ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗ್ರಾಮದ ರೈತ ಮಹದೇವು ಅವರಿಗೆ ಸೇರಿದ ಕೋಣಗಲನ್ನು ಮನೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಸೋಮವಾರ ರಾತ್ರಿ ಗುಡುಗು ಸಿಡಿಲಿನ ಅರ್ಭಟದ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಜೋಡಿ ಕೋಣಗಳು ಸ್ಥಳದಲ್ಲಿಯೇ ಪ್ರಾಣಬಿಟ್ಟಿವೆ.
ಈ ಕೋಣಗಳನ್ನು ಬೂಕನಬೆಟ್ಟ ಜಾತ್ರೆಗೆ ತೆಗೆದುಕೊಂಡು ಹೋಗಿದ್ದಾಗ 2.5 ಲಕ್ಷ ರು.ಗಳಿಗೆ ವ್ಯಾಪಾರಿಗಳು ಕೇಳಿದ್ದರು ಎನ್ನಲಾಗಿದೆ. ಕೋಣಗಳನ್ನು ನೋಡಿದ ಹಲವರು ತಮಗೆ ಖರೀದಿಗೆ ಕೊಡಿ ಎಂದು ಪೀಡಿಸುತ್ತಿದ್ದರು. ಆದರೆ, ರೈತ ಮಹದೇವು ಖುಷಿಗಾಗಿ ಪ್ರೀತಿಯಿಂದ ತಮ್ಮ ಕುಟುಂಬ ಸದಸ್ಯರಂತೆ ಸಾಕಿಕೊಂಡಿದ್ದರು.ಮನೆಯಲ್ಲಿದ್ದ ಕುಟುಂಬದವರು ಸಿಡಿಲಿನಿಂದ ಪಾರಾಗಿದ್ದಾರೆ. ಮೃತ ಕೋಣಗಳನ್ನು ಪಶು ಆಸ್ಪತ್ರೆಯವರು ಪಂಚಾನಾಮೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದರು. ಘಟನಾ ಸ್ಥಳಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿಕೆ.ಆರ್.ಶ್ರೀನಿವಾಸ್ ಆಗಮಿಸಿ ಸೂಕ್ತ ಪರಿಹಾರ ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ನಾಗಮಂಗಲ ತಾಲೂಕು ಟಿ.ಚನ್ನಾಪುರ ಗ್ರಾಮದ (ಪಣಿಗೌಡನಕೊಪ್ಪಲು) ಕರಿಗಿರೀಗೌಡರ 6 ಕುರಿಗಳು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೆ ಕೊನೆಯುಸಿರೆಳೆದಿವೆ. ಘಟನೆ ಸಂಭವಿಸಿದ ಸ್ಥಳದಲ್ಲಿ ಕರಿಗಿರೀಗೌಡ ಸೇರಿದಂತೆ ಮೂವರು ಇದ್ದರು. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.