ತೊಕ್ಕೊಟ್ಟು: ಕನ್ನಡಪ್ರಭ, ಚಿತ್ರಕಲಾ ಪರಿಷತ್, ಅರಣ್ಯ ಇಲಾಖೆ ಸಹಯೋಗದಲ್ಲಿ ಚಿತ್ರಕಲಾ ಸ್ಪರ್ಧೆ

KannadaprabhaNewsNetwork |  
Published : Nov 11, 2025, 03:15 AM IST
ತೊಕ್ಕೊಟ್ಟು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ಪತ್ರಿಕೆಯು ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಪ್ರಯುಕ್ತ ಭಾನುವಾರ ತೊಕ್ಕೊಟ್ಟು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿಸ್ಟ್‌ ಉಳ್ಳಾಲ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ-2025 ನಡೆಯಿತು.

ಉಳ್ಳಾಲ: ಮನುಷ್ಯ ಸ್ವಾರ್ಥಕ್ಕಾಗಿ ಕಾಡಿನ ಒಳಗೆ ತಾನು ನುಗ್ಗಿ ಕಾಡು ನಾಶಮಾಡುವ ಮೂಲಕ ಕಾಡುಪ್ರಾಣಿಗಳು ನಾಡಿನ ಒಳಗೆ ನುಗ್ಗುವಂತೆ ಮಾಡಿದ್ದಾನೆ. ಇದು ಬಹಳ ಅಪಾಯಕಾರಿಯಾಗಿದ್ದು, ಇದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ತೊಕ್ಕೊಟ್ಟು ಚೆಂಬುಗುಡ್ಡೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಹೇಳಿದ್ದಾರೆ.

ಕನ್ನಡಪ್ರಭ ಪತ್ರಿಕೆಯು ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಪ್ರಯುಕ್ತ ಭಾನುವಾರ ತೊಕ್ಕೊಟ್ಟು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಿದ್ದ ಉಳ್ಳಾಲ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ-2025 ಉದ್ಘಾಟಿಸಿ ಅವರು ಮಾತನಾಡಿದರು.ಈ ದಿನ ವಿದ್ಯಾರ್ಥಿಗಳು ಬಿಡಿಸಿದ ಚಿತ್ರ ಕೇವಲ ಹಾಳೆಯಲ್ಲಿ ಮಾತ್ರ ಉಳಿಯದೇ ನಿಮ್ಮ ಮನಸ್ಸಿನಲ್ಲಿ ಉಳಿದು ಮುಂದೆ ನಿಮ್ಮಿಂದ ಕಾಡು ಹಾಗೂ ಕಾಡು ಪ್ರಾಣಿಗಳು ಉಳಿಸುವ ಕೆಲಸ ನಡೆಯಲಿ ಎಂದರು.

ಉಪ ವಲಯ ಅರಣ್ಯಾಧಿಕಾರಿ ಮೆಹಬೂಬ್‌ ಮಾತನಾಡಿ, ಗಿಡ ಮರಗಳನ್ನು ಬೆಳೆಸಿ ಉಳಿಸಿದರೆ ಮಾತ್ರ ನಮಗೆ ಉಸಿರಾಡಲು ಗಾಳಿ ಸಿಗುತ್ತದೆ. ಶುದ್ಧಗಾಳಿ ಎಷ್ಟು ಮುಖ್ಯ ಅನ್ನುವುದನ್ನು ನಾವು ಕೊರೋನಾ ಸಂದರ್ಭದಲ್ಲಿ ತಿಳಿದಿದ್ದೆವು. ಆದ್ದರಿಂದ ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಯ ಬಗ್ಗೆ ಕನ್ನಡಪ್ರಭ ಆಯೋಜಿಸಿರುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ನಿಜಕ್ಕೂ ಮರ ಗಿಡಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವಂತಾಗುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ಅರ್ಜುನ್ ಮಾಡೂರು ಮಾತನಾಡಿ, ಸೋಲು ಮತ್ತು ಗೆಲುವು ಜೀವನದಲ್ಲಿ ಸಹಜ. ಗೆಲುವನ್ನು ಸಂಭ್ರಮಿಸುವ ರೀತಿಯಲ್ಲಿ ಸೋಲನ್ನು ಅನುಭವಿಸಲು ಗೊತ್ತಿರಬೇಕು. ಆದರಂತೆ ಸ್ಪರ್ಧೆಯಲ್ಲಿ ಕಲಿತ ಶಿಕ್ಷಣವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಭಾರತೀಯ ತೀಯ ಸಮಾಜ ಉಳ್ಳಾಲ ವಲಯ ಅಧ್ಯಕ್ಷ ಜಯಂತ್ ಕೊಂಡಾಣ ವಿಜೇತರಿಗೆ ಬಹುಮಾನ ವಿತರಿಸಿದರು.

ರಾಷ್ಟ್ರೋತನ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಪ್ರಖ್ಯಾತ್ ರೈ, ಏಷಿಯಾನೆಟ್‌ ಸುವರ್ಣ ನ್ಯೂಸ್‌ನ ದ.ಕ. ಬ್ಯೂರೋ ಚೀಫ್‌ ಭರತ್ ರಾಜ್, ಕನ್ನಡಪ್ರಭದ ಉಪ ಸಂಪಾದಕ ದೇವಿಪ್ರಸಾದ್ ಕಾರ್ಕಳ ಉಪಸ್ಥಿತರಿದ್ದರು.ಗೋಪಾಲಕೃಷ್ಣ ತಂತ್ರಿವರ್ಯರು ಮುನ್ನೂರು ಮನೆ, ಬಪ್ಪಾಲ್ ಫ್ರೆಂಡ್ಸ್, ಸಮಾಜಸೇವಕ ಸಂತೋಷ್ ಕುಮಾರ್‌ ರೈ ಬೋಳಿಯಾರ್ ಸಹಕರಿಸಿದರು.

ಖ್ಯಾತ ಚಿತ್ರ ಕಲಾವಿದರಾದ ಜೆ.ಪಿ. ಆಚಾರ್ಯ, ಉರ್ವಾ ಎಸ್.ಈ.ಎಸ್. ಸಂಸ್ಥೆಯ ಬೋಧಕ ದಿವಾಕರ್ ಟಿ. ತೀರ್ಪುಗಾರರಾಗಿ ಭಾಗವಹಿಸಿದ್ದರು.

ಕನ್ನಡಪ್ರಭ ಉಳ್ಳಾಲ ತಾಲೂಕು ವರದಿಗಾರ್ತಿ ವಜ್ರ ಗುಜರನ್ ಸ್ವಾಗತಿಸಿದರು. ಉಪ ಸುದ್ದಿ ಸಂಪಾದಕ ಕೃಷ್ಣ ಮೋಹನ ತಲೆಂಗಳ ನಿರೂಪಿಸಿ, ವಂದಿಸಿದರು.ಚಿತ್ರಸ್ಪರ್ಧೆ ಫಲಿತಾಂಶ: ಮೂರು ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಆರು ಮಂದಿ ದ.ಕ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.4, 5ನೇ ತರಗತಿ ವಿಭಾಗ:

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 5ನೇ ತರಗತಿಯ ನಿರ್ವಿ ಡಿ. ಉಳ್ಳಾಲ ಪ್ರಥಮ, ಅಸಿಸ್ಸಿ ಸೆಂಟ್ರಲ್ ಸ್ಕೂಲ್‌ನ 5ನೇ ತರಗತಿಯ ಆಯಿಷಾ ಸಮ್ರ್ಹಾ ದ್ವಿತೀಯ, ಕೇಂದ್ರೀಯ ವಿದ್ಯಾಲಯದ 4ನೇ ತರಗತಿಯ ದಿತ್ಯಾ ಭಂಡಾರಿ ತೃತೀಯ, ಪರಿಜ್ಞಾನ ಶಾಲೆಯ 5ನೇ ತರಗತಿಯ ಪ್ರಥಮ್ ಹಾಗೂ ಅಂಬ್ಲಮೊಗರು ಸರ್ಕಾರಿ ಹೈಸ್ಕೂಲಿನ ಸಯ್ಯದ್ ಮೊಹಮ್ಮದ್ ಸ್ವಯಾನ್‌ ಸಮಾಧಾನಕರ ಬಹುಮಾನ.

6,7ನೇ ತರಗತಿ ವಿಭಾಗ:

ಪರಿಜ್ಞಾನ ವಿದ್ಯಾಲಯದ 7ನೇ ತರಗತಿಯ ಧಾತ್ರಿ ಪ್ರಥಮ, ಕಣಚೂರು ಪಬ್ಲಿಕ್ ಶಾಲೆಯ 7ನೇ ತರಗತಿಯ ಹಫ್ಸ ಫಾತಿಮಾ ದ್ವಿತೀಯ, ಪರಿಜ್ಞಾನ ವಿದ್ಯಾಲಯದ 6ನೇ ತರಗತಿಯ ಸೈಶ್‌ ಅಮೀನ್‌ ತೃತೀಯ, ಕಾರ್ಮೆಲ್ ಸೆಂಟ್ರಲ್‌ ಸ್ಕೂಲ್‌ನ 7ನೇ ತರಗತಿಯ ಸಾತ್ವಿಕಾ ಎಸ್‌. ಹಾಗೂ ಅಂಬ್ಲಮೊಗರು ಸರ್ಕಾರಿ ಹೈಸ್ಕೂಲಿನ 7ನೇ ತರಗತಿಯ ದ್ಯುತಿ ಸಮಾಧಾನಕರ ಬಹುಮಾನ.8, 9, 10ನೇ ತರಗತಿ ವಿಭಾಗ:

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 8ನೇ ತರಗತಿಯ ಸನ್ನಿಧಿ ಪಿ. ಸನಿಲ್ ಪ್ರಥಮ, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ರಿಹಾ ಝೈನಾಬ ದ್ವಿತೀಯ, ಹರೇಕಳ ರಾಮಕೃಷ್ಣ ಹೈಸ್ಕೂಲ್‌ನ 10ನೇ ತರಗತಿಯ ದರ್ಶಿನಿಯ ತೃತೀಯ, ಮೌಲಾನ ಆಝಾದ್ ಮಾದರಿಯ ಶಾಲೆಯ 8ನೇ ತರಗತಿಯ ಫಾತ್ಮಿತಾ ಹನ್ಸಿಯಾ ಹಾಗೂ ಪರಿಜ್ಞಾನ ಶಾಲೆಯ 9ನೇ ತರಗತಿಯ ಸೋನಿತ್‌ ಎಕ್‌ಕೆ ಸಮಾಧಾನ ಬಹುಮಾನ ಪಡೆದಿದ್ದಾರೆ.

PREV

Recommended Stories

ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ನಯನಾಡು ಗೆಳೆಯರ ಬಳಗ ಸೇವಾ ಟ್ರಸ್ಟ್‌ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ