ವಿಜೃಂಭಣೆ ಜರುಗಿದ ಬನ್ನೂರು ಶ್ರೀ ಹೇಮಾದ್ರಾಂಬಾ ದೇವಿ ದಿವ್ಯ ಮಹಾ ರಥೋತ್ಸವ

KannadaprabhaNewsNetwork |  
Published : Feb 18, 2025, 12:33 AM IST
51 | Kannada Prabha

ಸಾರಾಂಶ

ನೂತನ ದಂಪತಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ರಥೋತ್ಸವಕ್ಕೆ ಹಣ್ಣುಜವನ ಎಸೆದು ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು

ಕನ್ನಡಪ್ರಭ ವಾರ್ತೆ ಮೈಸೂರುವಹ್ನೀಪುರವೆಂದು ಪುರಾಣ ಪ್ರಸಿದ್ಧ ಬನ್ನೂರು ಶ್ರೀ ಹೇಮಾದ್ರಾಂಬಾ ದೇವಿ ದಿವ್ಯ ಮಹಾ ರಥೋತ್ಸವವು ಹೆಬ್ಬಾರೆ, ಡೋಲು-ವಾದ್ಯದೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವವು ದೇಗುಲದ ಮುಂಭಾಗದಿಂದ ಹೆಬ್ಬಾರೆ, ತಮಟೆ ನಾದದೊಂದಿಗೆ ಆರಂಭಗೊಂಡು ಗ್ರಾಮದ ತೇರಿನ ಬೀದಿಯ ಮೂಲಕ ಸಾಗಿ ದೊಡ್ಡ ಅಂಗಡಿ ಬೀದಿಯ ಮಾರ್ಗವಾಗಿ ಸಂಚರಿಸಿತು. ರಥೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಭಾವದಿಂದ ದೇವರಿಗೆ ಜೈಕಾರ ಹಾಕುತ್ತಾ ಹೇಮಾದ್ರಾಂಬಾ ಚೌಕ ಟವಲ್ ಕೂಗುತ್ತಾ ರಥ ಎಳೆದರು. ನೂತನ ದಂಪತಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ರಥೋತ್ಸವಕ್ಕೆ ಹಣ್ಣುಜವನ ಎಸೆದು ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ರಥೋತ್ಸವಕ್ಕೆ ಬೆಳಗ್ಗೆ ಮಾಘ ಬಹುಳ ಚ್ಪತುರ್ಥಿ ಹಸ್ತ ನಕ್ಷತ್ರದ 10.10ರಿಂದ 10.30ರೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಮತ್ತು ಆಗಮಿಕರು ದಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಬೆಳಗ್ಗೆ ರಥದ ಮೇಲೆ ಶ್ರೀ ಹೇಮಾದ್ರಾಂಬಾ ದೇವಿಯನ್ನು ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳು ರಥವನ್ನು ದೇವಾಲಯದಿಂದ ತೇರಿನ ಬೀದಿಯ ಮೂಲಕ ದೊಡ್ಡ ಅಂಗಡಿ ಬೀದಿಯ ಮಾರ್ಗವಾಗಿ ಸಾಗಿ ಸ್ವಸ್ಥಾನಕ್ಕೆ ರಥವನ್ನು ಎಳೆದು ತಲುಪಿಸಿದರು. ಭಕ್ತರ ಗಮನ ಸೆಳೆದ ವೀರಗಾಸೆ, ಪೂಜಾ ಕುಣಿತವು ಭಕ್ತರ ಗಮನ ಸೆಳೆದವು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.

ಪ್ರಸಾದ, ಮಜ್ಜಿಗೆ-ಪಾನಕ ವಿತರಣೆ, ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಭಕ್ತರು, ಯುವಕರ ಗೆಳೆಯರ ಬಳಗದ ಭಕ್ತರು ಪ್ರಸಾದ, ಮಜ್ಜಿಗೆ-ಪಾನಕವನ್ನು ವಿತರಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!