ಪರೋಪಕಾರ ಮರೆತವರು ದೇಶದ್ರೋಹಿಗಳು

KannadaprabhaNewsNetwork |  
Published : Sep 30, 2025, 12:00 AM IST
೨೮ಕೆಎಲ್‌ಆರ್-೧ಕೋಲಾರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾ ಕನಕ ನೌಕರರ ಸಂಘದಿಂದ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಖಾ ಮಠದ ಕಾಗಿನೆಲೆ ಗುರುಪೀಠಧ್ಯಾಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮಿಜೀ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಇಂದಿನ ಅಧುನಿಕತೆಯಲ್ಲಿ ತಂತ್ರಜ್ಞಾನ ಅವಶ್ಯಕತೆಗೆ ಮಾತ್ರ ಬಳಸಿಕೊಳ್ಳಬೇಕು ದುರ್ಬಬಳಕೆ ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡಿ ಪರೋಪಕಾರ ಮರೆತು ಜೀವಿಸುವ ಸ್ವಾರ್ಥಿಗಳು ಸಮಾಜದ ಪರಮ ದ್ರೋಹಿಗಳು. ಸಮೀಕ್ಷೆಯಲ್ಲಿ ಕುರುಬ ಜಾತಿ ಹೊರತಾಗಿ ಉಪಜಾತಿಗಳನ್ನು ಬರೆಸಬಾರದು. ಈ ಹಿಂದಿನಿಂದ ಇರುವಂತ ಕಾಡುಕುರುಬರು ಮಾತ್ರ ಬರೆಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗಳನ್ನು ಗೌರವಿಸಿ ಅವರು ನೀಡಿದ ಭಿಕ್ಷೆಯಿಂದ ನಾವಿಂದು ಈ ಪ್ರಪಂಚ ಕಾಣಲು ಸ್ಥಾನಮಾನ ಪಡೆಯಲು ಸಾಧ್ಯ ಎಂಬುವುದು ಮರೆಯಬಾರದು, ಪೋಷಕರಿಗೆ ಕಣ್ಣಿರು ತರಿಸುವುದು ಮಹಾ ಪಾಪ ಅವರಿಗೆ ಎಂದಿಗೂ ಮೋಕ್ಷ ಸಿಗದು ಎಂದು ಹೊಸದುರ್ಗ ಜಿಲ್ಲೆಯ ಶಾಖಾ ಮಠದ ಕಾಗಿನೆಲೆ ಗುರುಪೀಠಧ್ಯಾಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು. ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾ ಕನಕ ನೌಕರರ ಸಂಘದಿಂದ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಾಚನ ನುಡಿಗಳಾಡಿದರು.ತಂತ್ರಜ್ಞಾನ ಬಳಸಿಕೊಳ್ಳಿ

ಇಂದಿನ ಅಧುನಿಕತೆಯಲ್ಲಿ ತಂತ್ರಜ್ಞಾನ ಅವಶ್ಯಕತೆಗೆ ಮಾತ್ರ ಬಳಸಿಕೊಳ್ಳಬೇಕು ದುರ್ಬಬಳಕೆ ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡಿ ಪರೋಪಕಾರ ಮರೆತು ಜೀವಿಸುವ ಸ್ವಾರ್ಥಿಗಳು ಸಮಾಜದ ಪರಮ ದ್ರೋಹಿಗಳು. ಸಮೀಕ್ಷೆಯಲ್ಲಿ ಕುರುಬ ಜಾತಿ ಹೊರತಾಗಿ ಉಪಜಾತಿಗಳನ್ನು ಬರೆಸಬಾರದು. ಈ ಹಿಂದಿನಿಂದ ಇರುವಂತ ಕಾಡುಕುರುಬರು ಮಾತ್ರ ಬರೆಸಿಕೊಳ್ಳಬಹುದು ಎಂದು ಹೇಳಿದರು.

ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಕನಕ ಸಮುದಾಯ ಭವನ ನಿರ್ಮಾಣವಾಗಬೇಕು. ಈ ಕುರಿತು ಸಿಎಂಗಳಿಗೆ ಸಮೀಪ ನಮ್ಮ ಸಮುದಾಯದವರೇ ಬೈರತಿ ಸುರೇಶ್ ಹಾಗೂ ಕೆ.ವಿ.ಪ್ರಭಾಕರ್ ಇದ್ದಾರೆ ಅವರಿಂದ ಈ ಕಾರ್ಯ ಪೂರ್ಣಗೊಳಿಸುವಂತಾಗಬೇಕು, ಸಮುದಾಯದ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಉಳ್ಳವರು ಪ್ರೋತ್ಸಾಹಿಸಬೇಕು ಎಂದರು.

ಸಂಬಂಧಗಳು ಕುಂಟಿತ:

ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಬಿ.ಕೆ.ರವಿ ಮಾತನಾಡಿ, ಇಂದು ಮನುಷ್ಯನ ಪರಸ್ಪರ ಭಾಂದವ್ಯಗಳನ್ನು ತಂತ್ರಜ್ಞಾನದ ಪರಿಕರಗಳಿಂದ ನಾಶವಾಗುತ್ತಿದೆ. ಭಾವನಾತ್ಮಕ ಸಂಬಂಧಗಳು ಕುಂಠಿತವಾಗಲು ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಮಾಜದ ರಾಯಭಾರಿಗಳಾಗಿ

ಸಿಎಂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂವಾರಿಗಳು ನಮ್ಮ ಸಮಾಜದ ಸಂಪತ್ತು. ಪ್ರತಿಭೆ ಎಂಬುವುದು ಯಾರೊಬ್ಬರ ಸ್ವತ್ತಲ್ಲ. ನೀವುಗಳೆಲ್ಲ ನಮ್ಮ ಸಮಾಜದ ರಾಯಬಾರಿಗಳಾಗಬೇಕು. ನಾಲ್ಕು ಗೋಡೆ ಮಧ್ಯೆ ಮೊಬೈಲ್‌ನಲ್ಲಿ ಮುಳುಗುವುದು ಬಿಡಿ ನೈತಿಕತೆಯ ಮೌಲ್ಯಗಳನ್ನು ಅರಿತು ಮುಂದುವರೆಯಿರಿ ಎಂದರು.

ಇದೇ ಸಂದರ್ಭಧಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ರ್‍ಯಾಂಕ್ ಪಡೆದ ನಾರಾಯಣಸ್ವಾಮಿ, ಪಿಯುಸಿಯಲ್ಲಿ ಮೇಘನಾ ಹಾಗೂ ಬಿ.ಪಿ.ಎಡ್‌ನಲ್ಲಿ ಶುಭ ಸೇರಿದಂತೆ ಎಸ್.ಎಸ್.ಎಲ್ ಸಿ ಹಾಗೂ ಪಿ.ಯು.ಸಿ.ಯಲ್ಲಿ ೮೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ, ಮಾಲೂರು ಅಂಜನಿ ಸೋಮಣ್ಣ, ಬಿ.ಎಂ.ನಾರಾಯಣಸ್ವಾಮಿ ಸ್ವಾಗತಿಸಿದರು, ಕನಕ ನೌಕರರ ಸಂಘದ ಅಧ್ಯಕ್ಷ ಡಿ.ಆರ್.ರಾಮೇಗೌಡ, ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಮತ್ತಿತರರು ಇದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ