ಬೈಟು ಕಾಫಿ ಹೇಳಿ ಗಂಟೆಗಟ್ಟಲೆ ಹರಟುವವರಿಗೆ ಇನ್ನು ಬೀಳುತ್ತೇ ದಂಡ!

KannadaprabhaNewsNetwork |  
Published : Feb 11, 2026, 04:00 AM ISTUpdated : Feb 11, 2026, 09:37 AM IST
 hotel

ಸಾರಾಂಶ

ಹೋಟೆಲ್‌ಗಳಲ್ಲಿ ಬೈಟು ಟೀ-ಕಾಫಿ ಕುಡಿದು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕೂರುತ್ತೀರಾ? ಇಂಥವರಿಂದ ದಂಡ ವಸೂಲಿಗೆ ಇದೀಗ ಹೋಟೆಲ್‌ ಮಾಲೀಕರು ಚಿಂತಿಸುತ್ತಿದ್ದಾರೆ! ₹ 25 ಕೊಟ್ಟು ಕಾಫಿ ಕುಡಿದು ರಿಯಲ್‌ ಎಸ್ಟೇಟ್‌ ವ್ಯವಹಾರ, ಕಚೇರಿ ಹರಟೆ, ಮದುವೆ ಮಾತುಕತೆ ಚರ್ಚೆ ಮಾಡುತ್ತಾ ಕುಳಿತರೆ  ಹತ್ತರಷ್ಟು ದಂಡ

 ಬೆಂಗಳೂರು :  ಹೋಟೆಲ್‌ಗಳಲ್ಲಿ ನೀವು ಬೈಟು ಟೀ-ಕಾಫಿ ಕುಡಿದು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕೂರುತ್ತೀರಾ? ಇಂಥವರಿಂದ ದಂಡ ವಸೂಲಿಗೆ ಇದೀಗ ಹೋಟೆಲ್‌ ಮಾಲೀಕರು ಚಿಂತಿಸುತ್ತಿದ್ದಾರೆ!

ಹತ್ತರಷ್ಟು ದಂಡ ವಸೂಲಿ

₹ 25 ಕೊಟ್ಟು ಕಾಫಿ ಕುಡಿದು ರಿಯಲ್‌ ಎಸ್ಟೇಟ್‌ ವ್ಯವಹಾರ, ಕಚೇರಿ ಹರಟೆ, ಮದುವೆ ಮಾತುಕತೆ, ರಾಜಕೀಯ ಗಹನ ಚರ್ಚೆ ಮಾಡುತ್ತಾ ಕುಳಿತರೆ ಅದರ ಹತ್ತರಷ್ಟು ದಂಡ ವಸೂಲಿ ಮಾಡುವ ಎಚ್ಚರಿಕೆಯನ್ನು ಮಾಲೀಕರ ಸಂಘ ನೀಡಿದೆ.ಇಂತಹ ಗ್ರಾಹಕರಿಂದ ಹೋಟೆಲ್ ಮಾಲೀಕರಿಗೆ ದೊಡ್ಡ ತಲೆನೋವಾಗುತ್ತಿದೆ. ನಿಜವಾದ ಗ್ರಾಹಕರಿಗೆ ಆಸನ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದ್ದು, ವ್ಯಾಪಾರಕ್ಕೂ ಹೊಡೆತ ಬೀರುತ್ತಿದೆ ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 ಪಾರ್ಕಿಂಗ್ ಚಾರ್ಜ್‌ನಂತೆ ಟೇಬಲ್ ಬಳಕೆಗೂ ಶುಲ್ಕ

ಈ ಹಿನ್ನೆಲೆಯಲ್ಲಿ, ಪಾರ್ಕಿಂಗ್ ಚಾರ್ಜ್‌ನಂತೆ ಟೇಬಲ್ ಬಳಕೆಗೂ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಒಂದು ನಿರ್ದಿಷ್ಟ ಸಮಯದವರೆಗೆ ಮಾತ್ರ ಉಚಿತವಾಗಿ ಕುಳಿತುಕೊಳ್ಳಲು ಅವಕಾಶ ನೀಡಬೇಕು, ಅದಕ್ಕಿಂತ ಹೆಚ್ಚು ಸಮಯ ಹೋಟೆಲ್‌ನಲ್ಲಿ ಕಾಲಹರಣ ಮಾಡಿದರೆ ದಂಡ ಅಥವಾ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರಕ್ಕೆ ಬರಲಾಗುತ್ತಿದೆ.ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್, ‘ಹೋಟೆಲ್‌ಗಳಲ್ಲಿ ಒಂದು ಟೀ ಕುಡಿದು ಗಂಟೆಗಟ್ಟಲೆ ಕುಳಿತು ಸಭೆಗಳು ನಡೆಸುತ್ತಾರೆ. ಇದರಿಂದ ಇತರ ಗ್ರಾಹಕರಿಗೆ ತೊಂದರೆ ಆಗುವುದಲ್ಲದೆ, ನಮ್ಮ ವ್ಯಾಪಾರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಅಗತ್ಯವಿದ್ದರೆ 500 ರಿಂದ 1,000 ರು.ವರೆಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ. ಈ ನಿರ್ಧಾರವನ್ನು ಅಧಿಕೃತವಾಗಿ ಜಾರಿಗೆ ತರಲು ಸರ್ಕಾರಕ್ಕೆ ಶೀಘ್ರದಲ್ಲೇ ಪತ್ರ ಬರೆದು ಅನುಮತಿ ಪಡೆಯಲು ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ. ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರು ನಡೆಸುತ್ತಿರುವ ಈ ಯೋಚನೆ ಗ್ರಾಹಕರ ಅಸಮಾಧಾನಕ್ಕೂ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಂಚಮಸಾಲಿ ಬೇಡಿಕೆಗಳಿಗೆ ಸ್ಪಂದಿಸಲು ಸಿದ್ಧ: ಸಿಎಂ
ಮಾನವನ ಬುದ್ಧಿವಂತಿಕೆ ಸರಿಗಟ್ಟಲು ಎ.ಐ.ಗೆ ಸಾಧ್ಯವಿಲ್ಲ: ಶ್ರೀ