ರಾಜಕೀಯಕ್ಕಾಗಿ ಮಾತ್ರವೇ ಈ ಸಮಾವೇಶ

KannadaprabhaNewsNetwork |  
Published : Apr 19, 2025, 12:37 AM IST
೧೮ಶಿರಾ೧: ಶಿರಾ ನಗರದ ಕಾಡುಗೊಲ್ಲರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕೆ.ಈಶ್ವರಪ್ಪ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಾಲೂಕು ಕರ್ಯದರ್ಶಿ ಎಂ.ಚAದ್ರಣ್ಣ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ರಾಜ್ಯದ ಕಾಡುಗೊಲ್ಲ ಸಮುದಾಯ ಚಿಕ್ಕೋಡಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ಏ. ೨೦ ರಂದು ಹಮ್ಮಿಕೊಂಡಿರುವ ಯಾದವ ಸಮಾವೇಶಕ್ಕೆ ಭಾಗವಹಿಸಬೇಡಿ. ಈ ಸಮಾವೇಶಕ್ಕೂ ನಮಗೂ ಸಂಬಂಧ ಇಲ್ಲ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಕೆ.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದ ಕಾಡುಗೊಲ್ಲ ಸಮುದಾಯ ಚಿಕ್ಕೋಡಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ಏ. ೨೦ ರಂದು ಹಮ್ಮಿಕೊಂಡಿರುವ ಯಾದವ ಸಮಾವೇಶಕ್ಕೆ ಭಾಗವಹಿಸಬೇಡಿ. ಈ ಸಮಾವೇಶಕ್ಕೂ ನಮಗೂ ಸಂಬಂಧ ಇಲ್ಲ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಕೆ.ಈಶ್ವರಪ್ಪ ಹೇಳಿದರು. ಅವರು ನಗರದ ಕಾಡುಗೊಲ್ಲರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಗೊಲ್ಲ ಯಾದವ ಸಂಘಕ್ಕೂ, ಕರ್ನಾಟಕದ ಮೂಲ ನಿವಾಸಿಗಳಾದ ಬುಡಕಟ್ಟು, ಅಲೆಮಾರಿ ಸಮುದಾಯದ ಕಾಡುಗೊಲ್ಲರಿಗೂ ಯಾವುದೇ ಸಂಬಂಧವಿಲ್ಲ. ಕೇವಲ ರಾಜಕಾರಣಕ್ಕಾಗಿ ಕಾಡುಗೊಲ್ಲರನ್ನು ಉಪಯೋಗಿಸಿಕೊಂಡು ಅವರ ಯಾವ ಬೇಡಿಕೆಗಳನ್ನೂ ಈಡೇರಿಸಿಕೊಳ್ಳಲು ಬಿಡುತ್ತಿಲ್ಲ ಎಂದರು. ರಾಜ್ಯ ಕಾಡುಗೊಲ್ಲ ಸಂಘದ ತಾಲೂಕು ಕರ್ಯದರ್ಶಿ ಎಂ.ಚಂದ್ರಣ್ಣ ಮಾತನಾಡಿ, ಕಾಡುಗೊಲ್ಲರು ಜನಪದ ವೀರಗಾರರಾದ ಚಿತ್ರ, ಮುತ್ತಿ, ಚಂದ್ರ, ಕಾಟಯ್ಯ, ದೊಡ್ಡೋನು ಜುಂಜುಪ್ಪ, ಕ್ಯಾತಯ್ಯ, ಚಿಕ್ಕಣ್ಣ, ಸಿರಿಯಣ್ಣ, ಸೀಗಣ್ಣ, ಗೌರಸಂದ್ರದ ಮಾರಮ್ಮ, ಕರಿಯಮ್ಮ, ಕರಡಿ ಬುಳ್ಳಪ್ಪ, ಈರಣ್ಣ, ಅಜ್ಜಪ್ಪ, ಇತರೆ ನೂರಾರು ಸಾಂಸ್ಕೃತಿಕ ವೀರಗಾರರನ್ನು ಕುಲದೈವಗಳು ಎಂದು ಮೂಲ ಜಾನಪದ ಶೈಲಿಯಲ್ಲಿ ಆರಾಧನೆ ಮಾಡುತ್ತಿದ್ದೇವೆ. ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲ, ಇತರೆ ಉಪಪಂಗಡಗಳಲ್ಲಿ ಹುಟ್ಟಿನಿಂದ ಬುಡಕಟ್ಟು ಜೀವ ವೈವಿಧ್ಯದಿಂದ ಎಲ್ಲಾ ಸಮುದಾಯಗಳ ಜೊತೆಗೆ ಸೌಹಾರ್ಧತೆಯಿಂದ ಬಡತನದಲ್ಲಿ ಬದುಕುತ್ತಿದ್ದೇವೆ. ಆದರೆ ಗೊಲ್ಲ ಸಮುದಾಯದವರು ನಗರ ಪ್ರದೇಶಗಳಲ್ಲಿ ವಾಸವಾಗಿ ಅಭಿವೃದ್ಧಿ ಹೊಂದಿದ್ದು, ಕಾಡುಗೊಲ್ಲರನ್ನು ರಾಜಕೀಯವಾಗಿ, ಆರ್ಥಿಕವಾಗಿ ತುಳಿಯಲು ಯತ್ನಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಡುಗೊಲ್ಲ ಸಂಘದ ಜಿಲ್ಲಾಧ್ಯಕ್ಷ ರಮೇಶ್‌, ಈರಣ್ಣ, ವಕೀಲರಾದ ಸಿದ್ದಯ್ಯ, ಮುಖಂಡರಾದ ಕರಿಯಣ್ಣ, ಈರಣ್ಣ, ದೊಡ್ಡೀರಪ್ಪ, ಈಶ್ವರಪ್ಪ, ರೇವಣ್ಣ, ರಂಗಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ