ಜೆಡಿಎಸ್ ಎಲ್ಲಿದೆ ಎಂಬ ಟೀಕೆಗೆ ಸೇರಿರುವ ಸಾವಿರಾರು ಜನರೇ ಸಾಕ್ಷಿ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Apr 20, 2026, 01:30 AM IST
 ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಜನರತ್ತ ಜನತಾದಳ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಮುಖಂಡರ ರೋಡ್ ಶೋ ನಡೆಯಿತು.  | Kannada Prabha

ಸಾರಾಂಶ

ಕಡೂರುಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರುಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಭಾನುವಾರ ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಮತ್ತು ಸದಸ್ಯತ್ವ ಅಭಿಯಾನ ಉಧ್ಘಾಟಿಸಿ ಮಾತನಾಡಿ ಇಂದಿನ ಕಾರ್ಯಕ್ರಮಕ್ಕೆ ಕಡೂರು ಕ್ಷೇತ್ರದ ಜನರನ್ನು ಅಪಾರ ಸಂಖ್ಯೆಯಲ್ಲಿ ಸೇರಿಸಿ ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿರುವ ವೈಎಸ್ .ವಿ ದತ್ತಣ್ಣ ಮತ್ತು ಚೇತನ್ ಕೆಂಪರಾಜ್ ಹಾಗೂ ಕಾರ್ಯಕರ್ತರಿಗೆ ಪ್ರಣಾಮ ಸಲ್ಲಿಸುತ್ತೇನೆ. ಚಿಕ್ಕಮಗಳೂರು,ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು ಗೆಲ್ಲಲು ಸದಾ ನಿಮ್ಮ ಜೊತೆ ಇರುತ್ತೇನೆ. ಜೆಡಿಎಸ್ ಪಕ್ಷವು ರಾಜ್ಯದ 7.50 ಕೋಟಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು. ಈ ಬಾರಿ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗೆ ಟಿಕೇಟ್ ನೀಡಲಿದೆ ಎಂದರು.ಕಷ್ಟ ಕಾಲದಲ್ಲಿ ದತ್ತಣ್ಣ ಕಡೂರು ಕ್ಷೇತ್ರದಲ್ಲಿ ಬಾವುಟ ಕಟ್ಟಿ ಪಕ್ಷ ಸಂಘಟಿಸಿ ಶಾಸಕರಾದರು. ಸೋತಾಗಲು ಪಕ್ಷ ದತ್ತರವನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ದೇವೇಗೌಡರು ಈ ಭಾಗದಲ್ಲಿ ಸಂಸದರಾದ ಅವಧಿಯಲ್ಲಿ ₹1400 ಕೋಟಿ ತರುವ ಮೂಲಕ ನೀರಾವರಿಗೆ ಆದ್ಯತೆ ನೀಡಿದ್ದಾರೆ. ಪಕ್ಷದ ಸದಸ್ಯತ್ವ ಮಾಡಲು ಮುಖಂಡರು ಮುಂದಾಗಬೇಕು ಎಂದರು. ಮಾಜಿ ಶಾಸಕ ವೈ, ಎಸ್ ವಿ.ದತ್ತ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಯುವಕರ ಆಕರ್ಷಣೆ ಮತ್ತು ಸಂಘಟನೆ ಕೂಡ ಬಲವಾಗಿದೆ. ಯುವಕ ಚೇತನ್ ಕೆಂಪರಾಜು ದೂರಿದಂತೆ ಕಾಂಗ್ರೆಸ್ ಪಕ್ಷದಿಂದ ಕಿರುಕುಳ ಹೆಚ್ಚಾಗಿದೆ. 2005ರಲ್ಲಿ ಬಾವುಟ ಕಟ್ಟಲು ಹೆದರುತ್ತಿದ್ದ ಸಮಯದಲ್ಲಿ ನಾನು ಪಕ್ಷದ ಬಾವುಟ ಕಟ್ಟಿ 1200 ಕಿಮೀ. ಪಾದಯಾತ್ರೆ ಮಾಡಿ ಜನರ ಹೋರಾಟದ ಧ್ವನಿಯಾಗಿ ಹಿಂದುಳಿದ ಎಲ್ಲ ಸಮಾಜಗಳ ಬೆಂಬಲದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈದೀಗ ಕಡೂರು ಕ್ಷೇತ್ರದಲ್ಲಿ ನನಗೆ ಶಕ್ತಿಯಾಗಿ ನಿಖಿಲ್ ಬಂದಿರುವುದು ನಮಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಜೊತೆ ಇರುತ್ತೇನೆ ಎಂದರು.19ಕೆಕೆಡಿಯು 1. ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಜನರತ್ತ ಜನತಾದಳ ಸಮಾವೇಶವನ್ನು ರಾಜ್ಯ ಯುವ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಉಧ್ಘಾಟಿಸಿದರು.

19ಕೆಕೆಡಿಯು 1ಎ. ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಜನರತ್ತ ಜನತಾದಳ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಮುಖಂಡರ ರೋಡ್ ಶೋ ನಡೆಯಿತು.

19ಕೆಕೆಡಿಯು1ಬಿ. ಸಮಾವೇಶದಲ್ಲಿ ಭಾಗವಹಿಸಿದ್ದ ಜನರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಗಿ ಖರೀದಿ ಕೇಂದ್ರಕ್ಕೆ ಹೊರ ಜಿಲ್ಲೆಯ ರಾಗಿ
ಬಹುಮತವಿದ್ದರೂ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿಗರೇ ಅಡ್ಡಗಾಲು