ನಮ್ಮ ಶಾಲೆಯ ಮಕ್ಕಳ ಈ ಸಾಧನೆ ಅದ್ಭುತ: ಪಂಚಾಕ್ಷರಪ್ಪ.

KannadaprabhaNewsNetwork |  
Published : Dec 30, 2025, 01:15 AM IST
ತರಳಬಾಳು ಕ್ರೀಡಾಮೇಳದಲ್ಲಿ ವಿಜೇತರಾಗಿರುವ ನೇರಲಕೆರೆಶ್ರೀ ಅಮೃತೇಶ್ವರ ಪ್ರೌಢಶಾಲೆಯ ಮಕ್ಕಳು | Kannada Prabha

ಸಾರಾಂಶ

ತರೀಕೆರೆನಮ್ಮ ಶಾಲೆ ಮಕ್ಕಳ ಈ ಸಾಧನೆ ಅದ್ಭುತವಾದುದು. ಇದರಿಂದ ಎಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ದೈಹಿಕ ಶಿಕ್ಷಕ ಪಂಚಾಕ್ಷರಪ್ಪ.ಎಚ್ ತಿಳಿಸಿದರು.

ತರಳಬಾಳು ಕ್ರೀಡಾಮೇಳದಲ್ಲಿ ವಿಜೇತರಾದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮಕ್ಕಳು

ಕನ್ನಡಪ್ರಭ ವಾರ್ತೆ ತರೀಕೆರೆ

ನಮ್ಮ ಶಾಲೆ ಮಕ್ಕಳ ಈ ಸಾಧನೆ ಅದ್ಭುತವಾದುದು. ಇದರಿಂದ ಎಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ದೈಹಿಕ ಶಿಕ್ಷಕ ಪಂಚಾಕ್ಷರಪ್ಪ.ಎಚ್ ತಿಳಿಸಿದರು.ಕಡೂರಿನ ವೇದಾವತಿ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಬೀರೂರು ಮತ್ತು ಚಿಕ್ಕಮಗಳೂರು ವಲಯಗಳ ತರಳಬಾಳು ಕ್ರೀಡಾಮೇಳದಲ್ಲಿ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮಕ್ಕಳ ಉತ್ತಮ ಸಾಧನೆ ಮಾಡಿದ ಹಿನ್ನೆಲೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಮಾತನಾಡಿ ನಮ್ಮ ಶಾಲೆ ಮಕ್ಕಳ ಈ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವಂತಹು ದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ ಮಾತನಾಡಿ ವಲಯ ಮಟ್ಟದಲ್ಲಿ ನಮ್ಮ ಶಾಲೆ ಮಕ್ಕಳ ಈ ಸಾಧನೆ ಮೆಚ್ಚುವಂತಹುದು. ಇದು ಮುಂದೆ ನಡೆಯುವ ಕೇಂದ್ರ ಹಂತದಲ್ಲೂ ಪುನರಾವರ್ತನೆ ಆಗಬೇಕು ಎಂದು ಆಶಿಸಿದರು.ವಿಜೇತರಾದ ವಿದ್ಯಾರ್ಥಿಗಳು

ಬಾಲಕಿಯರ ವಿಭಾಗ: ಶೆಟಲ್ ಬ್ಯಾಡ್ಮಿಂಟನ್: ಕವನ, ಭೂಮಿಕಾ,ವಂದನಾ (ಪ್ರಥಮ) 4x100 ಮೀ. ರಿಲೇ: ನಂದಿನಿ, ಕಲ್ಪನಬಾಯಿ, ದೀಪಿಕಾಬಾಯಿ, ರೇಣುಕಾವರ್ಷಿಣಿ (ಪ್ರಥಮ) 200 ಮೀ. ಓಟ: ಭೂಮಿಕಾ ಎನ್ ಆರ್(ಪ್ರಥಮ) 100 ಮೀ. ಓಟ : ನಂದಿನಿ(ದ್ವಿತೀಯ). ಗುಂಡು ಎಸೆತ : ಸೃಜನ ಎಂ ಬಿ(ದ್ವಿತಿಯ) ಯೋಗಸಾನ : ಭುವನೇಶ್ವರಿ(ದ್ವಿತೀಯ) ರಿಧಮಿಕ್ ಯೋಗ : ಅಪೂರ್ವ, ನಯನ (ದ್ವಿತೀಯ) ಕಬ್ಬಡಿ (ದ್ವಿತೀಯ), ವಾಲಿಬಾಲ್ (ದ್ವಿತೀಯ), ಖೋ ಖೋ (ದ್ವಿತೀಯ) ಚೆಸ್ : ಭವ್ಯ ಸಿ.ಎಚ್ (ದ್ವಿತೀಯ)

ಬಾಲಕರ ವಿಭಾಗ: 4 x100 ಮೀ. ರೀಲೆ : ನಂದೀಶ, ಮನೋಜ್,ವಾಸುದೇವ, ತರುಣ್(ಪ್ರಥಮ) 200 ಮೀ.ಓಟ: ಮನೋಜ್.ಎನ್ (ಪ್ರಥಮ) 400 ಮೀ.ಓಟ :ರಾಕೇಶ್ ಆರ್ (ಪ್ರಥಮ) 1500 ಮೀ. ಓಟ ಶರತ್ ನೀರಲಗಿ (ಪ್ರಥಮ) ಚೆಸ್: ಮಹಮದ್ ಅಫ್ನಾನ್ (ಪ್ರಥಮ) ಗುಂಡು ಎಸೆತ : ಮನೋಜ್ (ದ್ವಿತೀಯ) ಶೆಟಲ್ ಬ್ಯಾಡ್ಮಿಂಟನ್ : ಚೇತನ್, ನಂದೀಶ, ಮನೋಜ್ (ದ್ವಿತೀಯ) ಶಾಲೆಯ ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸವಿತಮ್ಮ ಬಿ, ಸತೀಶ್ ನಂದಿಹಳ್ಳಿ, ಮಂಜುಳ ಮಲ್ಲಿಗವಾಡ, ಬಿಸಿಯೂಟ ತಯಾರಕರಾದ ರತ್ನಮ್ಮ ಭಾಗವಹಿಸಿದ್ದರು.-

29ಕೆಟಆರ್.ಕೆ.4ಃ ತರಳಬಾಳು ಕ್ರೀಡಾಮೇಳದಲ್ಲಿ ವಿಜೇತರಾದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮಕ್ಕಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ