ಆದರ್ಶ ಗ್ರಾಮದ ಗೋ.ರು.ಚ ಕನಸು,ನನಸು: ಸಿ ಸೋಮಶೇಖರ್‌

KannadaprabhaNewsNetwork |  
Published : Jun 25, 2024, 12:39 AM IST
uಜ | Kannada Prabha

ಸಾರಾಂಶ

ಅಜ್ಜಂಪುರ, ಒಂದು ಗ್ರಾಮ ಆದರ್ಶ ಗ್ರಾಮವಾಗುವಲ್ಲಿ ಗೊಂಡೆದಳ್ಳಿ ಗೊ.ರು. ಚನ್ನಬಸಪ್ಪನವರ ಕನಸು, ಬದ್ಧತೆ ಎದ್ದು ಕಾಣುತ್ತದೆ. ತಾನು ಹುಟ್ಟಿ ಬೆಳೆದ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಈ ಗ್ರಾಮವನ್ನು ಮಾದರಿ ಗ್ರಾಮಯಾಗಿ ಮಾಡಿದ್ದಾರೆ ಎಂದು ನಿವೃತ್ತಿ ಜಿಲ್ಲಾಧಿಕಾರಿ ಡಾ. ಸಿ ಸೋಮಶೇಖರ್‌ ಹೇಳಿದರು.

27ನೇ ವಾರ್ಷಿಕೋತ್ಸವ । ಗೊರುಚ ಗ್ರಾಮ ವಿಕಾಸ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನ । ಸನ್ಮಾನ ಸಮಾರಂಭ.

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಒಂದು ಗ್ರಾಮ ಆದರ್ಶ ಗ್ರಾಮವಾಗುವಲ್ಲಿ ಗೊಂಡೆದಳ್ಳಿ ಗೊ.ರು. ಚನ್ನಬಸಪ್ಪನವರ ಕನಸು, ಬದ್ಧತೆ ಎದ್ದು ಕಾಣುತ್ತದೆ. ತಾನು ಹುಟ್ಟಿ ಬೆಳೆದ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಈ ಗ್ರಾಮವನ್ನು ಮಾದರಿ ಗ್ರಾಮಯಾಗಿ ಮಾಡಿದ್ದಾರೆ ಎಂದು ನಿವೃತ್ತಿ ಜಿಲ್ಲಾಧಿಕಾರಿ ಡಾ. ಸಿ ಸೋಮಶೇಖರ್‌ ಹೇಳಿದರು.

ಗೊಂಡೆಹಳ್ಳಿಯ 27ನೇ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗೋ.ರೂ.ಚ ಇಂದು ನಮ್ಮ ಕಣ್ಣಿಗೆ ಸಮಾಜದ ಸೇನಾನಿಯಾಗಿ, ಧಾರ್ಮಿಕ ಪ್ರತಿನಿಧಿ ಮತ್ತು ನಾಟಕ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆವಿ ನಾಗರಾಜುಮೂರ್ತಿ, ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ ನಾಗರಿಕತೆ ಬೆಳೆಸುವುದು ಎಂದರೆ ದೊಡ್ಡ ರಸ್ತೆ ಮತ್ತು ದೊಡ್ಡ ಮಹಲ್ ಕಟ್ಟುವುದಲ್ಲ. ದೊಡ್ಡ ದೊಡ್ಡ ಸೇತುವೆ ನಿರ್ಮಾಣ ಮಾಡುವುದು ಅಲ್ಲ. ಈ ನಾಡಿನ ಸಮಾಜವನ್ನು ಶಿಕ್ಷಿತ, ಸುಸಂಸ್ಕೃತರನ್ನಾಗಿ ಮಾಡಿದರೆ ಗ್ರಾಮ ವಿಕಾಸವಾದಂತೆ ಗ್ರಾಮ ಅಭಿವೃದ್ಧಿಯಾದರೆ ಕನ್ನಡ ನಾಡು ಅಭಿವೃದ್ಧಿಯಾದಂತೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತರೀಕೆರೆ ತಾಲೂಕು ಶಾಸಕ ಜಿ.ಎಸ್ . ಶ್ರೀನಿವಾಸ್ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಿ ಪುರಸ್ಕರಿಸಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನ್ಯಧಿಕಾರಿ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಜನರಲ್ಲಿ ನೈತಿಕತೆ, ಶಿಸ್ತು, ಪ್ರಜ್ಞೆ ಕಾಣುತ್ತಿಲ್ಲ ಇದರ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು. ಪ್ರಶಸ್ತಿ ಪುರಸ್ಕೃತರು: ಆದರ್ಶ ಶಿಕ್ಷಕ ಪ್ರಶಸ್ತಿ ಜಿ.ಎಂ ತುಂಗೇಶ್ ಗೊಂಡೆದಳ್ಳಿ, ಮಹಿಳಾ ಸಾಧಕಿ ವಿಭಾಗಕ್ಕೆ ಡಾ.ಗುರಮ್ಮ ಸಿದ್ದಾರೆಡ್ಡಿ ಬೀದರ್, ಎಂಜಿನಿಯರ್ ವಿಭಾಗಕ್ಕೆ ಜಿ.ಕೆ.ಹರಕುಮಾರ್ ಬೆಂಗಳೂರು, ತಜ್ಞ ವೈದ್ಯ ಸೇವಾ ಪ್ರಶಸ್ತಿ ಡಾಕ್ಟರ್ ಜಿ .ಎಸ್. ಚಂದ್ರಶೇಖರ್ ಉಡುಪಿ, ಗ್ರಾಮೀಣ ಶಿಕ್ಷಣ ವಿಭಾಗಕ್ಕೆ ಎಚ್.ಈ. ಸೋಮಶೇಖರಪ್ಪ, ಪಶುಸಂಗೋಪನ ವಿಭಾಗಕ್ಕೆ ಡಾ. ಜಿ.ಎಂ ಕೊಟ್ರೇಶ್ ಶಿವಮೊಗ್ಗ ಇವರೆಲ್ಲರಿಗೂ ಗೌರವಿಸಿ ಪುರಸ್ಕರಿಸಲಾಯಿತು.ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಹಾತ್ಮ ಗಾಂಧೀಜಿಯವರ ಕನಸಿನ ರಾಮ ರಾಜ್ಯದ ಕಲ್ಪನೆಯಲ್ಲಿ ಗೋರುಚ ಗೊಂಡೆದಳ್ಳಿಯನ್ನು ರಾಮ ರಾಜ್ಯವನ್ನಾಗಿ ಮಾಡಿದ್ದಾರೆ ಎಂದರು. ಈ ಪ್ರತಿಷ್ಟಾನಕ್ಕೆ ತಮ್ಮ ಪೀಠದಿಂದ ಒಂದು ಲಕ್ಷ ರು. ದೇಣಿಗೆ ನೀಡಿರುತ್ತಾರೆ.

ಈ ಸಮಾರಂಭದಲ್ಲಿ ಗೊರುಚ ಪ್ರತಿಷ್ಠಾನದ ಅಧ್ಯಕ್ಷ ಜಿ.ಪಿ.ಕರಿಯಪ್ಪ ಕಾರ್ಯದರ್ಶಿ ಜಿ.ಎಸ್ . ಮೋಹನ್ ಕುಮಾರ್ ಜಿ. ಸಿ .ಶರತ್, ಜಿ.ಮುರುಗೇಶ್ , ಜಿ.ಪಿ. ಪ್ರಭಾಕರ್, ಶಾರದಾ ಶಿವಲಿಂಗ ಸ್ವಾಮಿ, ಜಿ ಎಚ್ ಗಿರೀಶ್, ಮುಕ್ತಾ ಬಿ ಕಾಗಲಿ,ಜಿ.ಸಿ. ಶಿವಸ್ವಾಮಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ