ಚಿಕ್ಕಜಾಜೂರು ಪೊಲೀಸರಿಂದ ಮೂವರು ವಂಚಕರ ಬಂಧನ

KannadaprabhaNewsNetwork |  
Published : Jul 18, 2024, 01:39 AM IST

ಸಾರಾಂಶ

three cheeters arrested in chitraduga

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಹೇಳಿದ್ದ ವಂಚಕರ ಜಾಲ ಬೇಧಿಸಿದ ಚಿಕ್ಕಜಾಜೂರು ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ಹೈದ್ರಾಬಾದ್ ನ ಜಗದೀಶ್ ಮತ್ತಿಬ್ಬರಿಗೆ ವಂಚಿಸಿದ್ದರು. 25 ಲಕ್ಷ ರುಪಾಯಿಗೆ ಕೆಜಿ ಚಿನ್ನ ಕೊಡುವುದಾಗಿ ಹೇಳಿದ್ದರು. ಅದರಂತೆ ಹೊಳಲ್ಕೆರೆ ತಾಲೂಕಿನ ಸಾಸಲು ಹಳ್ಳದ ಬಳಿ 54 ಲಕ್ಷ ರುಪಾಯಿ ಹಣ ಪಡೆದು ಎಸ್ಕೇಪ್ ಆಗಿದ್ದರು. ಈ ಸಂಬಂಧ ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೇಧಿಸಲು ಪಿಎಸ್ಐ ಎಂ.ಟಿ ದೀಪು ಹಾಗೂ ಸಚಿನ್ ಪಟೇಲ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ 3 ಆರೋಪಿಗಳ ಬಂಧಿಸಿ ಅವರಿಂದ 47.18 ಲಕ್ಷ ರು. ವಶಪಡಿಸಿಕೊಂಡಿದ್ದಾರೆ. ಚನ್ನಗಿರಿ ಮೂಲದ ಪರಶುರಾಂ, ರುದ್ರಪ್ಪ, ಧರ್ಮಪ್ಪ ಬಂಧಿತರು.

-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!