ತುಮಕೂರು : ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಿದ್ದು ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಲಿದ್ದಾರೆ ಎಂದು ತುಮಕೂರಿನ ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.
2016 ರಲ್ಲಿ ಎಚ್. ಡಿ. ದೇವೆಗೌಡರು ಮಾಡಿಸಿದ ಚಂಡಿಕಾಯಾಗದ ಫಲ, 2024ಕ್ಕೆ ಲಭಿಸಿದೆ. ಅಂದು ತುಮಕೂರು ತಾಲೂಕು ಚಿನಗ ಗ್ರಾಮದಲ್ಲಿರುವ ಮೂಕಾಂಬಿಕಾ ದೇವಿ ಅಮ್ಮನವರ ಸನ್ನಿಧಿಯಲ್ಲಿ ದೇವೇಗೌಡರು ಚಂಡಿಕಾಯಾಗ ಮಾಡಿಸಿದ್ದರು. ಅಂದೇ ಅಮ್ಮನವರು ನಿಖಿಲ್ ಕುಮಾರಸ್ವಾಮಿಯ ಭವಿಷ್ಯ ನುಡಿದಿದ್ದರು ಎಂದು ಸ್ವಾಮೀಜಿ ತಿಳಿಸಿದ್ದಾರೆ.
2023ರ ನಂತರ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರು ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ನಿಖಿಲ್ ಕುಮಾರಸ್ವಾಮಿಗೆ 2023 ರಿಂದಲೇ ರಾಜಯೋಗ ಶುರುವಾಗಿರುವುದಾಗಿ ತಿಳಿಸಿದರು.
ಭಗವತಿಯ ಪರಿಪೂರ್ಣ ಆಶೀರ್ವಾದ ನಿಖಿಲ್ ಗೆ ಇದ್ದು, ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನು ಅಮ್ಮನವರು ಕರುಣಿಸಿದ್ದಾರೆ. ಅವರ ನಿರೀಕ್ಷೆಗೂ ಮೀರಿದ ಅಂತರದ ಗೆಲುವನ್ನು ಅಮ್ಮನವರು ಸೂಚಿಸಿದ್ದಾರೆ ಎಂದರು.
ಯಾರು ಅನುಷ್ಠಾನವನ್ನು ಮಾಡಿ ವಿಶೇಷವಾಗಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೋ ಅವರಿಗೆ ಪರಿಪೂರ್ಣ ಆಶೀರ್ವಾದ ಪಾಪ್ತಿಯಾಗುತ್ತದೆ. ಮಹಾಲಕ್ಷ್ಮೀ, ಮಹಾಕಾಳಿ, ಮಹಾ ಸರಸ್ಪತಿಯ ಸ್ವರೂಪಿಣಿಯಾಗಿರುವಂತಹ ಅಮ್ಮನವರ ಆಶೀರ್ವಾದ ಆಗಿರುವುದರಿಂದ ಖಂಡಿತವಾಗಿಯೂ ಅವರ ಕುಟುಂಬಕ್ಕೆ ಒಳ್ಳೆಯ ಅನುಗ್ರಹ ಆಗುತ್ತದೆ ಎಂದು ಹೇಳಿದರು.
ಹಿಂದಿನ ನೋವುಗಳನ್ನು ಮರೆಸಿ ಮುಂದಿನ ಜೀವನ ಸುಖಮಯವಾಗಿರುತ್ತದೆ ಎಂದ ಅವರು, ಪ್ರತಿಯೊಂದು ಅಧಿಕಾರ ಸಿಗಬೇಕಾದರೆ ರಾಜಯೋಗ ಇರಬೇಕು. ರಾಜಯೋಗ ಇಲ್ಲದೇ ಅಧಿಕಾರ ಸಿಗಲು ಸಾಧ್ಯವಿಲ್ಲ. ಅಮ್ಮನವರ ಆಶೀರ್ವಾದದಿಂದ ಈಗ ನಿಖಿಲ್ ಗೆ ರಾಜಯೋಗ ಸಿಕ್ಕು, ಉನ್ನತ ಅಧಿಕಾರಗಳನ್ನು ಅನುಭವಿಸುವ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ಹಿಂದೆ ಎರಡು ಚುನಾವಣೆಯಲ್ಲೂ ನಿಖಿಲ್ ಗೆ ಹಿನ್ನಡೆಯಾಗುತ್ತದೆ ಎಂದು ಅಮ್ಮನವರು ಹೇಳಿದ್ದರು ಎಂದು ತಿಳಿಸಿದರು.