ಯೋಗ್ಯತೆ ಇಲ್ಲದವರು ಶಾಸಕರಾಗಿದ್ದಾರೆ: ಪಿ.ಟಿ. ಪರಮೇಶ್ವರ ನಾಯ್ಕ

KannadaprabhaNewsNetwork |  
Published : Aug 25, 2026, 02:45 AM IST
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಕನಿಷ್ಠ ಜ್ಞಾನ ತಿಳಿವಳಿಕೆ ಇಲ್ಲದ ವ್ಯಕ್ತಿ ಶಾಸಕರಾಗಿದ್ದಾರೆ. ಇಂಥವರು ನನ್ನ ವಿರುದ್ಧ ತನಿಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಾನು ತಪ್ಪು ಮಾಡಿದ್ದರೆ ಆ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಕಿಡಿಕಾರಿದರು.

ಹೂವಿನಹಡಗಲಿ: ಕನಿಷ್ಠ ಜ್ಞಾನ ತಿಳಿವಳಿಕೆ ಇಲ್ಲದ ವ್ಯಕ್ತಿ ಶಾಸಕರಾಗಿದ್ದಾರೆ. ಇಂಥವರು ನನ್ನ ವಿರುದ್ಧ ತನಿಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಾನು ತಪ್ಪು ಮಾಡಿದ್ದರೆ ಆ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಕಿಡಿಕಾರಿದರು.

ಪಟ್ಟಣದ ಅವರ ನಿವಾಸದಲ್ಲಿ ಜರುಗಿದ ಭಾರತ್‌ ಜೋಡೋ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆರೆಗಳಿಗೆ ನೀರು ಹರಿಸುವ ನೀರಾವರಿ ಸಭೆ ಕರೆದು, ರೈತರ ಪರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜತೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಪ್ರತಿ ವರ್ಷವೂ ₹2 ಕೋಟಿ ಮೀಸಲಿಡಲಾಗಿತ್ತು. ಆ ಅನುದಾನದ ವಿವರಗಳನ್ನು ಕೊಡಿ ಎಂದು ಅಧಿಕಾರಿಗಳನ್ನು ಕೇಳಿದ್ದು ತಪ್ಪಾ? ಎಂದು ಪ್ರಶ್ನಿಸಿದರು.

ಅಧಿಕಾರಿಗಳ ಸಭೆ ಮಾಡಿದ್ದು ರೈತರಿಗೊಸ್ಕರ. ನನ್ನ ವಿರುದ್ಧ ತನಿಖೆಗೆ ಶಾಸಕರು ಅರ್ಜಿ ಹಾಕಿದ್ದಾರೆ. ಈ ಸಮಸ್ಯೆ ಇತ್ಯಾರ್ಥವಾಗುವ ವರೆಗೂ, ನಾನು ವಿಜಯನಗರ ಜಿಲ್ಲೆಯಲ್ಲಿ ಬೆಂಗಾವಲು ಪಡೆ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನನ್ನ ಬಗ್ಗೆ ಈ ಶಾಸಕರಿಗೆ ಅಸೂಯೆ ಇದೆ. ಪ್ರಾಧಿಕಾರ, ನಿಗಮಗಳು ಗಂಜಿ ಕೇಂದ್ರ ಎಂದು ಜರಿದಿರುವ ಬಿಜೆಪಿಗರು, ತಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಜನರಿಗೆ ನೀಡಿದ್ದರು ಎನ್ನುವುದು ಗೊತ್ತಿದೆ. ನನಗೂ ಕಾನೂನು ಪ್ರಜ್ಞೆ ಇದೆ. ಸಾಮಾನ್ಯ ತಿಳಿವಳಿಕೆ ಇಲ್ಲದವರಿಗೆ ನಾನು ಉತ್ತರಿಸಲ್ಲ. ಇದಕ್ಕೆ ಸಮಯ ಬಂದಾಗ ಉತ್ತರಿಸುವೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ. 2028ಕ್ಕೆ ಅವರನ್ನು ಮತದಾರರು ಮನೆಗೆ ಕಳಿಸುತ್ತಾರೆ ಎಂದು ಭವಿಷ್ಯ ನುಡಿದರು.

ಬೆಂಗಾವಲು ವಾಹನ ಹಾಗೂ ಎಸ್ಕಾರ್ಟ್‌ ಬಗ್ಗೆ ಸರ್ಕಾರ ಈಗಾಗಲೇ ಶಾಸಕರಿಗೆ ಉತ್ತರ ನೀಡಿದೆ. ರಾಜ್ಯ ಗುಪ್ತವಾರ್ತೆಯ ನಿರ್ದೇಶನದಂತೆ ಜಿಲ್ಲೆ ಪ್ರವಾಸ ಕೈಗೊಳ್ಳುವ ಗಣ್ಯ ವ್ಯಕ್ತಿಗಳಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಭದ್ರತೆ ಒದಗಿಸಲು ಸೂಚಿಸಿದೆ. ಆದ್ದರಿಂದ ಬೆಂಗಾವಲು ವಾಹನ ನೀಡಿದ್ದಾರೆ ಎಂದು ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.ಪ್ರತಿ ಗ್ರಾಪಂ ಮಟ್ಟದಲ್ಲಿ 6 ಜನರ ಗ್ಯಾರಂಟಿ ಯೋಜನೆ ಸಮಿತಿ ರಚನೆ

ಹೂವಿನಹಡಗಲಿ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಿ ಪ್ರತಿ ಗ್ರಾಪಂಗೆ 6 ಜನರ ಆಯ್ಕೆ ಮಾಡಲಾಗುವುದು ಎಂದು ಗ್ಯಾರಂಟಿ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.ಪಟ್ಟಣದ ಅವರ ನಿವಾಸದಲ್ಲಿ ಭಾರತ್‌ ಜೋಡೋ ಅಭಿಯಾನ, ಗ್ಯಾರಂಟಿ ಯೋಜನೆ ಗ್ರಾಪಂ ಮಟ್ಟದಲ್ಲಿ ಸಮಿತಿ ರಚನೆ ಸಭೆಯಲ್ಲಿ ಮಾತನಾಡಿ, ರಾಜ್ಯದ ಯುವಕರಿಗೆ ರಾಜಕಾರಣದ ಜವಾಬ್ದಾರಿ ನೀಡುವ ಉದ್ದೇಶದಿಂದ, ಭಾರತ್‌ ಜೋಡೋ ಅಭಿಯಾನ ಜತೆಗೆ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಯುವಕರು ಆನ್‌ಲೈನ್‌ ಮೂಲಕ ನೋಂದಣಿ ಮಾಡುತ್ತಿದ್ದಾರೆ. ಕ್ಷೇತ್ರದ 31 ಗ್ರಾಪಂನಲ್ಲಿ 4500 ಯುವಕರು ಸದಸ್ಯತ್ವ ಹೊಂದಿದ್ದಾರೆ. ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ ಪ್ರತಿ ಸಂಘಕ್ಕೂ ₹10 ಲಕ್ಷವನ್ನು ಸರ್ಕಾರ ಅನುದಾನ ನೀಡಲಿದೆ ಎಂದರು.

ಪ್ರತಿಯೊಬ್ಬ ಯುವಕರಿಗೂ ಸೌಲಭ್ಯ ಸಿಗಬೇಕು. ದೇಶದ ಸಾಮರಸ್ಯ, ಐಕ್ಯತೆ ಕಾಪಾಡಬೇಕೆಂಬ ಉದ್ದೇಶದಿಂದ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮಾಡಿದ್ದರು. ಕಾಂಗ್ರೆಸ್‌ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಬಸವಣ್ಣ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಗಳನ್ನು ಅಳವಡಿಸಿಕೊಂಡಿದ್ದೇವೆ. ಆದ್ದರಿಂದ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು. ಜತೆಗೆ ಗ್ಯಾರಂಟಿ ಯೋಜನೆಗಳಿಂದ ಯಾರೂ ವಂಚಿತರಾಗದಂತೆ ಸಮಿತಿ ರಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.ಈ ವೇಳೆ ಪಿ. ವಿಜಯಕುಮಾರ, ಕೆ.ಎಸ್‌. ಶಾಂತನಗೌಡ, ಪಾಟೀಲ್‌ ಬಸವನಗೌಡ, ಗುರುವಿನ ರಾಜು, ಅರವಳ್ಳಿ ವೀರಣ್ಣ, ಜ್ಯೋತಿ ಮಲ್ಲಣ್ಣ, ಎಸ್‌. ಹಾಲೇಶ, ಎಸ್‌. ದೂದಾನಾಯ್ಕ, ಬೀರಪ್ಪ, ಬಸಮ್ಮ, ಮಂಜುನಾಥ ದೇಸಾಯಿ, ಬಸವರಾಜ, ಈಟಿ ಮಾಲತೇಶ, ಈಟಿ ಕೋಟೆಪ್ಪ, ಹನುಮಂತಪ್ಪ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿತ್ಯವೂ ಸೂರ್ಯೋಪಾಸನೆ ನಡೆಯಲಿ: ಸ್ವರ್ಣವಲ್ಲೀ ಶ್ರೀ
ಸಿದ್ಧಗೊಳ್ಳುತ್ತಿವೆ ತರಹೇವಾರಿ ಗಣೇಶನ ಮೂರ್ತಿಗಳು