ಕನ್ನಡಪ್ರಭವಾರ್ತೆ, ತುರುವೇಕೆರೆ
ಪಟ್ಟಣದ ಶಿವಯೋಗೀಶ್ವರ ಸಮುದಾಯ ಭವನದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಎನ್.ಡಿ.ಎ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಇಲ್ಲಿಯವರೆಗೂ ಎನ್ಡಿಎ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಈ ಬಾರಿ ಸಹ ಎನ್ಡಿಎ ಬೆಂಬಲಿತ ಅಭ್ಯರ್ಥಿ ಕೆ.ಎಂ.ಸುರೇಶ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು.
ರಾಜ್ಯದಲ್ಲಿ ಎಚ್.ಡಿ. ದೇವೇಗೌಡರ ಬೆಂಬಲ ಸಿಕ್ಕಿರುವುದು ನೂರಾನೆ ಬೆಂಬಲ ಬಂದಂತೆ ಆಗಿದೆ. ಜಿಲ್ಲೆಯಲ್ಲಿ ಸುಮಾರು 60 ಸಾವಿರ ಮತದಾರರು ಇದ್ದಾರೆ. ಅವರಲ್ಲಿ ಬಹುತೇಕರು ಎನ್ಡಿಎ ಬೆಂಬಲಿತರೇ ಆಗಿದ್ದಾರೆ. ಎಲ್ಲರಿಗೂ ನರೇಂದ್ರ ಮೋದಿರ ಆಡಳಿತ ವೈಖರಿ ಗೊತ್ತಿದೆ. ದೇಶದ ಹಿತದೃಷ್ಟಿಯಿಂದ ಎನ್ಡಿಎ ಬಲಗೊಳ್ಳಲೇ ಬೇಕು. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ಅತಿಯಾಗಿದೆ. ಅದನ್ನು ಹಿಮ್ಮೆಟಿಸಲು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ನಾಲ್ಕು ವಿಧಾನಪರಿಷತ್ ಕ್ಷೇತ್ರ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲ್ಲಲೇಬೇಕೆಂದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತಾಲೂಕಿನಲ್ಲಿ 2700 ಮತಗಳಿವೆ. ಒಟ್ಟು ಐದು ಬೂತ್ ಗಳನ್ನು ಮಾಡಲಾಗಿದೆ. ಪ್ರತಿ ಬೂತ್ ನಲ್ಲೂ ಎನ್.ಡಿ.ಎ.ಕಾರ್ಯಕರ್ತರು ಶ್ರಮವಹಿಸಿ ಹೆಚ್ಚು ಮತಗಳನ್ನು ಹಾಕಿಸಬೇಕು ಎಂದು ತಿಳಿಸಿದರು.
ಅಭ್ಯರ್ಥಿ ಕೆ.ಎಂ.ಸುರೇಶ್ ಗೈರಾಗಿದ್ದುದು ಕಂಡು ಬಂತು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭೆಯಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ, ಶಂಕರೇಗೌಡ, ಕುಮಾರಸ್ವಾಮಿ, ಕಡೇಹಳ್ಳಿಸಿದ್ದೇಗೌಡ, ಭೈರೇಗೌಡ, ಬೆಟ್ಟಸ್ವಾಮಿಗೌಡ, ಸಾಗರನಹಳ್ಳಿ ವಿಜಯಕುಮಾರ್, ರುದ್ರೇಶ್, ತ್ಯಾಗರಾಜು, ವಿಜಯೇಂದ್ರ, ಪಿ.ಎಚ್.ಧನಪಾಲ್, ಮುದ್ದೇಗೌಡ, ಲೀಲಾವತಿ ಗಿಡ್ಡಯ್ಯ, ರಂಗೇಗೌಡ, ಎ.ಬಿ.ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಿದನಂದ್ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು.