಾಯರು | Kannada Prabha

ಸಾರಾಂಶ

ಮೆಲ್ಕಾರ್‌ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಸದಸ್ಯರು ಆ.9 ರಂದು ಪಾಣೆಮಂಗಳೂರು ಹಳೆ ಸೇತುವೆ ನದಿ ತೀರದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಿರುವ ಹಿರಿಯರ ಚಿಂತನಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪೆಡ್ವೆಟ್ನಾಯರು ಬಿಡುಗಡೆಗೊಳಿಸಿದರು.ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಬಿ.ಭುಜಬಲಿ ಧರ್ಮಸ್ಥಳ ಸಂಗ್ರಹಿಸಿ ಪ್ರಕಟಿಸಿದ ಹಿರಿಯ ನಾಗರಿಕರ ಅಭಿಯಾನ ಸಂದೇಶ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಬೆಳ್ತಂಗಡಿ: ಮೆಲ್ಕಾರ್‌ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಸದಸ್ಯರು ಆ.9 ರಂದು ಪಾಣೆಮಂಗಳೂರು ಹಳೆ ಸೇತುವೆ ನದಿ ತೀರದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಿರುವ ಹಿರಿಯರ ಚಿಂತನಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪೆಡ್ವೆಟ್ನಾಯರು ಬಿಡುಗಡೆಗೊಳಿಸಿದರು.ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಬಿ.ಭುಜಬಲಿ ಧರ್ಮಸ್ಥಳ ಸಂಗ್ರಹಿಸಿ ಪ್ರಕಟಿಸಿದ ಹಿರಿಯ ನಾಗರಿಕರ ಅಭಿಯಾನ ಸಂದೇಶ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಚಿಂತನಾ ಸಮಾವೇಶ ಮತ್ತು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳ 6ನೇ ಚಾತುರ್ಮಾಸ್ಯದ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾಹಿತಿ ನೀಡಿದರು. ಈ ಬಗ್ಗೆ ವಿಸ್ತೃತ ಸಭೆ ನಡೆಸಿ ಸಹಕಾರ ನೀಡುವುದಾಗಿ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿದರು. ಉಭಯ ಕಾರ್ಯಕ್ರಮಗಳಿಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಘಟಕದ ಪದಾಧಿಕಾರಿಗಳು ಪ್ರಯತ್ನಿಸಬೇಕೆಂದು ಭುಜಬಲಿ ಧರ್ಮಸ್ಥಳ ವಿನಂತಿಸಿಕೊಂಡರು.ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕೆಂಬರ್ಜೆ , ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಖಜಾಂಜಿ ಅನಾರು ಕೃಷ್ಣಶರ್ಮ, ವಿಶ್ವಾಸ ರಾವ್, ಕುಸುಮಾವತಿ ಬೆಳ್ತಂಗಡಿ, ಶಾಂತ ಶೆಟ್ಟಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ,ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಗಣೇಶ್ ಭಟ್ ಕುತ್ರೋಟ್ಟು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿರುವ ತಾಳಿಕೋಟೆ
ಕಾರ್ಯಕರ್ತರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ