3 ರಾಜ್ಯದಲ್ಲಿ ಮನ್ಮುಲ್ ಹಾಲು ಮಾರಾಟಕ್ಕೆ ಚಿಂತನೆ: ಸಿ.ಶಿವಕುಮಾರ್

KannadaprabhaNewsNetwork |  
Published : Jul 15, 2025, 11:45 PM IST
15ಕೆಎಂಎನ್ ಡಿ16 | Kannada Prabha

ಸಾರಾಂಶ

ದೆಹಲಿಯ ಜತೆಗೆ ಅಕ್ಕಪಕ್ಕದ ರಾಜ್ಯಗಳಾದ ಉತ್ತರಪ್ರದೇಶ, ಛತ್ತೀಸ್‌ಘಡ್ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಸುಮಾರು 2 ಲಕ್ಷ ಲೀಟರ್‌ ವರೆಗೆ ಹಾಲು ಮಾರಾಟ ಮಾಡುವ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಒಕ್ಕೂಟದ ಆಡಳಿತ ಮಂಡಳಿಯವರು ದೆಹಲಿಗೆ ತೆರಳುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮನ್ಮುಲ್ ಒಕ್ಕೂಟದ ಹಾಲನ್ನು ಉತ್ತರಪ್ರದೇಶ, ಛತ್ತೀಸ್‌ಘಡ್ ಹಾಗೂ ಜಾರ್ಖಂಡ್ ರಾಜ್ಯಗಳ ಮಾರುಕಟ್ಟೆಯಲ್ಲಿ 2 ಲಕ್ಷ ಲೀಟರ್‌ ವರೆಗೆ ಮಾರಾಟ ಮಾಡಲು ಆಡಳಿತ ಮಂಡಳಿ ಚಿಂತಿಸಿದೆ ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿ ಬನ್ನಂಗಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದೆಹಲಿ ಮಾರುಕಟ್ಟೆಯಲ್ಲಿ ನಿತ್ಯ 50 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರ ಜತೆಗೆ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಒಕ್ಕೂಟದ ಆಡಳಿತ ಚಿಂತನೆ ನಡೆಸಿದೆ ಎಂದರು.

ದೆಹಲಿಯ ಜತೆಗೆ ಅಕ್ಕಪಕ್ಕದ ರಾಜ್ಯಗಳಾದ ಉತ್ತರಪ್ರದೇಶ, ಛತ್ತೀಸ್‌ಘಡ್ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಸುಮಾರು 2 ಲಕ್ಷ ಲೀಟರ್‌ ವರೆಗೆ ಹಾಲು ಮಾರಾಟ ಮಾಡುವ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಒಕ್ಕೂಟದ ಆಡಳಿತ ಮಂಡಳಿಯವರು ದೆಹಲಿಗೆ ತೆರಳುತ್ತಿದ್ದೇವೆ ಎಂದರು.

ರೈತರಿಗೆ ಹಾಲಿನ ಫ್ಯಾಟ್ ಆಧಾರದ ಮೇಲೆ ದರ ನಿಗಧಿಪಡಿಸಬೇಕು. ಅದಕ್ಕಾಗಿ ಡೇರಿಗಳಲ್ಲಿ ಕಾಮನ್ ಸಾಪ್ಟ್ ವೇರ್ ಯಂತ್ರಗಳನ್ನು ಅಳವಡಿಸಿಕೊಳ್ಳಬೇಕು. ತಾಲೂಕಿನ ಹಲವು ಸಂಘಗಳಲ್ಲಿ ಈಗಾಗಲೇ ಕಾಮನ್ ಸಾಪ್ಟವೇರ್ ಅಳವಡಿಕೆ ಮಾಡಿಕೊಂಡಿದ್ದಾರೆ ಎಂದರು.

ಬನ್ನಂಗಾಡಿ ಗ್ರಾಮಕ್ಕೆ 5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಘಟಕ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರು, ಯಜಮಾನರು ಒತ್ತಾಯಿಸಿದ್ದು, ಎರಡನ್ನು ಸಹ ಮಂಜೂರು ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಶಾಸಕರಾಗಿದ್ದಾಗಲು ಬನ್ನಂಗಾಡಿ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟು ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ. ಮನ್ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದೀರಿ. ಬಿಎಂಸಿ ಘಟಕ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರ್ಣಾಧಿಕಾರಿ ಉಷಾ, ತಾಪಂ ಮಾಜಿ ಅಧ್ಯಕ್ಷ ಬಿ.ಡಿ.ಹುಚ್ಚೇಗೌಡ, ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ಡೇರಿ ಪ್ರ.ಅಧ್ಯಕ್ಷ ಕರೀಗೌಡ, ನಿರ್ದೇಶಕರಾದ ನಾಗೇಶ್, ಧನಂಜಯ್, ಸ್ವಾಮಿ, ರವಿಕಿರಣ, ರವಿ, ಮಂಜು, ರೇಖಾ, ಸೌಮ್ಯ, ನಾಗೇಗೌಡ ಬಿ.ಪಿ.ಸುರೇಶ್, ಗ್ರಾಪಂ ಅಧ್ಯಕ್ಷ ಬಲರಾಮಶೆಟ್ಟಿ, ಮಾಜಿ ಅಧ್ಯಕ್ಷ ಯೋಗಣ್ಣ, ಬಿ.ಜಿ.ಪ್ರಕಾಶ್, ಮೇಸ್ಟ್ರು ಶಿವಪ್ಪ, ವಿಶ್ವ, ಪ್ರಸನ್ನ, ಚಲುವೇಗೌಡ, ಬೊಮ್ಮಾಯಿನಾಗಣ್ಣ, ಕಾರ್‍ಯದರ್ಶಿ ಪ್ರಸನ್ನ ಸೇರಿದಂತೆ ಗ್ರಾಮಸ್ಥರು, ಯಜಮಾನರು ಸಿಬ್ಬಂದಿ ಇದ್ದರು.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್