ಕನ್ನಡಪ್ರಭ ವಾರ್ತೆ ಹುನಗುಂದ
ರಾಯಚೂರು ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ನಿವಾಸಿ ಹುಲಗಪ್ಪ ಹಣಮಂತ ಮೋಡಕೇರ, ದೇವದುರ್ಗ ತಾಲೂಕಿನ ಮಾಳಗಡ್ಡಿ ನಿವಾಸಿ ಹಣಮಂತ ರಾಮಣ್ಣ ಮೋಡಕೇರ, ದೇವದುರ್ಗ ತಾಲೂಕಿನ ಸಲಿಕಾಪುರ ಆಂಜನೇಯ ಹಣಮಂತರಾಯ ಗಾಲಿ ಬಂಧಿತರು.
ಎರಡು ವರ್ಷಗಳಿಂದ ಜಿಲ್ಲೆಯ ಮತ್ತು ನಗರದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಕಳವು ಕುರಿತು ಪ್ರಕರಣ ದಾಖಲಾಗಿದ್ದವು. ಹುನಗುಂದ ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಹುನಗುಂದ ಸಿಪಿಐ ಎಸ್.ಬಿ. ಆಜೂರ, ಪಿಎಸ್ ಐ ಎಸ್.ಜಿ. ಆಲದಕಟ್ಟಿ ,ಕೈಂ ಪಿಎಸ್ಐ ಎನ್.ಎಸ್. ಸಿಮಾನಿ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ 7 ಬಜಾಜ್ ಪಲ್ಸರ್ ,12 ಹೊಂಡಾ ಶೈನ್ , 5 ಹೊಂಡಾ ಯೂನಿಕಾರ್ನ್, ಎರಡು ಹಿರೋ ಪ್ಯಾಶನ್ ಪ್ರೋ ದ್ವಿಚಕ್ರವಾಹನ, ಹಿರೋ ಸ್ಪ್ಲೆಂಡರ್ ಸೇರಿ 37 ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ರಾಯಚೂರು ಜಿಲ್ಲೆಯ ದೇವದುರ್ಗ ಮೂಲದ ಮೂವರು ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದರು.ಸಿಬ್ಬಂದಿಗಳಾದ ಎ.ಎಸ್.ಐ ಎಸ್.ಬಿ. ಅಮಲಿಹಾಳ ಐ.ಎಸ್. ಮಂಟ್ಯಾಳ,ಕೆ.ವೈ, ವಾಲೀಕರ, ಪೇದೆಗಳಾದ ಎಂ.ಎಸ್. ನಾಗರಾಳ, ಸಿದ್ದಪ್ಪ ಕೌವಲಗಿ, ಬಿ.ಎನ್. ಗೌಡರ, ಎ.ಬಿ. ಯರದಾಳ, ಯಲ್ಲಪ್ಪ ಅಂಬಿಗೇರ, ಗಣೇಶ ಪವಾರ, ಆನಂದ ಗೋಲಪ್ಪನವರ, ಚಂದ್ರು ಜಟ್ಟೆಪ್ಪಗೋಳ, ಬಸವರಾಜ ಜಗಲಿ, ನಾಗರಾಜ ಕುಂದರಗಿ ತಂಡದಲ್ಲಿದ್ದರು. ಎಸ್ಪಿ ಸಿದ್ದಾರ್ಥ ಎಚ್ಚುಗೆ ವ್ಯಕ್ತಪಡಿಸಿದ್ದಾರೆ.