ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಪಂ ನೂತನ ನವೀಕರಣ ಕಾರ್ಯಾಲಯ ಹಾಗೂ ಕೂಸಿನ ಮನೆ ಉದ್ಘಾಟನೆ ಹಾಗೂ ವಿಶೇಷ ಅಂಚೆ ಲಕೋಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕೊಕ್ಕರೆ ಬೆಳ್ಳೂರು ಗ್ರಾಮ ಇತಿಹಾಸ ಪ್ರಸಿದ್ಧ ಪಕ್ಷಿಧಾಮ ತಾಣ. ದೇಶ ವಿದೇಶಗಳಿಂದ ಇಲ್ಲಿಗೆ ಬರುವ ಪಕ್ಷಿಗಳನ್ನು ನೋಡಲು ಪ್ರವಾಸಿಗರು ದೇಶ ವಿದೇಶಗಳಿಂದಲೂ ಬರುತ್ತಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಆಹಾರ, ನೀರಿನ ಕೊರತೆ, ವಾಸಕ್ಕೆ ತೊಂದರೆಯಾಗಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಿ ಗ್ರಾಮವನ್ನು ಪ್ರವಾಸೋದ್ಯಮ ಕೇಂದ್ರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಲಗೋಟೆಯನ್ನು ಇಂದು ಅನಾವರಣಗೊಳಿಸಿದ್ದಾರೆ. ಇನ್ನು ಮುಂದೆ ಈ ಗ್ರಾಮದ ಹೆಸರಿನಲ್ಲಿ ದೇಶ ವ್ಯಾಪ್ತಿ ಲಕೋಟೆ ಹೋಗುತ್ತದೆ. ಪಕ್ಷಿಧಾಮದ ವಿಷಯಗಳನ್ನು ಲಕೋಟೆಯಲ್ಲಿ ನಮೂದಿಸಿರುವುದರಿಂದ ಈ ಎಲ್ಲಾ ಜಿಲ್ಲಾ ಹಾಗೂ ಹೊರರಾಜ್ಯಗಳಲ್ಲಿ ಪರಿಚಯವಾಗಿ ಇಲ್ಲಿಗೆ ಪ್ರವಾಸಿಗರು ಬರುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದರು.
ಇದೆ ವೇಳೆ ವಿಶೇಷ ಅಂಚೆ ಲಕೋಟೆಯನ್ನು ಶಾಸಕರು ಲೋಕಾರ್ಪಣೆಗೊಳಿಸಿದರು.ಭಾರತೀಯ ಅಂಚೆ ಇಲಾಖೆ ಅಧೀಕ್ಷಕ ಎಂ.ಡಿ.ಆಕಾಶ್ ಮಾತನಾಡಿ, ಅಂಚೆ ಇಲಾಖೆ ಲಕೋಟೆ ಮಾಡಲು ಸಂಪೂರ್ಣ ಸಹಕಾರ ನೀಡಿ ಆರ್ಥಿಕ ಸಹಾಯ ಮಾಡಿದ್ದಾರೆ. ಅಂಚೆ ಇಲಾಖೆಯಲ್ಲಿರುವ ಜೀವ ವಿಮಾ ಸೌಲಭ್ಯ, ಸೌವಲತ್ತು ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಖೋ ಖೋ ಆಟದಿಂದ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಕೆಂಪರಾಜು. ಉಪಾಧ್ಯಕ್ಷ ಜ್ಯೋತಿ, ಸದಸ್ಯರಾದ ನಟರಾಜು, ಮಾದೇಶ್, ಸುಂದರಮ್ಮ, ದಿವ್ಯರಾಮಚಂದ್ರಶೆಟ್ಟಿ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ರಾಜು ಕಾಳೇಶ್ವರ, ನಾಗರಾಜು, ಪಿಡಿಒ ಪ್ರಭಾಕರ್, ಅಂಚೆ ಇಲಾಖೆಯ ಚೈತ್ರ ಶಶಿಧರ್ ಗೌಡ, ಗ್ರಾಪಂ ಸದಸ್ಯರು, ಸಿಬ್ಬಂದಿ , ಯಜಮಾನರು, ಮುಖಂಡರು ಇದ್ದರು.