ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟನದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ-2025ರ ನಿಮಿತ್ತ ಮೇ 21ರಿಂದ 23ರವರೆಗೆ ಅಖಿಲ ಭಾರತ ಎ ಗ್ರೇಡ್ ಪುರುಷ ಮತ್ತು ಮಹಿಳೆಯರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ ತಿಳಿಸಿದರು.ಬೀಳಗಿ ಪಟ್ಟಣ ಬ್ಯಾಂಕಿನ ರಜತ ಮಹೋತ್ಸವ ನಿಮಿತ್ತ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಬಾಗಲಕೋಟೆ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ
ಆಯೋಜಿಸಿರುವ ಪುರುಷ ಮತ್ತು ಮಹಿಳಾ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯ ಕಬಡ್ಡಿ ಮೈದಾನ ಮತ್ತು ವೀಕ್ಷಕರ ಗ್ಯಾಲರಿ ಪರಿಶೀಲಿಸಿ ಅವರು ಮಾತನಾಡಿದರು.ಬ್ಯಾಂಕಿನ ರಜತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಕಬಡ್ಡಿ ಪಂದ್ಯಾವಳಿಗಳನ್ನು ನಡೆಸುವ ಸಂಘಟನೆ ಮತ್ತು ತಾಂತ್ರಿಕ ಸಮಿತಿಯಲ್ಲಿ ಕೆ.ಆರ್.ಎ.ಕೆ.ಎ. ಅಧ್ಯಕ್ಷ ರಾಕೇಶ್ ಮಲ್ಲಿ, ಮಾಜಿ ಅಧ್ಯಕ್ಷ ಹನುಮಂತೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎ.ಮುನಿರಾಜು, ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಗೂ ಬೆಂಗಳೂರು ಬುಲ್ಸ್ ತಂಡದ ಕೊಚ್ ಬಿ.ಸಿ. ರಮೇಶ್, ಹಾಲಿ ಅಧ್ಯಕ್ಷ ಬಿ.ಸಿ. ಸುರೇಶ, ಪ್ರಧಾನ ಕಾರ್ಯದರ್ಶಿ ಗೌರೀಶ್ ಕೆ,ಬಿ.ಡಿ.ಎ.ಕೆ.ಎ. ಅಧ್ಯಕ್ಷ ಶಶಣ್ಣ ಕುಬಕಡ್ಡಿ, ಕಾರ್ಯದರ್ಶಿ ಲಿಂಬಣ್ಣ ಎಚ್ ಮುಕ್ಕಣ್ಣವರ್, ಕೆ.ಆರ್.ಎ.ಕೆ.ಎ ರೆಫರಿ ಬೋರ್ಡ್ ಅಧ್ಯಕ್ಷ ಎಂ. ಷಣ್ಮುಖಂ, ಬಿ.ಡಿ.ಎ.ಕೆ.ಎ. ರೆಫರಿ ಬೋರ್ಡ್ ಅಧ್ಯಕ್ಷ ಎಸ್.ಎಫ್. ಬಾರಡ್ಡಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ಪಂಜಾಬ, ಮಹಾರಾಷ್ಟ್ರ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಸುಮಾರು 8 ರಿಂದ 9 ರಾಜ್ಯಗಳಿಂದ ತಂಡಗಳು ಸೇರಿ 18 ಪುರುಷರ, 16 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ ಪ್ರೋ ಕಬಡ್ಡಿಯಲ್ಲಿ ಆಡಿರುವ ಸುಮಾರು 30 ಜನ ಆಟಗಾರರು ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಎಂದು ತಿಳಿಸಿದರು.
ಬಹುಮಾನಗಳು:ಪುರುಷರ ಪಂದ್ಯಾವಳಿ: ಪ್ರಥಮ ಬಹುಮಾನ ₹2 ಲಕ್ಷ, ದ್ವಿತೀಯ ಬಹುಮಾನ ₹1,50ಲಕ್ಷ, ತೃತೀಯ ₹1 ಲಕ್ಷ, ನಾಲ್ಕನೇ ಬಹುಮಾನ ₹1 ಲಕ್ಷ.
ಮಹಿಳೆಯರ ಪಂದ್ಯಾವಳಿ: ಪ್ರಥಮ ಬಹುಮಾನ ₹2 ಲಕ್ಷ, ದ್ವಿತೀಯ ಬಹುಮಾನ ₹1,50 ಲಕ್ಷ, ತೃತೀಯ ₹1 ಲಕ್ಷ, ನಾಲ್ಕನೇ ಬಹುಮಾನ ₹1 ಲಕ್ಷ ನೀಡಲಾಗುವುದು ಎಂದು ತಿಳಿಸಿದರು.ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೆಲನಾಡ, ನಿರ್ದೇಶಕರಾದ ಹೇಮಾದ್ರಿ ಕೊಪ್ಪಳ, ಎ.ಎಚ್. ಬೀಳಗಿ ಇದ್ದರು.