ಹೊರ ವಲಯದ ಪಟ್ಟಣ ಗ್ರಾಮದ ಧಾಬಾ ಬಳಿ ಘಟನೆ । ಸಂಬಂಧಿಕರಾಗಿದ್ದ ಮೃತರು । ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಢಾಬಾ ಬಳಿ ಮಂಗಳವಾರ ರಾತ್ರಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಘಟನೆಯಲ್ಲಿ ಸಿದ್ಧಾರೂಢ (32), ಜಗದೀಶ್ (25), ರಾಮಚಂದ್ರ (35) ಮೃತರಾಗಿದ್ದಾರೆ. ಈ ಮೂರು ಜನ ಸಂಬಂಧಿಕರು ಎಂದು ಎಂದು ತಿಳಿದು ಬಂದಿದೆ.ಕಲಬುರಗಿ ಹೊರವಲಯದ ಪಟ್ಟಣ ಗ್ರಾಮದ ಬಳಿ ಈ ತ್ರಿವಳಿ ಕೊಲೆ ಘಟನೆ ನಡೆದಿದೆ. ದುಷ್ಕರ್ಮಿಗಳು ಧಾಬಾಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಕೊಲೆಯಾದ ಯುವಕರು ಧಾಭಾದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆಗಮಿಸಿದ ದುಷ್ಕರ್ಮಿಗಳು ಮಾರಕಸ್ತ್ರ ಬಳಸಿ ದಾಳಿ ಮಾಡಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಅಲ್ಲಿಂದ ಪರಾರಿ ಆಗಿದ್ದಾರೆ.ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮು ರಾಠೋಡ್ ಕೊಲೆಗೆ ಪ್ರತಿಕಾರವಾಗಿ ಮೂವರ ಸಂಬಂಧಿಕರ ಹತ್ಯೆ ನಡೆದಿರೋ ಶಂಕೆ ವ್ಯಕ್ತವಾಗಿದೆ.
2024ರಲ್ಲೂ ಇಲ್ಲಿ ನಡೆದಿತ್ತು ಯುವಕನ ಕೊಲೆಕಳೆದ 2024ರ ನವೆಂಬರ್ 12 ರಂದು ಇದೇ ಧಾಬಾ ಬಳಿ ಯುವಕನೊಬ್ಬನ ಕೊಲೆಯಾಗಿತ್ತು. ಎರಡು ಬಿಯರ್ ಬಿಲ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಸೋಮು ಎನ್ನುವಾತ ಧಾಬಾ ಮಾಲೀಕನ ಮೇಲೆ ಹಲ್ಲೆ ಮಾಡಿದ್ದ. ನಂತರ ಹಲ್ಲೆಗೈದು ಸೋಮು ತಾಳಿಕೋಟೆ ಎನ್ನುವಾತನನ್ನು ಧಾಬಾ ಮಾಲೀಕ ಹಾಗೂ ಆತನ ಸಹಚರರು ಸೇರಿ ಅದೇ ಧಾಬಾಕ್ಕೆ ಕರೆಸಿ ಕೊಂದು ಹಾಕಿದ್ದರು.
ಅಲ್ಲದೇ ಶವವನ್ನು ಬೈಕ್‌ಗೆ ಕಟ್ಟಿಕೊಂಡು ಕಲಬುರಗಿ ಹೊರವಲಯದವರೆಗೆ ಎಳೆದುಕೊಂಡು ಹೋಗಿ ಬಿಸಾಡಿದ್ದರು. ಈ ಕೊಲೆ ಪ್ರಕರಣದಲ್ಲಿ ಧಾಬಾ ಮಾಲೀಕ ಸೇರಿ ಹಲವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದರು. ಇತ್ತಿಚಿಗಷ್ಟೆ ಜೈಲಿನಿಂದ ಜಾಮೀನು ಮೇಲೆ ಎಲ್ಲರೂ ಬಿಡುಗಡೆಯಾಗಿದ್ದರು.