ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ದೇವೇಗೌಡನದೊಡ್ಡಿ-ಮೆಣಸಗೆರೆ ಗ್ರಾಮದಲ್ಲಿ ಕಾರಕಹಳ್ಳಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಏರ್ಪಡಿಸಿದ್ದ ತವರಿನ ತಮ್ಮ ಸಾಮಾಜಿಕ ನಾಟಕ ಪ್ರದರ್ಶನದ ವೇಳೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವೀಧರರ ತವರೂರು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ಹಳ್ಳಿಗಳು ಇಂದು ವೃದ್ಧರ ಗ್ರಾಮಗಳಾಗುತ್ತಿವೆ. ತಂದೆ ತಾಯಿಗಳು ಕಷ್ಟಪಟ್ಟು ಮಕ್ಕಳನ್ನು ಓದಿಸಿದ ನಂತರ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಲು ಬೆಂಗಳೂರು- ಮೈಸೂರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಸೇರುತ್ತಿದ್ದಾರೆ. ನಂತರ ತಮ್ಮ ಹುಟ್ಟೂರನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಭಾರತೀ ವಿದ್ಯಾ ಸಂಸ್ಥೆಯ ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್‌ಲೆನ್ಸ್ ವಿದ್ಯಾರ್ಥಿಗಳು ವೈದ್ಯರು ಮತ್ತು ಎಂಜಿನಿಯರ್ ಪದವಿ ಮುಗಿಸಿ ಜನರ ಸೇವೆಗೆ ಮುಮದಾಗಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕೆ ಕಾರಣರಾದ ಸಂಸ್ಥೆ ಶಿಕ್ಷಕ ಮತ್ತು ವಿದ್ಯಾಥಿಗಳ ಪರಿಶ್ರಮಕ್ಕೆ ಅಭಾರಿಯಾಗಿದ್ದೇನೆ ಎಂದರು.
ಭಾರತೀ ಎಜುಕೇಷನ್ ಟ್ರಸ್ಟ್‌ನಿಂದ ನಡೆಯುತ್ತಿರುವ ಭಾರತೀ ವಿದ್ಯಾ ಸಂಸ್ಥೆ ಪ್ರಾರಂಭವಾಗಿ 62 ವರ್ಷಗಳಾಗಿವೆ. ಈ ಭಾಗದ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ಸಂಸ್ಥೆಯಿಂದ ವಿದ್ಯಾಭ್ಯಾಸ ಪಡೆದು ಡಾಕ್ಟರ್, ಎಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆದು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಸಂಸ್ಥೆ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾರ್ಥಿ ಯುವ ಸಮುದಾಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮನ್ನು ಬಹು ಎತ್ತರಕ್ಕೆ ಬೆಳೆಸಿದ ಪೋಷಕರು, ಹುಟ್ಟಿದ ಊರುಗಳನ್ನು ಮರೆಯಬಾರದು. ಸ್ಥಳೀಯವಾಗಿ ಸಾಮಾಜಿಕ ಸೇವೆಗಳೊಂದಿಗೆ ಹಿರಿಯರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದರು.
ಇಂದು ಡಾಕ್ಟರ್‌ಗಳನ್ನು ಜನರ ಆರೋಗ್ಯ ಕಾಪಾಡುವತ್ತ ಕಾಳಜಿ ವಹಿಸಿದ್ದರೆ, ಎಂಜಿನಿಯರ್‌ಗಳು ಉತ್ತಮ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ತಮ್ಮ ಹಳ್ಳಿಗಳ ಅಭಿವೃದ್ಧಿಗೂ ಕೈಜೋಡಿಸಿ ಉತ್ತಮ ಸಮಾಜ ಕಟ್ಟಲು ನೆರವಾಗಬೇಕು ಎಂದರು.ಈ ವೇಳೆ ಶಾಸಕ ಮಧು ಜಿ.ಮಾದೇಗೌಡ ಹಾಗೂ ಕಾಂಗ್ರೆಸ್ ಮುಖಂಡ ಆಶಯ್ ಮಧು ಮತ್ತು ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು. ವೈದ್ಯರಾದ ಡಾ.ಡಿ.ಪಿ.ಸಂತೃಪ್ತ, ಡಾ.ಕೀರ್ತಿರಾಜು, ಡಾ.ಡಿ.ಆರ್.ಕಾವ್ಯ, ಡಾ.ವಿದ್ಯಶ್ರೀ, ಡಾ.ಭೂಮಿಕಾ, ಡಾ.ಡಿ.ಪಿ.ಸಂಕೀರ್ತ್, ಎಂಜಿನಿಯರ್ ಡಿ.ಪಿ.ಮಧುಗೌಡ, ಆರ್.ಮಾನಸ ಅವರನ್ನು ತವರೂರಿನಿಂದ ಹಿರಿಯರು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಈ ವೇಳೆ ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಅಣ್ಣೂರು ಸೊಸೈಟಿ ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ಯುವ ಮುಖಂಡ ಮದ್ದೂರು ಅವಿನಾಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ರಾಜಪ್ಪ, ಸದಸ್ಯರಾದ ಕೆಂಪರಾಜು, ಎಂ.ಕೆ.ಮಹದೇವು, ಮುಖಂಡರಾದ ಬಿ.ಬೋರಯ್ಯ, ಚಿಕ್ಕಮೊಗೇಗೌಡ, ನಾಡಗೌಡರ ಸೋಮು, ವಕೀಲ ಬೊಮ್ಮೇಗೌಡ, ಕಾರ್ ರಾಜೇಗೌಡ, ತಮ್ಮಣ್ಣ, ಕುಳೇಗೌಡ, ಬೋರೇಗೌಡ, ಬಸವರಾಜು, ಸಚಿನ್, ಸ್ವಾಮಿ ಸೇರಿದಂತೆ ಮತ್ತಿತರಿದ್ದರು.