ಕನ್ನಡಪ್ರಭ ವಾರ್ತೆ ಗೋಕಾಕ
ಮಧ್ಯಾಹ್ನ 4 ಗಂಟೆಗೆ ರಥೋತ್ಸವ ಪ್ರಾರಂಭಗೊಂಡು ಸಂಜೆ 7ಗಂಟೆಗೆ ದ್ಯಾಮವ್ವ ಗುಡಿ (ಅಪ್ಸರಾ ಕೂಟ)ವರೆಗೆ ತಲುಪಿತು. ರಥೋತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ದ್ಯಾಮವ್ವ ದೇವಿ ಹಾಗೂ ದುರ್ಗಮ್ಮ ದೇವಿ ನಿನ್ನ ಪಾದಕ್ಕೆ ಉಧೋ ಉಧೋ ಎಂಬ ಘೋಷ ವಾಕ್ಯಗಳು ಮೊಳಗಿದವು. ವಿವಿಧ ವಾದ್ಯ ಮೇಳದ ಜೊತೆಗೆ ರಾಣಿಗ್ಯಾ ಬಾರುಕೋಲು ಸರಪಳಿಯಿಂದ ಹೊಡಿದುಕೊಂಡು ದೇವಿಯರ ರಥೋತ್ಸವ ಬರಮಾಡಿಕೊಂಡರು. ಪೊಲೀಸ್ ಇಲಾಖೆಯಿಂದ ರಥ ಬೀದಿಯೂದ್ದಕ್ಕೂ ಸೂಕ್ತ ಬಂಧು ಬಸ್ತ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವಕ್ಕೆ ಶಾಸಕ ಹಾಗೂ ಗ್ರಾಮ ದೇವತೆಯರ ಜಾತ್ರಾ ಸಮಿತಿ ಅಧ್ಯಕ್ಷ ರಮೇಶ ಜಾರಕಿಹೊಳಿ ಚಾಲನೆ ನೀಡಿದರು. ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ನಾಯಕರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಸನತ ಜಾರಕಿಹೊಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮೀಟಿಯ ಪ್ರಭು ಚೌಹಾಣ, ಬಸವಣ್ಣೆಪ್ಪ ಬನ್ನಿಶೆಟ್ಟಿ, ಶ್ರೀಪಾದ ದೇಶಪಾಂಡೆ, ಅಶೋಕ ಹೆಗ್ಗಣ್ಣವರ, ಅಡಿವೆಪ್ಪ ಕಿತ್ತೂರ ಸೇರಿದಂತೆ ಜಾತ್ರಾ ಕಮೀಟಿ ಸದಸ್ಯರು ಇದ್ದರು.ಭಂಡಾರ ಜಾತ್ರೆ: ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಬುಧವಾರದಂದು ಚಾಲನೆ ದೊರೆತಿದ್ದು ಭಕ್ತರು ಅರಿಶಿಣದ ಭಂಡಾರ ಏರಚಿಸಂಭ್ರಮಿಸಿದರು. ರಥೋತ್ಸವಕ್ಕೆ ಮಹಿಳೆಯರು ಹೂ ಪುಷ್ಪಗಳನ್ನು ಏರಚಿ ಸಂಭ್ರಮಿಸಿದರು. ಸಂಪೂರ್ಣ ಗೋಕಾಕ ನಗರ ಭಂಡಾರದಲ್ಲಿ ಮಿಂದಿತು.