ತಾಲೂಕು ಪತ್ರಿಕಾ ದಿನಾಚರಣೆ । ಪತ್ರಿಕಾ ವಿತರಕರು, ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ವಾತಾವರಣ ಕಲುಷಿತವಾಗುತ್ತಿದೆ, ಮೌಲ್ಯಕ್ಕೆ ಬೆಲೆ ಇಲ್ಲದಾಗಿದೆ. ಇಂತಹ ಕ್ಷಣಗಳಲ್ಲಿ ನೋಂದಾಯಿತ ಪತ್ರಕತ೯ರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪತ್ರಕತ೯ರಾದವರಿಗೆ ಉತ್ತಮ ಜ್ಞಾನ, ವಿದ್ಯಾರ್ಹತೆ ಇರಬೇಕು, ತಮ್ಮ ವರದಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು, ಪತ್ರಿಕೋದ್ಯಮ ವ್ಯಾಪಾರಿಕರಣವಾಗಬಾರದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೖಶ್ಯ ಮಾಧ್ಯಮ ಇಂದಿನ ದಿನಗಳಲ್ಲಿ ವೀಕ್ಷಿಸುವವರ ಮನಸ್ಸನ್ನು ತಲ್ಲಣಗೊಳಿಸುತ್ತಿದೆ. ಮೌಲ್ಯಕ್ಕೆ ಬೆಲೆ ಕುಸಿತವಾಗುವಂತಹ ಸನ್ನಿವೇಶಗಳನ್ನು ಬಿತ್ತರಿಸುತ್ತಿದೆ. ಪತ್ರಕತ೯ರು ಆತುರಕ್ಕೆ ಕಟ್ಟು ಬಿದ್ದು ಊಹಾಪೋಹಗಳ ಸುದ್ದಿ ಪ್ರಕಟಿಸಿದೆ ವಾಸ್ತವಕ್ಕೆ ಹತ್ತಿರವಾದ ವರದಿಗಳನ್ನು ಬಿತ್ತರಿಸಬೇಕು. ವೃತ್ತಿಯನ್ನು ಗೌರವಿಸುವಂತಾಗಬೇಕು, ಎಂದಿಗೂ ಪತ್ರಿಕೋದ್ಯಮ ವ್ಯಾಪಾರಿಕರಣವಾಗಬಾರದು, ಸಮಾಜಕ್ಕೆ ಪತ್ರಕರ್ತರ ಬರೆಯುವ ಸುದ್ದಿಗಳು ಉತ್ತಮ ಸಂದೇಶ ನೀಡುವಂತಿರಬೇಕು ಎಂದರು.ಇತ್ತೀಚೆಗೆ ಪತ್ರಿಕಾಭವನ ಕಾಮಗಾರಿ ಕಳಪೆ ಎಂದು ನಾನೇ ಪತ್ರಕರ್ತರ ಗಮನ ಸೆಳೆದಿದ್ದೆ. ಹಾಗಾಗಿ ಭವನ ಪೂರ್ಣಕ್ಕೆ ನನ್ನ ಕೈಲಾದ ಸಹಾಯ ಮಾಡುವೆ ಎಂದು ಭರವಸೆ ನೀಡಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ, ದೖಶ್ಯ ಮಾಧ್ಯಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಅನೇಕ ಸತ್ಯವಲ್ಲದ ಸುದ್ದಿಗಳಿಗೆ ಕಟ್ಟು ಕಥೆ ಕಟ್ಟಿ ಬಿತ್ತರಿಸುತ್ತಿವೆ, ಸಾಮಾಜಿಕ ಜಾಲತಾಣವಂತೂ ಸುಳ್ಳಿನ ಸಂತೆಯಾಗಿದೆ. ಈ ನಿಟ್ಟಿನಲ್ಲಿ ಪತ್ರಿಕಾರಂಗ ಆತ್ಮವಿಶ್ವಾಸ ಹಾಗೂ ಸತ್ಯಕ್ಕೆ ಹತ್ತಿರದ ವರದಿ ಮಾಡುವ ಮೂಲಕ ಇಂದಿಗೂ ಗಮನ ಸೆಳೆಯುತ್ತಲೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಪತ್ರಕರ್ತರಿಗೆ ಬಡತನ ಎಂಬುದು ಅಂದಿನಿಂದಲೂ ಇದೆ. ಕೊಳ್ಳೇಗಾಲ ತಾಲೂಕಿನಲ್ಲಿ ಸಾಕಷ್ಟು ಪತ್ರಕತ೯ರು ಬಡತನದ ನಡುವೆಯೂ ಕೆಲಸ ನಿವ೯ಹಿಸುತ್ತಿದ್ದಾರೆ. ಕೊಳ್ಳೇಗಾಲ ಹಲವು ಪತ್ರಕರ್ತರು ಮೌಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೖತ್ತರಾಗಿದ್ದಾರೆ ಎಂದು ಹೇಳಿದರು.ಇದೇ ವೇಳೆ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ರಫಿ ಉಲ್ಲಾಖಾನ್, ಸತೀಶ್, ಮಲ್ಲಿಕಾಜು೯ನ, ಮಹದೇವ, ನಟೇಶಬಾಬು ಹಾಗೂ ದತ್ತಿ ಪ್ರಶಸ್ತಿ ಪುರಸ್ಕೖತ ರಾಜೇಶ್, ರಾಜಶೇಖರ್ ಅವರನ್ನು ಗೌರವಿಸಲಾಯಿತು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಉಪ ವಿಭಾಗಾಧಿಕಾರಿ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ, ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಕಾಯ೯ಕಾರಿ ಸಮಿತಿಯ ಗೂಳಿಪುರ ನಂದೀಶ್, ಮಾಜಿ ಅಧ್ಯಕ್ಷ ಚಿಕ್ಕಮಾಳಿಗೆ, ತಾಲೂಕು ಉಪಾಧ್ಯಕ್ಷ ಮರಿಸ್ವಾಮಿ ಕಾರ್ಯದರ್ಶಿ ಮಹೇಶ್, ಖಜಾಂಚಿ ಪವನ್ ಕುಮಾರ್, ಎ.ಎಚ್.ಗೋವಿಂದ, ಡಿ.ನಟರಾಜು, ನಿಂಪು ಸುರೇಶ್, ಬೀಮನಗರ ಎನ್.ನಟರಾಜು, ಪ್ರೇಮ್ ಸಾಗರ್, ರಾಜು, ಕೋಟಂಬಳ್ಳಿ ಗುರುಸ್ವಾಮಿ, ಜಗದೀಶ್, ಸಂಗಂ ಗಿರೀಶ್, ಅವಿನ್ ಪ್ರಕಾಶ್, ಅಣಗಳ್ಳಿ ಮಹೇಶ್, ನಿಂಗರಾಜು, ಮಾಂಬಳ್ಳಿ ಲೋಕೇಶ್, ಸಾಗರ್, ಬಸಂತ್, ವಸಂತಕುಮಾರ್, ವಕೀಲ ಗೌಡಳ್ಳಿ ಮಹೇಶ್, ಮುಖಂಡರುಗಳಾದ ನಟರಾಜಮಾಳಿಗೆ, ಹೊಂಗನೂರು ಚೇತನ್, ರೈತ ಮುಖಂಡ ಶೈಲೇಂದ್ರ, ಗೌಡೇಗೌಡ, ಆಲಹಳ್ಳಿ ತೋಟೇಶ್, ವಿ.ನಾಗಚಾರಿ, ಡಿ.ವೆಂಕಟಾಚಲ ಇತರರು ಇದ್ದರು.ಅರ್ಹರಿಗೆ ಪ್ರಶಸ್ತಿ ದೊರೆಯಬೇಕು
ದೖಶ್ಯ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮ ಎಷ್ಟು ಮೇಲು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗುತ್ತಿದೆ. ಯಾವುದು ಸುಳ್ಳು, ಯಾವುದು ಸತ್ಯ ಎಂಬುದು ತಿಳಿಯದೆ, ದೖಶ್ಯ ಮಾದ್ಯಮ ತಮಗೆ ತೋಚಿದಂತೆ ವರದಿ ಪ್ರಕಟಿಸಲಾಗುತ್ತಿದ್ದು ಸಂಬಂಧಗಳನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜನಪ್ರತಿನಿಧಿಗಳ ತಪ್ಪನ್ನು ಎಚ್ಚರಿಸುವ ಕೆಲಸ ಪತ್ರಿಕೆಗಳಿಂದ ಆಗಲಿ, ಪತ್ರಕತ೯ರು ಕಷ್ಟದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ಸಕಾ೯ರ ಇಂತಹ ಪತ್ರಕತ೯ರನ್ನು ಗುರುತಿಸುವಂತಾಗಬೇಕು, ಮಾಧ್ಯಮ ಅಕಾಡೆಮಿಗೆ ಜಿಲ್ಲಾ ಪತ್ರಕರ್ತರೊಬ್ಬರನ್ನು ನೇಮಿಸಿ ಅರ್ಹ ಪತ್ರಕರ್ತರಿಗೆ ಮಾಧ್ಯಮ ಅಕಾಡಮಿ ಪ್ರಶಸ್ತಿ ದೊರಕುವಂತಾಗಬೇಕು ಎಂದು ಕೊಳ್ಳೇಗಾಲ ಶಾಸಕ ಎ ಆರ್ ಕೖಷ್ಣಮೂರ್ತಿ ಹೇಳಿದರು.